ಫ್ಯಾಕ್ಟ್‌ಚೆಕ್: ಮಂಗಳೂರಿನ ಕಾಲೇಜಿನಲ್ಲಿ ಬುರ್ಖ ಧರಿಸಿ ನೃತ್ಯ ಮಾಡಿದ್ದು ಹಿಂದೂ ವಿದ್ಯಾರ್ಥಿಗಳಲ್ಲ! ಹಾಗಿದ್ದರೆ ಮತ್ಯಾರು?
ಮಂಗಳೂರಿನ ಸೇಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹಿಂದೂ ವಿದ್ಯಾರ್ಥಿಗಳು ಬುರ್ಖಾ ಧರಿಸಿ ಬಾಲಿವುಡ್ ಹಾಡಿಗೆ ನೃತ್ಯ ಮಾಡುವ ಮೂಲಕ ಮುಸ್ಲಿಮರನ್ನು ಅಪಹಾಸ್ಯ ಮಾಡುತ್ತಿದ್ದಾರೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಲವು ಸಾಮಾಜಿಕ ಮಧ್ಯಮದ ಬಳಕೆದಾರರು ಮಂಗಳೂರು – ಸೇಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಿಂದೂ ವಿದ್ಯಾರ್ಥಿಗಳು ಮುಸ್ಲಿಮರು ಮತ್ತು ಬುರ್ಖಾವನ್ನು ಅಪಹಾಸ್ಯ ಮಾಡಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.
India: Hindu students in an Event at St.Joseph Engineering College, Mangalore students in blatant Islamophobic act seen wearing Hijab and performing obscene steps for a item song mocking Muslim minorities Burqa #hijab #Islamophobia_in_india #Islamophobia https://t.co/fsKq9WPTLz
— CrimeReportIndia (@CrimeReportInd1) December 7, 2022
ಮಂಗಳೂರಿನ ಸೇಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಿಂದೂ ವಿದ್ಯಾರ್ಥಿಗಳು ಹಿಜಾಬ್ ಧರಿಸಿ, ಮುಸ್ಲಿಂ ಅಲ್ಪಸಂಖ್ಯಾತ ಬುರ್ಖಾವನ್ನು ಅಪಹಾಸ್ಯ ಮಾಡುವ ಐಟಂ ಸಾಂಗ್‌ಗೆ ಅಶ್ಲೀಲ ಹೆಜ್ಜೆಗಳನ್ನು ಹಾಕುತ್ತಿರುವುದು ಕಂಡುಬಂದಿದೆ. ಎಂದು @CrimeReportInd1 ಟ್ವೀಟ್ ಮಾಡಿದೆ.
ಈ ಘಟನೆಯ ಕುರಿತು ವರದಿ ಮಾಡಿರುವ ಇಂಡಿಯಾ ಟುಡೇ ಬುರ್ಖಾಧಾರಿ ಕಲಾವಿದರೆಲ್ಲರೂ ಮುಸ್ಲಿಂ ವಿದ್ಯಾರ್ಥಿನಿಯರು ಎಂದು ಹೇಳಿಕೊಂಡಿದೆ.
Mangaluru students' dance allegedly mocks burqa! @sagayrajp with more details. #ITVideo pic.twitter.com/Y53cAEnLCm
— IndiaToday (@IndiaToday) December 9, 2022
ಮಂಗಳೂರಿನ ಸೇಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮ ಕುರಿತು ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್:
ಸೇಂಟ್ ಜೋಸೆಫ್ ಕಾಲೇಜು ಕಾರ್ಯಕ್ರಮದ ಬಗ್ಗೆ ಸರ್ಚ್ ಮಾಡಿದಾಗ, ANI ನಲ್ಲಿ ಡಿಸೆಂಬರ್ 9, 2022 ರಂದು ‘ಬುರ್ಖಾ’ ನೃತ್ಯಕ್ಕಾಗಿ 4 ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ” ಎಂಬ ಶೀರ್ಷಿಕೆಯೊಂದಿಗೆ ಲೇಖನವನ್ನು ಪ್ರಕಟಿಸಿತು. ವಿಡಿಯೋದಲ್ಲಿ ಪ್ರದರ್ಶನ ನೀಡಿರುವುದು ಮುಸ್ಲಿಂ ವಿದ್ಯಾರ್ಥಿಗಳು ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ವಿದ್ಯಾರ್ಥಿಗಳ ಸಂಘದ ಉದ್ಘಾಟನೆಯ ಅನೌಪಚಾರಿಕ ಭಾಗ’ದ ಸಂದರ್ಭದಲ್ಲಿ ವೇದಿಕೆಯ ಮೇಲೆ ನುಗ್ಗಿದ ಕೆಲವು ಮುಸ್ಲಿಂ ವಿದ್ಯಾರ್ಥಿಗಳು ಪೂರ್ವಸಿದ್ಧತೆಯಿಲ್ಲದ ನೃತ್ಯ ಮಾಡಿದ್ದನ್ನು ಸೆರೆಹಿಡಿಯಲಾಗಿದೆ.
The video clip being circulated in social media has captured a part of the dance by students of the muslim community itself who barged on stage during the informal part of students association inaugural.
(1/2)— St Joseph Engineering College, Mangaluru (@SJEC_Mangaluru) December 8, 2022
ವಿವಾದಿತ ನೃತ್ಯವು ಕಾರ್ಯಕ್ರಮದ ಭಾಗವಾಗಿರಲಿಲ್ಲ ಮತ್ತು ವೇದಿಕೆ ಮೇಲೆ ಬಂದು ಏಕಾಏಕಿ ನೃತ್ಯ ಮಾಡಿದ ವಿದ್ಯಾರ್ಥಿಗಳನ್ನು ವಿಚಾರಣೆಗಾಗಿ ಅಮಾನತುಗೊಳಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಕೋಮು ಸೌಹಾರ್ದತೆ ಕದಡುವ ಅಥವಾ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಯಾವುದೇ ಚಟುವಟಿಕೆಯನ್ನು ಬೆಂಬಲಿಸುವುದಿಲ್ಲ ಎಂದು ಕಾಲೇಜು ಮಂಡಳಿ ತಿಳಿಸಿದೆ.
![[webp-to-jpg output image]](https://i0.wp.com/im3.ezgif.com/tmp/ezgif-3-7851896f6b.jpg?w=810&ssl=1)
ಲೇಖನದಲ್ಲಿ ಮಂಗಳೂರಿನ ಸೇಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಅಧಿಕೃತ ಖಾತೆಯ ಟ್ವೀಟ್ ಅನ್ನು ಉಲ್ಲೇಖಿಸಲಾಗಿದೆ. ಟ್ವೀಟ್‌ನಲ್ಲಿ, “ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವಿಡಿಯೊ ಕ್ಲಿಪ್‌ನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆಯ ಅನೌಪಚಾರಿಕ ಭಾಗದ ಸಂದರ್ಭದಲ್ಲಿ ವೇದಿಕೆಯ ಮೇಲೆ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ನೃತ್ಯದ ಒಂದು ಭಾಗವನ್ನು ಸೆರೆಹಿಡಿದಿದ್ದಾರೆ” ಎಂದು ಉಲ್ಲೇಖಿಸಲಾಗಿದೆ.
Video of 4 male students dancing wearing burkha at St Joseph's Engineering College in Vamanjoor, Mangalore has gone viral on social media. Dance was not the part of the program. All 4 students were suspended, pending an inquiry by college management. @TheSouthfirst @anusharavi10 pic.twitter.com/P6Z8cDX5D1
— Bellie Thomas (@belliethomas) December 8, 2022
ಕಾಲೇಜಿನಲ್ಲಿ ನೃತ್ಯ ಮಾಡಿದ 4 ವಿದ್ಯಾರ್ಥಿಗಳಲ್ಲಿ ಒಬ್ಬ ವಿದ್ಯಾರ್ಥಿಯೊಂದಿಗೆ ಮಾತನಾಡಲಾಗಿದೆ ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ. ವಿದ್ಯಾರ್ಥಿ ಹೇಳಿಕೆಯ ಪ್ರಕಾರ ವೀಡಿಯೊದಲ್ಲಿ ಕಂಡುಬರುವ ನಾಲ್ವರು ವಿದ್ಯಾರ್ಥಿಗಳು ಮುಸ್ಲಿಮರು ಮತ್ತು ಅವರಲ್ಲಿ ಯಾರೂ ಹುಡುಗಿಯರು ಇರಲಿಲ್ಲ ಎಂದು ಹೇಳಿದೆ. ಬುರ್ಖಾ ಧರಿಸಿ ನೃತ್ಯ ಮಾಡುತ್ತಿರುವುದು ಹುಡುಗಿಯರು ಎಂದು ಸುದ್ದಿ ಮಾಧ್ಯಮಗಳು ತಪ್ಪು ಹೇಳಿಕೆಯನ್ನು ನೀಡುತ್ತಿವೆ ಎಂದಿದ್ದಾರೆ. ಮೇಲಿನ ವೀಡಿಯೊದಲ್ಲಿ ನೃತ್ಯ ಮಾಡಿದ ವಿದ್ಯಾರ್ಥಿಗಳು ಸನ್ಯಾಸಿಗಳಂತೆ ಕಾಣಲು ತಯಾರಿ ನಡೆಸಲಾಗಿತ್ತು, ಆದರೆ ಸಮಯಕ್ಕೆ ಸರಿಯಾಗಿ ವೇಷಭೂಷಣ ಸಿಗದ ಕಾರಣ ಬುರ್ಖಾ ಹಾಕಿಕೊಳ್ಳಬೇಕಾಯಿತು ಎಂದು ಆಲ್ಟ್‌ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.
We are the guys who did this dance and they are my classmate and it was our costume for the ghost theme dance and and we all are of same group and religion. And we are not hurting any religious beliefs please remove this video and don't spread hatred to any religion or community
— Mohammed Sharaz (@msharaz52) December 8, 2022
https://www.youtube.com/watch?v=k_7fwg4–Ic
ಒಟ್ಟಾರೆಯಾಗಿ ಹೇಳುವುದಾದರೆ, ಮಂಗಳೂರಿನ ಕಾಲೇಜೊಂದರ ಮುಸ್ಲಿಂ ವಿದ್ಯಾರ್ಥಿಗಳ ಗುಂಪು ಬುರ್ಖಾ ಧರಿಸಿ ನೃತ್ಯ ಮಾಡುವ ವೀಡಿಯೊವನ್ನು, ಹಿಂದೂ ವಿದ್ಯಾರ್ಥಿಗಳು ಎಂದು ಇನ್ನು ಕೆಲ ಮಾಧ್ಯಮಗಳು ಮುಸ್ಲಿಂ ವಿದ್ಯಾರ್ಥಿನಿಯರು ಎಂದು ಸುಳ್ಳು ಹೇಳಿಕೆಯೊಂದಿಗೆ ಪ್ರಸಾರ ಮಾಡಲಾಗಿದ್ದು, ಅಲ್ಲದೆ, ವಿಡಿಯೋದಲ್ಲಿ ಕಾಣಿಸಿಕೊಂಡಿರುವ ನಾಲ್ವರು ವಿದ್ಯಾರ್ಥಿಗಳು ಮುಸ್ಲಿಂ ವಿದ್ಯಾರ್ಥಿಗಳು ಎಂಬುದು ಸ್ಪಷ್ಟವಾಗಿದೆ.
ಕೃಪೆ: ಆಲ್ಟ್‌ನ್ಯೂಸ್
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಫುಟ್ಬಾಲ್ ದಂತಕಥೆ ಪೀಲೆ ನಿಧನ ಎಂದು ಸುಳ್ಳು ಸುದ್ದಿ ಹಂಚಿಕೆ

