ಫ್ಯಾಕ್ಟ್‌ಚೆಕ್: ಮಾಜಿ ಸಚಿವರಿಂದ ರಾಹುಲ್ ಗಾಂಧಿ ‘ಶೂ ಲೇಸ್’ ಕಟ್ಟಿಸಿಕೊಂಡಿದ್ದು ನಿಜವೇ?

ಭಾರತ್ ಜೋಡೋ ಯಾತ್ರೆ ಇದೀಗ ರಾಜಸ್ಥಾನವನ್ನು ದಾಟಿ ಹರಿಯಾಣವನ್ನು ಪ್ರವೇಶಿಸಿದೆ. ಹರಿಯಾಣದ ವಿರೋಧ ಪಕ್ಷದ ನಾಯಕ ಭೂಪಿಂದರ್ ಸಿಂಗ್ ಹೂಡಾ, ರಣದೀಪ್ ಸಿಂಗ್ ಸುರ್ಜೆವಾಲಾ, ಕುಮಾರಿ ಸೆಲ್ಜಾ ಮತ್ತು ದೀಪೇಂದರ್ ಸಿಂಗ್ ಹೂಡಾ ಅವರನ್ನು ಸ್ವಾಗತಿಸಿದ್ದಾರೆ.  ಯಾತ್ರೆ  ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಮಾಜಿ ಸಚಿವರೊಬ್ಬರ ಕೈಯಿಂದ ತಮ್ಮ ಶೂ ದಾರವನ್ನು ಕಟ್ಟಿಸಿಕೊಂಡಿದ್ದಾರೆ ಎಂಬ ಪೋಸ್ಟ್‌ವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

“ಮಾಜಿ ಕೇಂದ್ರ ಸಚಿವ ಭನ್ವರ್ ಜಿತೇಂದ್ರ ಸಿಂಗ್ ಅವರು ತಮಗಿಂತ ಕಿರಿಯರಾದ ರಾಹುಲ್ ಗಾಂಧಿ ಅವರ ಶೂ ಲೇಸ್ ಕಟ್ಟುವ ಮೂಲಕ ತನ್ನ ನಿಷ್ಠೆ ಇಟಲಿ ಕುಟುಂಬದ ಮೇಲಿದೆ ಎಂಬುದನ್ನು ಸಾಬೀತು ಪಡಿಸಿದ್ದಾರೆ” ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಮಾಜಿ ಸಚಿವರು ರಾಗಾ ಅವರ ಶೂ ಕಟ್ಟುತ್ತಿರುವಂತೆ ಕಾಣಿಸಿಕೊಂಡಿರುವ ವೀಡಿಯೋವನ್ನು ಮಾಳವಿಯಾ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಮಾಜಿ ಕೇಂದ್ರ ಸಚಿವ ಭನ್ವರ್ ಜಿತೇಂದ್ರ ಸಿಂಗ್ ಅವರು ರಾಹುಲ್ ಗಾಂಧಿ ಅವರ ಶೂ ಲೇಸ್ ಕಟ್ಟಲು ಮಂಡಿಯೂರಿದ್ದಾರೆ. ಆದರೆ ದುರಹಂಕಾರಿ, ದಂಗೆಕೋರ ತನ್ನ ಕೆಲಸ ತಾನು ಮಾಡದೇ ಮಂಡಿಯೂರಿದ ಮಾಜಿ ಸಚಿವರ ಬೆನ್ನು ತಟ್ಟಿದ್ದಾರೆ ಎಂದು ಕಿಡಿ ಕಾರಿದ್ದಾರೆ

ರಾಹುಲ್ ಗಾಂಧಿ ಅವರು ಈ ಕೂಡಲೇ ಭನ್ವರ್ ಜಿತೇಂದ್ರ ಸಿಂಗ್ ಅವರಿಗೆ ಕ್ಷಮೆ ಕೋರಬೇಕು. ಇಲ್ಲದೇ ಹೋದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಒತ್ತಾಯಿಸಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯಂತೆ ರಾಹುಲ್ ತನ್ನ ಶೂ ಲೇಸ್‌ಅನ್ನು ಮಾಜಿ ಕೇಂದ್ರ ಸಚಿವರಿಂದ ಕಟ್ಟಿಸಿಕೊಂಡಿದ್ದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ BJP ನಾಯಕರು ಆರೋಪಿಸಿದಂತೆ, ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ವೇಳೆ ತನ್ನ ಶೂ ದಾರವನ್ನು ಮಾಜಿ ಕೇಂದ್ರ ಸಚಿವ ಭನ್ವರ್ ಜಿತೇಂದ್ರ ಸಿಂಗ್ ಅವರಿಂದ ಕಟ್ಟಿಸಿಕೊಂಡಿದ್ದಾರೆಯೇ? ಎಂದು ಪರಿಶೀಲಿಸಿದಾಗ ಭನ್ವರ್ ಜಿತೇಂದ್ರ ಸಿಂಗ್ ಅವರ ಟ್ವೀಟ್‌ ಲಭ್ಯವಾಗಿದೆ.

ಈ ಬಗ್ಗೆ ಬಳಿಕ ಪ್ರತಿಕ್ರಿಯೆ ನೀಡಿರುವ ಅಹಿರ್ವಾರ್ ಅವರು, ತಾವು ತಮ್ಮ ಸ್ವಂತ ಶೂ ಲೇಸ್ ಅನ್ನು ಕಟ್ಟುತ್ತಿದ್ದುದಾಗಿ ಸ್ಪಷ್ಟಪಡಿಸಿದ್ದಾರೆ. ಮಾಳವಿಯಾ ವಿರುದ್ಧ ಕಿಡಿ ಕಾರಿದ ಅವರು, ನಿಮ್ಮ ಟ್ವೀಟ್ ಸಂಪೂರ್ಣ ಸುಳ್ಳಾಗಿದೆ ಹಾಗೂ ಮಾನಹಾನಿಕರವಾಗಿದೆ. ವಾಸ್ತವವಾಗಿ ನನ್ನ ಕೋರಿಕೆಯ ಮೇರೆಗೆ ರಾಹುಲ್ ಗಾಂಧಿಯವರು ಯಾತ್ರೆಯಲ್ಲಿ ನಡೆಯುತ್ತಿದ್ದುದನ್ನು ನಿಲ್ಲಿಸಿ, ನನ್ನ ಶೂ ಲೇಸ್‌ಗಳನ್ನು ಕಟ್ಟಲು ಅನುಮತಿ ನೀಡಿದ್ದರು ಎಂದು ಹೇಳಿದ್ದಾರೆ.

ಸುಳ್ಳು ಮಾಹಿತಿಯನ್ನು ಹರಡಿರುವ ನಿಮ್ಮ ಟ್ವೀಟ್ ಅನ್ನು ಅಳಿಸಿ ಹಾಗೂ ಕ್ಷಮೆಯಾಚಿಸಿ. ಇಲ್ಲದೇ ಹೋದಲ್ಲಿ ನೀವು ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಜಿತೇಂದ್ರ ಸಿಂಗ್ ಅವರು ಮಾಳವಿಯಾಗೆ ಎಚ್ಚರಿಕೆ ನೀಡಿದ್ದಾರೆ.

https://twitter.com/iPrashantSingh/status/1605578033603129344

ಒಟ್ಟಾರೆಯಾಗಿ ಹೇಳುವುದಾದರೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆಯಲ್ಲಿ ಮಾಜಿ ಕೇಂದ್ರ ಸಚಿವ ಭನ್ವರ್ ಜಿತೇಂದ್ರ ಸಿಂಗ್ ಅವರಿಂದ ತಮ್ಮ ಶೂ ಲೇಸ್‌ ಅನ್ನು ಕಟ್ಟಿಸಿಕೊಂಡಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆದರೆ ಜಿತೇಂದ್ರ ಸಿಂಗ್ ಅವರು ರಾಹುಲ್ ಗಾಂಧಿಯವರ ಶೂ ಲೇಸ್‌ ಕಟ್ಟಿಲ್ಲ ತನ್ನದೇ ಶೂ ಲೇಸ್‌ ಕಟ್ಟಿಕೊಂಡ ಜಿತೇಂದ್ರ ಸಿಂಗ್ ವಿಡಿಯೋವನ್ನು BJP ಐಟಿ ಸೆಲ್ ತಪ್ಪಾಗಿ ಹಂಚಿಕೊಂಡಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಮೋದಿ ಅವರ ಫೋಟೊ ಕ್ಲಿಕ್ಕಿಸುವಾಗ ಸಮಯ 4:20 ಆಗಿತ್ತೆ? ಈ ಸ್ಟೋರಿ ಓದಿ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights