ಫ್ಯಾಕ್ಟ್‌ಚೆಕ್: 2019 ಹಳೆಯ ಫೋಟೋ ಹಂಚಿ ಕೋಮು ಪ್ರಚೋದನೆಗೆ ಮುಂದಾದ ನ್ಯೂಸ್‌24

ಹರಿಯಾಣದ ಗುರುಗ್ರಾಮ್ ಸ್ಪೆಕ್ಟರ್‌ 69ರಲ್ಲಿ ಡಿಸೆಂಬರ್ 23, 2022 ಶುಕ್ರವಾರ ಮುಸ್ಲಿಮರು ಬಹಿರಂಗವಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದ ವೇಳೆ ಬಜರಂಗದಳದ ಕಾರ್ಯಕರ್ತರು ಅಡ್ಡಿಪಡಿಸಿ ನಮಾಜ್ ಮಾಡುವುದನ್ನು ನಿಲ್ಲಿಸಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ನ್ಯೂಸ್‌ 24 ಹಿಂದಿ ಎಂಬ ಡಿಜಿಟಲ್ ಮಾಧ್ಯಮ ಸೇರಿದಂತೆ ಹಲವರು ಪೋಸ್ಟ್‌ನೊಂದಿಗೆ ಫೋಟೊವನ್ನು ಹಂಚಿಕೊಂಡಿವೆ.

ನ್ಯೂಸ್‌ 24 ಎಂಬ ನ್ಯೂಸ್‌ ಚಾನೆಲ್ ಹಂಚಿಕೊಂಡಿರುವ ಫೋಟೋ ಬಗ್ಗೆ ಹಲವರು ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದ್ದು, ಫೋಟೋ ಘಟನೆಗೆ ಸಂಬಂಧಿಸಿದೆಯೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್: 

24 ನ್ಯೂಸ್‌ ಹಿಂದಿ ತನ್ನ ಟ್ವಿಟರ್‌ನಲ್ಲಿ ಘಟನೆಯೊಂದಿಗೆ ಹಂಚಿಕೊಂಡಿರುವ ಫೋಟೋ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿದ್ದು, ವೈರಲ್ ಫೋಟೊದಲ್ಲಿ ಫ್ಲೈ ಓವರ್‌ ಮೇಲೆ ಮುಸ್ಲಿಂ ಸಮುದಾಯದ ಜನರ ದೊಡ್ಡ ಸಮೂಹ ಪ್ರಾರ್ಥನೆ ಸಲ್ಲಿಸುತ್ತಿರುವುದನ್ನು ಕಾಣಬಹುದು. ವೈರಲ್ ಫೋಟೊವನ್ನು ನಾವು ಗೂಗಲ್ ಸರ್ಚ್ ಮಾಡಿದಾಗ, ವೈರಲ್ ಫೋಟೋ  ಹರಿಯಾಣದ ಗುರ್‌ಗ್ರಾಮ್‌ ಘಟನೆಗೆ ಸಂಬಂಧಿಸಿಲ್ಲ ಎಂದು ತಿಳಿದುಬಂದಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಫೋಟೊ 2019ರ ಘಟನೆಗೆ ಸಂಬಂಧಿಸಿದ್ದು ಎಂಬ ಮಾಹಿತಿ ಲಭ್ಯವಾಗಿದೆ. ಲಭ್ಯವಾದ ಮಾಹಿತಿಯ ಪ್ರಕಾರ ಪ್ರತಿ ಮಂಗಳವಾರ ಮತ್ತು ಶನಿವಾರದಂದು ರಸ್ತೆಗಳಲ್ಲಿ ಹನುಮಾನ್ ಚಾಲೀಸಾ ಪಠಣವನ್ನು ಒಳಗೊಂಡ ಹಿಂದೂ ಗುಂಪುಗಳು ಪ್ರತಿಭಟನೆಯನ್ನು ಪ್ರಾರಂಭಿಸಿದ ನಂತರ ಅಲಿಗಢ ಆಡಳಿತವು ನಮಾಜ್ ಮತ್ತು ಆರತಿಯಂತಹ ರಸ್ತೆಗಳಲ್ಲಿ ಧಾರ್ಮಿಕ ಚಟುವಟಿಕೆಗಳನ್ನು ನಿರ್ವಹಿಸುವುದನ್ನು ನಿಷೇಧಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

Image

 

ವೈರಲ್ ಪೋಸ್ಟ್‌ಗೆ ಸಲ್ಮಾನ್‌ ಎಂಬುವವರು ಪ್ರತಿಕ್ರಿಯೆ ನೀಡಿದ್ದು “ನಮಾಜ್ ನಡೆಯುತ್ತಿದ್ದ ಸೆಕ್ಟರ್ 69 ರಲ್ಲಿ ಫ್ಲೈಓವರ್ ಇದೆಯೇ? ಮಾರಾಟವಾದ ಎಲ್ಲರೂ ನಿಷ್ಪ್ರಯೋಜಕರು ಎಂದು ಸಾಭೀತಾಗುತ್ತಿದೆ. ಪಕ್ಷಪಾತವಿಲ್ಲದ ಪತ್ರಿಕೋದ್ಯಮವನ್ನು ನಿರೀಕ್ಷಿಸುವುದು ಹಾಸ್ಯಾಸ್ಪದ” ಎಂದು ಟ್ವೀಟ್ ಮಾಡಿದ್ದಾರೆ.

ಸಲ್ಮಾನ್‌ ಎಂಬುವವರು ಪೋಸ್ಟ್‌ಗೆ ಸಂಬಂಧಿಸಿದಂತೆ ರೀಟ್ವೀಟ್ ಮಾಡಿದ್ದು, ಅದರಲ್ಲಿ “ದ್ವೇಷ ಹರಡುವ ಸಂಬಂಧವಿಲ್ಲದ ಫೋಟೋವನ್ನು ಹಂಚುವ ಬದಲು ಘಟನೆಗೆ ಸಂಬಂಧಿಸಿದ ಫೋಟೋವನ್ನು ಹಾಕಿ ಮತ್ತು ವಸ್ತು ಸ್ಥಿತಿಯನ್ನು ಜನರಿಗೆ ತಿಳಿಸಿ” ಎಂದು ಟ್ವೀಟ್ ಮಾಡಿದ್ದಾರೆ.

ಘಟನೆಗೆ ಸಂಬಂಧಿಸಿದ ನೈಜ ಚಿತ್ರ

ಬಲಪಂಥೀಯ ಸಂಘಟನೆಯಾದ ಬಜರಂಗದಳ ಸದಸ್ಯರು ಶುಕ್ರವಾರ ಗುರುಗ್ರಾಮ್‌ನ ಸೆಕ್ಟರ್ 69 ರಲ್ಲಿ ನಮಾಜ್‌ಗೆ ಅಡ್ಡಿಪಡಿಸಿದ್ದಾರೆ ಎಂದು ಸ್ಕ್ರೋಲ್ ವರದಿ ಮಾಡಿದೆ. ಲೈವ್ ಹಿಂದೂಸ್ತಾನ್ ಎಂಬ ಟ್ವಿಟರ್ ಅಕೌಂಟ್‌ನಿಂದ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಸಂಘಟನೆಯ ಸದಸ್ಯರೊಬ್ಬರು ಮುಸ್ಲಿಂ ಆರಾಧಕರಿಗೆ ತೆರೆದ ಸ್ಥಳಗಳಲ್ಲಿ ಪ್ರಾರ್ಥನೆ ಮಾಡಬೇಡಿ ಎಂದು ಹೇಳುತ್ತಿರುವುದು ಕಂಡುಬರುತ್ತದೆ.

ಘಟನೆಗೆ ಸಂಬಂಧಿಸಿದ ನೈಜ ಚಿತ್ರ
ಘಟನೆಗೆ ಸಂಬಂಧಿಸಿದ ನೈಜ ಚಿತ್ರ

ಗುರುಗ್ರಾಮದಲ್ಲಿ ಬಯಲಿನಲ್ಲಿ ನಮಾಜ್ ಮಾಡುವ ವಿವಾದ ಮತ್ತೆ ಬಿಸಿಯಾಗಿದೆ. ಶುಕ್ರವಾರ ಮಧ್ಯಾಹ್ನ ಪ್ರಾರ್ಥನೆಗೆಂದು ಬಂದಿದ್ದ ಮುಸ್ಲಿಂ ಸಮುದಾಯದ ಜನರನ್ನು ಬಜರಂಗದಳದ ಕಾರ್ಯಕರ್ತರು ತಡೆದಿದ್ದು, ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು ಎಂದು ಹಿಂದೂಸ್ಥಾನ್ ನ್ಯೂನ್ ಟ್ವೀಟ್ ನಲ್ಲಿ ವಿಡಿಯೋವನ್ನು ಹಂಚಿಕೊಂಡಿದೆ.

ಡಿಸೆಂಬರ್ 2021 ರಲ್ಲಿ, ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ತೆರೆದ ಸ್ಥಳಗಳಲ್ಲಿ ನಮಾಜ್ ನೀಡುವುದನ್ನು ಸಹಿಸುವುದಿಲ್ಲ ಮತ್ತು ಗುರುಗ್ರಾಮ್‌ನಲ್ಲಿ ಮುಸ್ಲಿಮರಿಗೆ ಪ್ರಾರ್ಥನೆ ನಡೆಸಲು ಮೀಸಲಿಟ್ಟ ಕೆಲವು ಸ್ಥಳಗಳನ್ನು ಹಿಂಪಡೆಯಲಾಗಿದೆ ಎಂದು ಹೇಳಿದ್ದರು.

ಒಟ್ಟಾರೆಯಾಗಿ ಹೇಳುವುದಾದರೆ, ನ್ಯೂಸ್‌ 24 ಹಿಂದಿ ಡಿಜಿಟಲ್ ಮೀಡಿಯಾ, ಹರಿಯಾಣಾದ ಗುರುಗ್ರಾಮ್‌ ನಲ್ಲಿ ಶುಕ್ರವಾರ ತೆರೆದ ಸ್ಥಳಗಳಲ್ಲಿ ನಮಾಜ್ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ 2019ರಲ್ಲಿ ಆಲಿಘರ್‌ನಲ್ಲಿ ನಡೆದ ಫ್ಲೈ ಓವರ ಮೇಲೆ ಪ್ರಾರ್ಥನೆ ಸಲ್ಲಿಸುತ್ತಿರುವ ಫೋಟೋವನ್ನು ತಪ್ಪಾಗಿ ಹಂಚಿಕೊಂಡಿದೆ. ಆ ಮೂಲಕ ಸಮಾಜದಲ್ಲಿ ಮುಸ್ಲಿಂ ಸಮುದಾಯದ ಮೇಲೆ ದ್ವೇಷ ಮನೋಭಾವ ಬೆಳೆಯುವಂತೆ ಮಾಡುತ್ತಿದೆ ಎಂದು ಸಾಮನಾಜಿಕ ಮಾಧ್ಯಮಗಳಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ಫೋಟೋ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ರಾಹುಲ್ ಗಾಂಧಿ ಕಾಂಗ್ರೆಸ್ ಕಾರ್ಯಕರ್ತನ ಕೈ ಮುರಿಯಲು ಮುಂದಾಗಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights