ಫ್ಯಾಕ್ಟ್‌ಚೆಕ್: ಮೋದಿಯೊಂದಿಗೆ ಇರುವ ವ್ಯಕ್ತಿ ಅಮಿತ್ ಶಾ ಅಲ್ಲ! ಮತ್ಯಾರು?

ಪ್ರಧಾನಿ ನರೇಂದ್ರ ಮೋದಿಯವರು ಗೃಹ ಸಚಿವ ಅಮಿತ್ ಶಾ ಜೊತೆ ನಿಂತಿರುವ ಹಳೆಯ ಫೋಟೋ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ವೈರಲ್ ಫೋಟೋ 1993ರಲ್ಲಿ ಸೆರೆಹಿಡಿಯಲಾಗಿದ್ದು, 2014 ರ ವೇಳೆಗೆ ಅವರು ಭಾರತದಲ್ಲಿ ಸರ್ವಶಕ್ತ ವ್ಯಕ್ತಿಯಾಗುತ್ತಾರೆ ಎಂದು ಸ್ವತಃ ಅವರಿಗೆ ತಿಳಿದಿರಲಿಲ್ಲ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಇರುವ ವ್ಯಕ್ತಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೆ? ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಖ್ಯಾತ ಚಿತ್ರ ನಿರ್ದೇಶಕ ರಾಮ್‌ಗೋಪಾಲ್ ವರ್ಮ ಕೂಡ ಇದೇ ಫೋಟೊವನ್ನು ತಮ್ಮ ಟ್ವಿಟರ್ ಹ್ಯಾಂಡಲ್ ಮೂಲಕ ಟೀಟ್ ಮಾಡಿದ್ದಾರೆ.

ಈ ಫೋಟೋದಲ್ಲಿ ಮೋದಿಯೊಂದಿಗೆ ಇರುವ ವ್ಯಕ್ತಿ ಅಮಿತ್ ಶಾ ಅವರೇ? ಎಂಬುದನ್ನು ಪರಿಶೀಲಿಸುವಂತೆ ಏನ್‌ಸುದ್ದಿ ಓದುಗರು ಸಂದೇಶಗಳ ಮೂಲಕ ವಿನಂತಿಸಿದ್ದಾರೆ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವರಲ್ ಆಗಿರುವ ಮೋದಿ ಅವರ ಫೋಟೋ ವನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಸರ್ಚ್ ಮಾಡಿದಾಗ, 2 ಮೇ 2022ರಲ್ಲಿ ಇದೇ ಪೋಟೋ ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ವೈರಲ್ ಆಗಿರುವುದು ಕಂಡುಬಂದಿದೆ. ಮೇ 4, 2022 ರಂದು ಜರ್ಮನಿಗೆ ಪ್ರಧಾನಿ ಮೋದಿ ಅವರ ಅಧಿಕೃತ ಭೇಟಿಯ ಹಿನ್ನೆಲೆಯಲ್ಲಿ ಮಾಧ್ಯಮಗಳು ವರದಿ ಮಾಡಿದ್ದವು.

ವೈರಲ್ ಫೋಟೋದಲ್ಲಿರುವ ವ್ಯಕ್ತಿ ಗೃಹ ಸಚಿವ ಅಮಿತ್ ಶಾ ಅಲ್ಲ, ಗುಜರಾತ್ ಆಯುರ್ವೇದ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಮತ್ತು RSS ಮುಖಂಡ ಡಾ ಸಂಜೀವ್ ಓಜಾ ಎಂದು BOOM ಕಂಡುಹಿಡಿದಿದೆ.

1993 ರ ಫೋಟೋವು ಪವಿತ್ರ ರೋಮನ್ ಸಾಮ್ರಾಜ್ಯವನ್ನು ಸ್ಥಾಪಿಸಿದ ಪಶ್ಚಿಮ ಯುರೋಪಿನ ಮಧ್ಯಕಾಲೀನ ಚಕ್ರವರ್ತಿ ಚಾರ್ಲೆಮ್ಯಾಗ್ನೆ ಅವರ ಪ್ರತಿಮೆಯ ಮುಂದೆ ಪ್ರಧಾನಿ ಮೋದಿ ಮತ್ತು ಅವರ ಸಹೋದ್ಯೋಗಿಗಳಲ್ಲಿ ಒಬ್ಬರು ನಿಂತಿರುವುದನ್ನು ತೋರಿಸುತ್ತದೆ ಎಂದು NDTV ವರದಿ ಮಾಡಿದೆ.

ಮತ್ತಷ್ಟು ಮಾಹಿತಿಗಾಗಿ ಸರ್ಚ್ ಮಾಡಿದಾಗ, ಡಾ.ಸಂಜೀವ್ ಓಜಾ ಅವರ ಚಿತ್ರವಿರುವ ABVP ರಾಜ್‌ಕೋಟ್‌ನ ಫೇಸ್‌ಬುಕ್ ಪ್ರೊಫೈಲ್‌ನಲ್ಲಿ ಪೋಸ್ಟ್‌ನಲ್ಲಿ ಏಪ್ರಿಲ್ 2020 ರ ಪೋಸ್ಟ್‌  ಲಭ್ಯವಾಗಿದೆ. ಡಾ.ಸಂಜೀವ್ ಓಜಾ ಅವರು ಗುಜರಾತ್‌ನಲ್ಲಿ RSS ನಾಯಕರಾಗಿದ್ದಾರೆ ಮತ್ತು ಗುಜರಾತ್ ಆಯುರ್ವೇದ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಮತ್ತು ಎಬಿವಿಪಿ ಗುಜರಾತ್‌ನ ಮಾಜಿ ಸಂಘಟನಾ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

 

ಸಾಮಾಜಿಕ ಮಾಧ್ಯಮದಲ್ಲಿ 1993 ಫೋಟೋ ವೈರಲ್ ಆದ ಹಿನ್ನಲೆ ಮತ್ತು ಮೋದಿಯವರೊಂದಿಗೆ ಇರುವ ವ್ಯಕ್ತಿ ಡಾ.ಸಂಜೀವ್ ಓಜಾ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲ್ಲು ಬೂಮ್ ಡಾ.ಸಂಜೀವ್ ಓಜಾಅವರನ್ನು ಸಂಪರ್ಕಿಸಿದ್ದು, ಪ್ರಧಾನಿ ಮೋದಿಯವರೊಂದಿಗೆ 1993 ರ ಫೋಟೋದಲ್ಲಿ ಇರುವುದು ನಾನೇ ಎಂದು ಸಂಜೀವ್ ಓಜಾ ಸ್ಪಷ್ಟಪಡಿಸಿದ್ದಾರೆ.

ನಾನು, ಆಗ RSS ಪ್ರಚಾರಕನಾಗಿದ್ದೆ ಮತ್ತು ಮೋದಿಜಿ 1993 ರ ಸೆಪ್ಟೆಂಬರ್ / ಅಕ್ಟೋಬರ್‌ನಲ್ಲಿ ನಾವು ಜರ್ಮನಿಗೆ ಭೇಟಿ ನೀಡಿದಾಗ ಬಿಜೆಪಿ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದರು.. ನಾವು ಒಬ್ಬರಿಗೊಬ್ಬರು ದೀರ್ಘಕಾಲ ತಿಳಿದಿದ್ದೇವೆ ಮತ್ತು ಹಿಂದೆ ಗುಜರಾತ್‌ನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ಈ ಫೋಟೋ ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿ ಸೆರೆಹಿಡಿಯಲಾಯಿತು.ಮೋದಿಜಿ ಆ ವರ್ಷ ಯುನೈಟೆಡ್ ಸ್ಟೇಟ್ಸ್‌ಗೆ ಭೇಟಿ ನೀಡಿದರು, ಎಂದು ಓಜಾ BOOM ಗೆ ಹೇಳಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, 1993ರಲ್ಲಿ ಮೋದಿ ಮತ್ತು ಸಂಜೀವ್ ಓಜಾ ಅವರು ಜರ್ಮನಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸೆರೆಹಿಡಿದಿರುವ ಚಿತ್ರವನ್ನು ಅಮಿತ್ ಶಾ ಮತ್ತು ಮೋದಿ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಬೂಮ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಮಂಗಳೂರಿನ ಕಾಲೇಜಿನಲ್ಲಿ ಬುರ್ಖ ಧರಿಸಿ ನೃತ್ಯ ಮಾಡಿದ್ದು ಹಿಂದೂ ವಿದ್ಯಾರ್ಥಿಗಳಲ್ಲ! ಹಾಗಿದ್ದರೆ ಮತ್ಯಾರು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ಫ್ಯಾಕ್ಟ್‌ಚೆಕ್: ಮೋದಿಯೊಂದಿಗೆ ಇರುವ ವ್ಯಕ್ತಿ ಅಮಿತ್ ಶಾ ಅಲ್ಲ! ಮತ್ಯಾರು?

  • December 21, 2022 at 6:13 pm
    Permalink

    ಆ ಕಾಲದಲ್ಲಿ ‘ತಡಿಪಾರ್’ ರಾಜಕಾರಣಕ್ಕೆ ಇನ್ನೂ ಬಂದಿರಲಿಲ್ಲ. RSS ನಲ್ಲೂ ಅವನು ಆಗ ಇರಲಿಲ್ಲ .
    ಆಗ ಅವನು ಬನಸ್ಕಾಂತ ಜಿಲ್ಲೆಯಲ್ಲಿ ಮಾರ್ಬಲ್ ಗಣಿಗಳ್ಳರ ಪಂಟರ್ ಆಗಿದ್ದ ಅಷ್ಟೇ. ಆಗ ತಡಿಪಾರ್ ಜತೆ ಸೊಹ್ರಾಬುದ್ದಿನ್ ಶೇಖ್ ಮತ್ತು ತುಳಸಿರಾಮ್ ಪ್ರಜಾಪತಿ ಎಂಬ ಕ್ರಿಮಿನಲ್ ಗಳೂ ಮಾರ್ಬಲ್ ಗಣಿ ಮಾಫಿಯಾದ ಪಂಟರ್ ಆಗಿದ್ದರು.

    Reply

Leave a Reply

Your email address will not be published.

Verified by MonsterInsights