ಜಾರ್ಖಂಡ್​​ನಲ್ಲಿ ಮತದಾನ ಪ್ರಕ್ರಿಯೆ ಆರಂಭ : ಮತಕೆಂದ್ರಗಳಲ್ಲಿ ಕಟ್ಟುನಿಟ್ಟಿನ ಭದ್ರತೆ

ಜಾರ್ಖಂಡ್​​ನಲ್ಲಿ ಮತದಾನ ಪ್ರಕ್ರಿಯೆ ಆರಂಭಗೊಂಡಿದ್ದು, ಮತಕೆಂದ್ರಗಳಲ್ಲಿ ಕಟ್ಟುನಿಟ್ಟಿನ ಭದ್ರತೆ ನಿಯೋಜಿಸಲಾಗಿದೆ. ಬೆಳಗ್ಗೆ 7 ಗಂಟೆಗೆ ಮೊದಲ ಹಂತದ ವಿಧಾನಸಭೆ ಚುನಾವಣೆಗೆ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಸಂಜೆ 3 ಗಂಟೆಗೆ ಮುಕ್ತಾಯವಾಗಲಿದೆ.

ಮಾವೋವಾದಿಗಳು ಪ್ರಾಬಲ್ಯ ಹೊಂದಿರುವ ಜಾರ್ಖಂಡ್​​ನಲ್ಲಿ ಆರು ಜಿಲ್ಲೆಗಳ 13 ಕ್ಷೇತ್ರಗಳಿಗೆ (ಛತ್ರ, ಗುಮಾಲ್, ಬಿಷ್ಣುಪುರ್, ಲೋಹರ್​ದಾಗ, ಮನಿಕ, ಲಾತೇಹಾರ್​, ಪಾಂಕಿ, ದಂಲ್ಟೋನ್​ಗಂಜ್, ಬಿಷ್ರಾಮ್​ಪುರ್, ಛಾತಪುರ್, ಹುಸೈನಾಬಾದ್​, ಗರ್ವಾ ಮತ್ತು ಭವಂತಪುರ್) ಮೊದಲ ಹಂತದ ಚುನಾವಣೆ ನಡೆಯುತ್ತಿದೆ. 37 ಲಕ್ಷ ಮತದಾರರು 15 ಮಹಿಳೆಯರು ಸೇರಿದಂತೆ 189 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ.

ಅಹಿತಕರ ಸಂಘಟನೆಗಳು ನಡೆಯದಂತೆ ಮತಕೆಂದ್ರಗಳ ಸಮೀಪದಲ್ಲಿ ಕಟ್ಟುನಿಟ್ಟಿನ ಭದ್ರತೆ ಏರ್ಪಡಿಸಲಾಗಿದೆ. ಕೆಲವು ದಿನಗಳ ಹಿಂದೆ ನಕ್ಸಲೈಟ್​ಗಳ ದಾಳಿ ನಡೆದಿದ್ದ ಲಾತೇಹಾರ್​ ಮತ್ತು ಮಾನಿಕ ಕ್ಷೇತ್ರಗಳಲ್ಲಿ ಭದ್ರತೆ ದುಪ್ಪಟ್ಟುಗೊಳಿಸಲಾಗಿದೆ. ಅಂಗವಿಕಲ ಮತದಾರರಿಗೆ ಮತಕೇಂದ್ರಗಳಲ್ಲಿ ವಿಶೇಷ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ಜಾರ್ಖಂಡ್​ ಮುಖ್ಯ ಚುನಾವಣಾ ಆಯುಕ್ತ ವಿನಯ್ ಕುಮಾರ್ ಚೌಧರಿ ಹೇಳಿದ್ದಾರೆ.

81 ಸಂಖ್ಯಾಬಲ ಹೊಂದಿರುವ ಜಾರ್ಖಂಡ್​ ವಿಧಾನಸಭೆಗೆ ಐದು ಹಂತಗಳಲ್ಲಿ ಡಿಸೆಂಬರ್ 20 ವರೆಗೆ ಚುನಾವಣೆ ನಡೆಯಲಿದೆ. ಡಿಸೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights