ಫ್ಯಾಕ್ಟ್‌ಚೆಕ್: ರಾಹುಲ್ ಗಾಂಧಿ ಕಾಂಗ್ರೆಸ್ ಕಾರ್ಯಕರ್ತನ ಕೈ ಮುರಿಯಲು ಮುಂದಾಗಿದ್ದು ನಿಜವೇ?

ಭಾರತ್ ಜೋಡೋ ಯಾತ್ರೆ ಇದೀಗ ರಾಜಸ್ಥಾನವನ್ನು ದಾಟಿ ಹರಿಯಾಣವನ್ನು ಪ್ರವೇಶಿಸಿದೆ. ಭಾರತ್ ಜೋಡೋ ಯಾತ್ರೆಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗತ್ತಿದೆ. ಭಾರತ್ ಜೋಡೊ ಯಾತ್ರೆಯ ಸಂದರ್ಭದಲ್ಲಿ ನಡೆದ ಬಹಿರಂಗ ಸಭೆಯ ಮೇದಿಕೆಯ ಮೇಲೆ ಸೆಲ್ಫಿ ತೆಗೆದುಕೊಳ್ಳಲು ಬಂದ ವ್ಯಕ್ತಿಯೊಬ್ಬರ ಕೈಯನ್ನು ಮುರಿಯಲು ರಾಹುಲ್ ಗಾಂಧಿ ಮುಂದಾಗಿದ್ದಾರೆ ಎಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಸಂವಾದ ಎಂಬ ಬಲಪಂಥೀಯ ಮತ್ತು BJP ಬೆಂಬಲಿತ ಫೇಸ್‌ಬುಕ್ ಪೇಜ್‌ವೊಂದು ವಿಡಿಯೋವನ್ನು “ಕೈ ಕಾರ್ಯಕರ್ತನ ಕೈ ಮುರಿಯಲು ಮುಂದಾದ ಕೈ ನಾಯಕ” ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ ಮಾಡಿದ್ದು ಭಾರತ್ ಜೋಡೋ ಯಾತ್ರೆಯ ನಡುವೆಯೇ ಹಾತ್ ತೋಡೊ ಜಾತ್ರೆಯಲ್ಲಿ ಭಾಗಿಯಾಗುವಂತೆ ಮಾಡಿದ್ದು ಕುಡಿತವೇ ? ಎಂದು ಪ್ರಶ್ನಿಸುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ವಿಡಿಯೋದಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಪರಿಶೀಲಿಸಲು ಟ್ವಿಟರ್‌ನಲ್ಲಿ ಸರ್ಚ್ ಮಾಡಿದಾಗ, ಟ್ವಿಟರ್‌ನಲ್ಲಿ ವಿಡಿಯೋಗೆ Rubika Liyaquat ರವರು ನೀಡಿರುವ ರೀಟ್ವೀಟ್ ಲಭ್ಯವಾಗಿದೆ. ಅದರ ಪ್ರಕಾರ ರಾಹುಲ್ ಆಂಧಿಯ ಭಾರತ್ ಜೋಡೋ ಯಾತ್ರೆಯಲ್ಲಿ  ಮಾಧ್ಯಮದವರು ಯಾತ್ರೆಯ ಭಾಗವಾಗಿ ನಡೆದ ಕಾರ್ಯಕ್ರಮದ ವೇದಿಕೆ ಮೇಲಿದ್ದ ಕಾಂಗ್ರೆಸ್‌ ನಾಯಕರ ಫೋಟೋ ಸೆರೆಹಿಡಿಯಲು ಬಂದಾಗ ಈ ಘಟನೆ ನಡೆದಿದೆ ಎಂದು ವಿವರಿಸಿದ್ದಾರೆ.

ಅವರ ರೀಟ್ವಿಟ್ ಪ್ರಕಾರ, ವೇದಿಕೆ ಕಾರ್ಯಕ್ರಮದ ಚಿತ್ರವನ್ನು ಪತ್ರಕರ್ತರು ಸೆರೆಹಿಡಿಯಲು ಮುಂದಾದಾಗ, ಅವರ ಫ್ರೇಮ್‌ಗೆ ಅಡಚಣೆ ಆಗುವಂತೆ ಸೆಲ್ಫಿ ತೆಗೆಯಲು ಮುಂದಾಗುತ್ತಿದ್ದ ವ್ಯಕ್ತಿಯನ್ನು ರಾಹುಲ್ ಗಾಂಧಿ ತಡೆದಿದ್ದಾರೆ. ಈ ಸಂದರ್ಭದಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವ್ಯಕ್ತಿಯ ಕೈಯಿಂದ ಸೆಲ್ ಫೋನ್ ಕಸಿದುಕೊಳ್ಳಲು ಪ್ರಯತ್ನಿಸುತ್ತಾರೆ. ಸೆಲ್ಫಿ ತೆಗೆದುಕೊಳ್ಳಲು ಮುಂದಾಗುವ ವ್ಯಕ್ತಿಯ ಫೋನ್ ರಾಹುಲ್ ಗಾಂಧಿಯ ಬಲ ಭಾಗದ ಅಂದರೆ ಫೋಟೋಗ್ರಾಫರ್‌ನ ಎಡಭಾಗದಲ್ಲಿರುವ ಫ್ರೇಮ್ ಅಡಚಣೆ ಮಾಡುವಂತೆ ಇತ್ತು. ಹಾಗಾಗಿ ಸೆಲ್ಫಿ ತೆಗೆಯುವವನನ್ನು ತಡೆಯುತ್ತಾರೆ ಎಂದು ತಿಳಿಸಿದ್ದಾರೆ.

ರುಬಿಕ ಲಿಯಾಖತ್ ಅವರ ರಿಟ್ವಿಟ್‌ಗೆ  ಹಾರ್ಧಿಕ್ ಸಿನ್ಹಾ ಎಂಬುವವರು ಪ್ರತಿಕ್ರಿಯಿಸಿದ್ದು, “ನಿಮ್ಮ ಅಭಿಪ್ರಾಯವನ್ನು ಸಂಪೂರ್ಣವಾಗಿ ಒಪ್ಪಬಹುದು. ಆದರೆ ರಾಹುಲ್ ಗಾಂಧಿ ಆ ವ್ಯಕ್ತಿಗೆ ಹಾಗೆ ಮಾಡಬೇಡ ಎಂದು ತಿಳಿಸಲು ಹಲವು ಮಾರ್ಗಗಳಿದ್ದವು, ಅದನ್ನು ಮಾಡಬೇಕೆ ವಿನಃ ತಮ್ಮ ಅನುಯಾಯಿಗಳ ಅಥವಾ ಪಕ್ಷದ ಸದಸ್ಯರೊಂದಿಗೆ ಹೀಗೆ ವರ್ತಿಸುವುದು ಸರಿಯಾದ ನಡವಳಿಕೆಯೇ? ಅಸಭ್ಯವಾಗಿ ವರ್ತಿಸುವ ಬದಲು ತಳ್ಮೆಯಿಂದ ಹೇಳಬಹುದಿತ್ತು ಎಂದು ಹಾರ್ಧಿಕ್ ಸಿನ್ಹಾ ಪ್ರತಿಕ್ರಿಯಿಸಿದ್ದಾರೆ.

ಒಟ್ಟಾರೆಆಗಿ ಹೇಳುವುದಾದರೆ, ಸಂವಾದ ಎಂಬ ಫೇಸ್‌ಬುಕ್ ಪೇಜ್‌ ಮೂಲಕ ಹಂಚಿಕೊಂಡಿರುವ ವಿಡಿಯೋದಲ್ಲಿ ರಾಹುಲ್ ಗಾಂಧಿ ಪಾನಮತ್ತರಾಗಿ, ಕೈ ಕಾರ್ಯಕರ್ತನ ಕೈ ಮುರಿಯಲು ಮುಂದಾಗಿದ್ದಾರೆ ಎಂದು ಸುಳ್ಳು ಮತ್ತು ತಪ್ಪಾಗಿ ಹಂಚಿಕೊಳ್ಳಲಾಗಿದೆ. ವಾಸ್ತವವಾಗಿ ರಾಹುಲ್ ಗಾಂಧಿ ಸೆಲ್ಫಿ ತೆಗೆದುಕೊಳ್ಳುವ ತಮ್ಮ ಪಕ್ಷದ ಕಾರ್ಯಕರ್ತನನ್ನು ತಡೆದಿದ್ದಾರೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights