ಸ್ವದೇಶಿ ಎಂದರೆ ವಿದೇಶಿ ವಸ್ತುಗಳನ್ನು ತಿರಸ್ಕರಿಸುವುದಲ್ಲ! ಹೊಸ ವ್ಯಾಖ್ಯಾನ ಕೊಟ್ಟ ಮೋಹನ್ ಭಾಗವತ್‌

ಸ್ವದೇಶಿ ಎಂದರೆ ಎಲ್ಲಾ ವಿದೇಶಿ ವಸ್ತುಗಳನ್ನು ತಿರಸ್ಕರಿಸುವು ಎಂದು ಅರ್ಥವಲ್ಲ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಕೇಂದ್ರ ಸರ್ಕಾರದ ಆತ್ಮನಿರ್ಭರ್ ನಿರ್ಧಾರವನ್ನು ನಾವೆಲ್ಲರೂ ಬೆಂಬಲಿಸಬೇಕು. ಸ್ವದೇಶಿ ಎಂದರೆ ಸ್ಥಳೀಯ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳಿಗೆ ಉತ್ತೇಜನಕ್ಕೆ ಆದ್ಯತೆ ನೀಡುವುದು ಎಂದರ್ಥ. ಹಾಗಂದ ಮಾತ್ರಕ್ಕೆ ಎಲ್ಲಾ ವಿದೇಶಿ ವಸ್ತುಗಳನ್ನು ಬಹಿಷ್ಕರಿಸಬೇಕು ಎಂದು ಭಾವಿಸಬಾರದು. ಅಲ್ಲದೆ, ಸ್ಥಳೀಯವಾಗಿ ಲಭ್ಯವಿಲ್ಲದ ವಸ್ತುಗಳನ್ನು ನಾವು ಆಮದು ಮಾಡಿಕೊಳ್ಳಲೇಬೇಕು.  ಅವುಗಳನ್ನು ನಾವು ಭಾರತಕ್ಕೆ ಒಪ್ಪುವಂತೆ ಬದಲಾವಣೆ ಮಾಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ದೇಶದಲ್ಲಿ ಸಾಂಪ್ರದಾಯಿಕವಾಗಿ ಕೊರತೆಯಿರುವ ಮತ್ತು ಸ್ಥಳೀಯವಾಗಿ ಲಭ್ಯವಿಲ್ಲದ ತಂತ್ರಜ್ಞಾನ ಅಥವಾ ವಸ್ತುಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಬಹುದು. ಸ್ವಾವಲಂಬಿ ರಾಷ್ಟ್ರಗಳ ನಡುವೆ ಪರಸ್ಪರ ಸಹಕಾರ ಬೇಕಿದೆ. ಅದಕ್ಕಾಗಿ, ಕೊರೊನಾ ಸಂಕಷ್ಟದ ನಂತರ ವಿಶ್ವವನ್ನು ಒಂದು ಮಾರುಕಟ್ಟೆ ಎಂದು ಪರಿಗಣಿಸುವ ಬದಲು ಒಂದು ಕುಟುಂಬ ಎಂಬಂತೆ ಪರಿಗಣಿಸಿ ಆರ್ಥಿಕ ಮಾದರಿ ರೂಪಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ಚೀನಾ ಮತ್ಉ ಭಾರತದ ಗಡಿಭಾಗ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಉಂಟಾದ ಘರ್ಷಣೆಯ ನಂತರ, ಭಾರತದಲ್ಲಿ ಬಾಯ್‌ಕಾಟ್‌ ಚೀನಾ ಘೋಷಣೆಗಳು ಮೊಳಗಿದ್ದವು. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ 59 ಚೀನೀ ಆಪ್‌ಗಳನ್ನು ನಿಷೇಧ ಮಾಡಿತ್ತು. ಇದಾದ ನಂತರ, ಚೀನಾ ಕಂಪನಿಗಳು ಆಪ್‌ಗಳ ಬಳಕೆಗೆ ಭಾರತದಲ್ಲಿ ಅವಕಾಶ ಕಲ್ಪಿಸುವಂತೆ ಸರ್ಕಾರದ ಮೇಲೆ ಒತ್ತಡ ತರುತ್ತಿದೆ ಎನ್ನಲಾಗುತ್ತಿದೆ.

ಅಲ್ಲದೆ, ಸರ್ಕಾರ ಒಂದಷ್ಟು ದಿನಗಳ ನಂತರ, ಆಪ್‌ಗಳ ಬಳಕೆಯನ್ನು ಮತ್ತೆ ಪುನರಾರಂಭಿಸಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯೂ ಆಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಚೀನಾ ವಸ್ತುಗಳ ಬಳಕೆಯನ್ನು ಸಮರ್ಥಿಸಲು ಈ ರೀತಿಯ ಮಾತುಗಳು ಕೇಳಿಬರುತ್ತಿದ್ದು, ಮೋಹನ್ ಭಾಗವತ್ ಅವರೂ ಕೂಡ ಇದಕ್ಕಾಗಿ ಹೊಸ ವ್ಯಾಖ್ಯಾನ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿಮೋದಿಯನ್ನು ತಿರಸ್ಕರಿಸುತ್ತಿದ್ದಾರೆ ಭಾರತೀಯ ಯುವಜನರು: ಕಾರಣ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights