ಫ್ಯಾಕ್ಟ್ಚೆಕ್: ಹೊಸ ವರ್ಷದಿಂದ ಮತ್ತೆ ₹1000 ಮುಖಬೆಲೆಯ ನೋಟುಗಳು ಚಲಾವಣೆಗೆ ಬರುವುದು ನಿಜವೇ?
2023 ಜನವರಿ 1, ಹೊಸ ವರ್ಷದಿಂದ ₹1000 ಮುಖಬೆಲೆಯ ನೋಟುಗಳು ಮತ್ತೆ ಚಲಾವಣೆಗೆ ಬರಲಿವೆ ಎಂಬ ಸುದ್ದಿಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. “ಕೇಂದ್ರ ಸರ್ಕಾರವು ₹ 2000 ಮುಖಬೆಲೆಯ ನೋಟುಗಳನ್ನು ನಿಷೇಧಿಸಲು ನಿರ್ಧರಿಸಿದೆ ಮತ್ತು ₹1000 ಮುಖಬೆಲೆಯ ನೋಟುಗಳು ಜನವರಿ 1, 2023 ರಿಂದ ಚಾಲ್ತಿಗೆ ಬರುವಂತೆ ಕೈಗೊಳ್ಳಲಿದೆ ಎಂದು ಪ್ರತಿಪಾದಿಸಿ ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದೆ. ಇತ್ತೀಚಿನ ದಿನಗಳಲ್ಲಿ ಚಲಾವಣೆ ಕಡಿಮೆಯಾಗಿರುವ ₹2,000 ಮುಖಬೆಲೆಯ ನೋಟುಗಳನ್ನು ಬ್ಯಾಂಕ್ಗಳು ವಾಪಸ್ ಪಡೆಯಲಿವೆ ಎಂಬ ಸುದ್ದಿಯೂ ಚರ್ಚೆಯಲ್ಲಿದೆ. ಹಾಗಿದ್ದರೆ ಈ ಸುದ್ದಿ ನಿಜವೇ ಎಂದು ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್ಚೆಕ್:
“ಜನವರಿ 1 ರಿಂದ ₹1000 ಮುಖಬೆಲೆಯ ನೋಟುಗಳು ಬರುತ್ತವೆ ಮತ್ತು 2000 ರೂಪಾಯಿ ನೋಟುಗಳು ಬ್ಯಾಂಕ್ಗಳಿಗೆ ಹಿಂತಿರುಗುತ್ತವೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ವೀಡಿಯೊದಲ್ಲಿ ಪ್ರಸಾರವಾಗುತ್ತಿರುವ ಪೋಸ್ಟ್ ನಕಲಿಯಾಗಿದೆ ಎಂದು PIB ಫ್ಯಾಕ್ಟ್ಚೆಕ್ ತಂಡ ಹೇಳಿದೆ. ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ(PIB) ಫ್ಯಾಕ್ಟ್ ಚೆಕ್, ಸುಮಾರು ₹1000 ಮುಖಬೆಲೆಯ ನೋಟಿನ ನಕಲಿ ಸುದ್ದಿಗಳ ವಿರುದ್ಧ ಜನರನ್ನು ಎಚ್ಚರಿಸಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಸುದ್ದಿ ಸುಳ್ಳು, ದಯವಿಟ್ಟು ಇಂತಹ ತಪ್ಪು ಸಂದೇಶವನ್ನು ಫಾರ್ವರ್ಡ್ ಮಾಡಬೇಡಿ ಎಂದು PIB ಟ್ವೀಟ್ ಮಾಡಿದ್ದು, ಕೇಂದ್ರ ಸರ್ಕಾರ 2000 ರೂಪಾಯಿ ನೋಟುಗಳನ್ನು ಬ್ಯಾನ್ ಮಾಡಲು ನಿರ್ಧರಿಸಿಲ್ಲ ಎಂದು ತಿಳಿಸಿದೆ.
सोशल मीडिया पर वायरल वीडियों में दावा किया जा रहा कि 1 जनवरी से 1 हजार का नया नोट आने वाले हैं और 2 हजार के नोट बैंकों में वापस लौट जाएंगे। #PIBFactCheck
▶️ये दावा फर्जी है।
▶️कृपया ऐसे भ्रामक मैसेज फॉरवर्ड ना करें। pic.twitter.com/rBdY2ZpmM4
— PIB Fact Check (@PIBFactCheck) December 16, 2022
ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಮತ್ತೆ ಪರಿಚಯಿಸುವ ಉದ್ದೇಶ ಕೇಂದ್ರ ಸರ್ಕಾರದ ಮುಂದೆ ಇಲ್ಲ, ಹಾಗೆಯೇ, ₹2,000 ಮುಖಬೆಲೆಯ ನೋಟನ್ನು ರದ್ದುಪಡಿಸುವ ಉದ್ದೇಶವೂ ಇಲ್ಲ ಎಂದು ಪಿಐಬಿ ತಿಳಿಸಿದೆ. ₹2,000 ಮುಖಬೆಲೆಯ ನೋಟುಗಳ ಮುದ್ರಣವು ಮೂರು ವರ್ಷಗಳಿಂದ ಸ್ಥಗಿತವಾಗಿದೆ ಎಂದು ಆರ್ಟಿಐನಡಿ ಮಾಹಿತಿ ದೊರಕಿತ್ತು. 2018–19ರ ಬಳಿಕ ₹2,000ದ ನೋಟುಗಳ ಮುದ್ರಣಕ್ಕೆ ಬೇಡಿಕೆ ಸಲ್ಲಿಕೆಯಾಗಿಲ್ಲ ಎಂದು ಕೇಂದ್ರ ಸರ್ಕಾರವು ಸದನಕ್ಕೆ ಮಾಹಿತಿ ನೀಡಿತ್ತು.
2016ರಲ್ಲಿ ₹1,000 ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದು ಮಾಡಿದ್ದ ಸರ್ಕಾರ
2016 ರಲ್ಲಿ ನೋಟು ಅಮಾನ್ಯೀಕರಣದ ನಂತರ, ₹1000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ತೆಗೆದುಹಾಕಲಾಯಿತು. ಕಪ್ಪುಹಣಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಂದು ಪ್ರಧಾನ ಮಂತ್ರಿಗಳು ದೇಶದ ಜನತೆಯ ಮುಂದೆ ವಾಗ್ದಾನ ನೀಡಿದ್ದರು. ಅದೇ ವರ್ಷ ಸರ್ಕಾರವು ₹ 2000 ಮುಖಬೆಲೆಯ ಹೊಸ ನೋಟುಗಳನ್ನು ಮಾರುಕಟ್ಟೆಗೆ ಪರಿಚಯಿಸಿತ್ತು.
ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವಂತೆ ₹1000 ಮುಖಬೆಲೆಯ ನೋಟುಗಳನ್ನು ಮತ್ತೆ ಚಲಾವಣೆಗೆ ತರುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಹಾಗೂ ಇದು ಸುಳ್ಳು ಸುದ್ದಿಯಾಗಿದ್ದು ಯಾವ ಕಾರಣಕ್ಕೂ ಇದನ್ನು ನಂಬಿ ಸುದ್ದಿಯನ್ನು ಹಂಚಿಕೊಳ್ಳದಂತೆ PIB ಎಚ್ಚರಿಸಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್ಚೆಕ್: ಪ್ರಧಾನಿ ಮೋದಿ ಮಹಿಳೆಯರ ಉಡುಪು ಧರಿಸಿದ್ದರೆ?

