ಫ್ಯಾಕ್ಟ್‌ಚೆಕ್: ರಾಹುಲ್ ಗಾಂಧಿ ಬಾಬಾ ವೇಷ ಧರಿಸಿದ್ದು ನಿಜವೇ?

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಾಬಾನ ವೇಷ ಧರಿಸಿ ನಡೆಯುತ್ತಿರುವ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಾದ ದಿಗ್ವಿಜಯ್ ಸಿಂಗ್ ಮತ್ತು ಸಚಿನ್ ಪೈಲಟ್ ಅವರೊಂದಿಗೆ ಹೆಜ್ಜೆ ಹಾಕುತ್ತಿದ್ದಾರೆ, 52 ವರ್ಷದ ಈ ಮಗುವಿಗೆ ಕಾಂಗ್ರೆಸ್ಸಿಗರು ಇನ್ನು ಏನೇನು ವೇಷ ಹಾಕಿಸುತ್ತಾರೆ?” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಸರ್ಚ್ ಮಾಡಿದಾಗ, ಇದೇ ಚಿತ್ರವನ್ನು ಹೋಲುವ ಮತ್ತೊಂದು ಚಿತ್ರವನ್ನು INC ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಹಂಚಿಕೊಂಡಿರುವುದು ಕಂಡುಬಂದಿದೆ.

ಅದು ಮಧ್ಯಪ್ರದೇಶದಲ್ಲಿ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ತೆಗೆದ ಚಿತ್ರವಾಗಿದೆ. ವರದಿಯ ಪ್ರಕಾರ, 3 ಡಿಸೆಂಬರ್ 2022 ರಂದು ನಾಮದೇವ್ ದಾಸ್ ತ್ಯಾಗಿ, ಅಕಾ ಕಂಪ್ಯೂಟರ್ ಬಾಬಾ,  ರಾಹುಲ್ ಗಾಂಧಿಯನ್ನು ಭೇಟಿಯಾಗಿದ್ದಾರೆ ಎಂದು INC ಪೋಸ್ಟ್‌ಅನ್ನು ಹಂಚಿಕೊಂಡಿದೆ.

INC ತನ್ನ ಟ್ವಿಟರ್ ಖಾತೆಯ ಮೂಲಕ ಹಂಚಿಕೊಂಡಿರುವ ಚಿತ್ರದಲ್ಲಿ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಬಾಬಾ ಅವರ ಎಡ ಬದಿಯಲ್ಲಿ ಇದ್ದು ರಾಹುಲ್ ಗಾಂಧಿ ಬಲ ಬದಿಯಲ್ಲಿ ಇರುವುದನ್ನು ಕಾಣಬಹುದು. ಈ ಮೂಲ ಚಿತ್ರವನ್ನು ಮಾರ್ಫ್ ಮಾಡುವ ಮೂಲಕ ರಾಹುಲ್ ಗಾಂಧಿಯ ತಲೆಯನ್ನು ತೆಗೆದು ಬಾಬಾ ಅವರ ಚಿತ್ರಕ್ಕೆ ಸೇರಿಸಿ, ರಾಹುಲ್ ಗಾಂಧಿ ಅವರ ಫೋಟೋಗೆ ಸಚಿನ್ ಪೈಲಟ್ ಅವರ ಮುಖವನ್ನು ಸೇರಿಸಿ ಎಡಿಟ್ ಮಾಡಲಾಗಿದೆ. ವಾಸ್ತವವಾಗಿ ಮೂಲ ಚಿತ್ರದಲ್ಲಿ ಸಚಿನ್ ಪೈಲಟ್ ಬಾಬಾ ಅವರೊಂದಿಗೆ ಹೆಜ್ಜೆಯನ್ನೆ ಹಾಕಿಲ್ಲ.  ಟ್ರಿಬ್ಯೂನ್‌ ಯುಟ್ಯೂಬ್‌ ಚಾನೆಲ್‌ನಲ್ಲಿ ವಿಡಿಯೋನ್ನು ಅಪ್‌ಲೋಡ್ ಮಾಡಲಾಗಿದ್ದು ಈ ವಿಡಿಯೊ ವರದಿಯಲ್ಲಿ ರಾಹುಲ್ ಗಾಂಧಿ ಜೊತೆಗೆ ಕಂಪ್ಯೂಟರ್ ಬಾಬಾ ನಡೆಯುವುದನ್ನು ಸಹ ನೋಡಬಹುದು. ಈ ಎರಡೂ ಚಿತ್ರಗಳ ನಡುವಿನ ವ್ಯತ್ಯಾಸವನ್ನು ಕೆಳಗೆ ನೋಡಬಹುದು.

ಮತ್ತಷ್ಟು ಕೀವರ್ಡ್‌ಗಳೊಂದಿಗೆ ಸರ್ಚ್ ಮಾಡಿದಾಗ ವೈರಲ್ ಫೋಟೋದಲ್ಲಿ ಬಳಸಲಾದ ಸಚಿನ್ ಪೈಲಟ್ ಅವರ ಮತ್ತೊಂದು ಚಿತ್ರ ಲಭ್ಯವಾಗಿದ್ದು, ರಾಜಸ್ಥಾನದಲ್ಲಿ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಸೆರೆಹಿಡಿಯಲಾದ ಈ ಚಿತ್ರವನ್ನು ನೀವು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಸಚಿನ್ ಪೈಲಟ್ ಅವರ ಈ ಚಿತ್ರವನ್ನು ತಿರುಗಿಸಿ ಮಾರ್ಫ್ ಮಾಡಿದ ವೈರಲ್ ಚಿತ್ರದಲ್ಲಿ ಬಳಸಲಾಗಿದೆ. ಈ ಎಲ್ಲಾ ಪುರಾವೆಗಳೊಂದಿಗೆ, ಪೋಸ್ಟ್‌ನಲ್ಲಿ ಹಂಚಿಕೊಂಡ ಚಿತ್ರವನ್ನು ಎಡಿಟ್ ಮಾಡಿರುವುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 3 ಡಿಸೆಂಬರ್ 2022 ರಂದು, ಕಾಂಗ್ರೆಸ್ ನಾಯಕರ ಯಾತ್ರೆ ಮಧ್ಯಪ್ರದೇಶದ ಮಹುದಿಯಾ ಗ್ರಾಮವನ್ನು ತಲುಪಿದಾಗ, ನಾಮದೇವ್ ದಾಸ್ ತ್ಯಾಗಿ, ಅಕಾ ಕಂಪ್ಯೂಟರ್ ಬಾಬಾ ಅವರು ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿಯವರೊಂದಿಗೆ ಸೇರಿ ಹೆಜ್ಜೆ ಹಾಕಿದ್ದಾರೆ. ಈ ಸಂದರ್ಭದಲ್ಲಿ ಸೆರೆಹಿಡಿಯಲಾದ ಚಿತ್ರವನ್ನು, ರಾಹುಲ್ ಗಾಂಧಿ ಅವರು ಬಾಬಾನ ವೇಷವನ್ನು ಧರಿಸಿರುವಂತೆ ಡಿಜಿಟಲ್ ಮೂಲಕ ಎಡಿಟ್ ಮಾಡಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಇದು ಭಾರತ್ ಜೋಡೋ ಯಾತ್ರೆಗೆ ಸೇರಿದ ಜನರ ಚಿತ್ರವೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights