ಫ್ಯಾಕ್ಟ್‌ಚೆಕ್: ಪ್ರಧಾನಿ ಮೋದಿ ಮಹಿಳೆಯರ ಉಡುಪು ಧರಿಸಿದ್ದರೆ?
ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯರ ಉಡುಪು ಧರಿಸಿರುವ ಫೋಟೋ ಎಂಬ ಪೋಸ್ಟ್ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಶೇರ್ ಮಾಡುತ್ತಿದ್ದಾರೆ. ಆ ಪೋಸ್ಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಹಿಳೆಯ ಉಡುಪನ್ನು ಧರಿಸಿದ್ದಾರೆ ಎಂದು ಪ್ರತಿಪಾದಿಸಿ ಮೋದಿ ಫೋಟೊದೊಂದಿಗೆ ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್‌ನ ಮಹಿಳೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್:
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪಿಎಂ ಮೋದಿ ಅವರ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಸರ್ಚ್ ಮಾಡಿದಾಗ, 18 ಡಿಸೆಂಬರ್ 2022ರಂದು ನಾರ್ತ್ ಈಸ್ಟರ್ನ್ ಕೌನ್ಸಿಲ್(NEC)ನ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 2450 ಕೋಟಿ ಮೌಲ್ಯದ ವಿವಿಧ ಪ್ರಾಜೆಕ್ಟ್‌ಗಳಿಗೆ ಭಾನುವಾರ ಚಾಲನೆ ನೀಡಿದ್ದಾರೆ. ಶಿಲ್ಲಾಂಗ್‌ನ ಸಾಂಪ್ರದಾಯಿಕ ಉಡುಗೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ವಿಶೇಷವಾಗಿತ್ತು ಎಂಬ ಸುದ್ದಿ ವರದಿಗಳು ಲಭ್ಯವಾಗಿದೆ.
In the last eight years, Northeast has witnessed transformation in governance and work culture.
Here are a few glimpses from Meghalaya where PM @narendramodi launched multiple development initiatives. https://t.co/Ls5lRYT422 pic.twitter.com/Gaz2UCBFh9
— narendramodi_in (@narendramodi_in) December 18, 2022
ಇದು ಪ್ರಧಾನಿ ಮೋದಿ ಇತ್ತೀಚೆಗೆ ಮೇಘಾಲಯಕ್ಕೆ ಭೇಟಿ ನೀಡಿದಾಗ ತೆಗೆದ ಫೋಟೋ ಎಂದು ತಿಳಿದುಬಂದಿದೆ. ಫೋಟೋದಲ್ಲಿ ಪ್ರಧಾನಿ ಮೋದಿ ಮೇಘಾಲಯಕ್ಕೆ ಸಂಬಂಧಿಸಿದ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸಿದ್ದಾರೆ ಎಂದು ‘ANI’ ವರದಿ ಮಾಡಿದೆ. ಪ್ರಧಾನಿ ಮೋದಿಯವರು ಮೇಘಾಲಯದ ಸಾಂಪ್ರದಾಯಿಕ ಉಡುಪನ್ನು ಧರಿಸುತ್ತಿರುವುದು ಇದೇ ಮೊದಲಲ್ಲ, ಅವರು ಇದೇ ರೀತಿಯ ಬಟ್ಟೆಗಳನ್ನು ಧರಿಸಿರುವ ಇತರೆ ಚಿತ್ರಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಆದರೆ, ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾಗಿರುವ ಶಾಪಿಂಗ್ ವೆಬ್‌ಸೈಟ್ ಫೋಟೋವನ್ನು ಎಡಿಟ್ ಮಾಡಲಾಗಿದೆ. ಮೂಲ ಫೋಟೋದಲ್ಲಿ ಪ್ರಧಾನಿ ಮೋದಿ ಧರಿಸಿರುವ ಉಡುಗೆಯನ್ನು ಆ ಶಾಪಿಂಗ್ ವೆಬ್‌ಸೈಟ್‌ನಲ್ಲಿ ಮಹಿಳೆ ಧರಿಸಿರಲಿಲ್ಲ.
ಪ್ರಧಾನಿ ಮೋದಿ ತೊಟ್ಟಿರುವ ಡ್ರೆಸ್‌ನಲ್ಲಿ ಸುಕ್ಕುಗಳಿದ್ದಲ್ಲಿ, ಪೋಸ್ಟ್‌ನಲ್ಲಿರುವ ಮಹಿಳೆ ಧರಿಸಿರುವ ಡ್ರೆಸ್‌ನಲ್ಲಿಯೂ ಸುಕ್ಕುಗಳಿವೆ. ಹಾಗಾಗಿ, ಪ್ರಧಾನಿ ಮೋದಿ ಧರಿಸಿದ್ದ ಡ್ರೆಸ್ ಅನ್ನು ಮಹಿಳೆ ಧರಿಸಿರುವಂತೆ ಎಡಿಟ್ ಮಾಡಿರುವುದು ಖಚಿತವಾಗಿದೆ.
ಒಟ್ಟರೆಯಾಗಿ ಹೇಳುವುದಾದರೆ, ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಶಾಪಿಂಗ್ ವೆಬ್‌ಸೈಟ್ ಫೋಟೋವನ್ನು ಎಡಿಟ್ ಮಾಡಲಾಗಿದೆ. ಮೂಲ ಫೋಟೋದಲ್ಲಿ ಪ್ರಧಾನಿ ಮೋದಿ ಧರಿಸಿರುವ ಉಡುಗೆಯನ್ನು ಆ ಶಾಪಿಂಗ್ ವೆಬ್‌ಸೈಟ್‌ನಲ್ಲಿ ಮಹಿಳೆ ಧರಿಸಿರಲಿಲ್ಲ.ಅಲ್ಲದೆ ಮೋದಿ ಧರಿಸಿರುವುದು ಮಹಿಳೆಯ ಉಡುಪಲ್ಲ, ಅದು ಮೇಘಾಲಯಕ್ಕೆ ಸಂಬಂಧಿಸಿದ ಬುಡಕಟ್ಟು ಸಮುದಾಯದ ಸಾಂಪ್ರದಾಯಿಕ ಬಟ್ಟೆಯಾಗಿದೆ.
ಪ್ರಧಾನಿ ಮೋದಿ ಮಹಿಳೆಯರು ಧರಿಸುವ ಉಡುಪನ್ನೆ ಧರಿಸಿದ್ದರೂ ಅದರಲ್ಲಿ ತಪ್ಪು ಹುಡುಕುವುದು, ವ್ಯಂಗ್ಯ ಮಾಡುವುದು ಸರಿಯಲ್ಲ, ಒಂದು ವೇಳೆ ಅಂತಹ ಬಟ್ಟೆಗಳನ್ನು ಪ್ರಧಾನಿಗಳು ತೊಟ್ಟಿದ್ದಾರೆ ಎಂದಾದರೆ ಈ ದೇಶದ ಹೆಣ್ಣು ಮಕ್ಕಳ ಬಗ್ಗೆ ಹೆಚ್ಚು ಸಂವೇದಶೀಲರಾಗಿದ್ದಾರೆ ಎಂದು ನಾವೆಲ್ಲ ಸಂತೋಷ ಪಡಬೇಕು ಅಲ್ಲವೇ?
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ