ಚೀನಾ ಪ್ರವಾಹ: 12 ಜನ ಸಾವು – ಹೆನಾನ್ ಪ್ರಾಂತ್ಯದ ಸಾವಿರಾರು ಜನರ ಸ್ಥಳಾಂತರ!

ಧಾರಾಕಾರ ಮಳೆಯಿಂದಾಗಿ ಮಧ್ಯ ಚೀನಾದ ಕೆಲವು ಭಾಗಗಳಲ್ಲಿ ತೀವ್ರ ಪ್ರವಾಹ ಉಂಟಾಗಿದ್ದು 12 ಜನರು ಸಾವನ್ನಪ್ಪಿದ್ದಾರೆ. ಅಧಿಕ ಮಳೆ ನೀರಿಗೆ ರೈಲು ನಿಲ್ದಾಣಗಳು, ರಸ್ತೆಗಳು ಮುಳುಗಿ ಹೋಗಿವೆ.

ದಾಖಲೆಯ ಮಳೆಯ ಹಿನ್ನೆಲೆಯಲ್ಲಿ ಹೆನಾನ್ ಪ್ರಾಂತ್ಯದ 10,000 ಕ್ಕೂ ಹೆಚ್ಚು ಜನರನ್ನು ಆಶ್ರಯಕ್ಕೆ ಸ್ಥಳಾಂತರಿಸಲಾಗಿದೆ. ಪ್ರವಾಹ ಪ್ರಾರಂಭವಾದಾಗಿನಿಂದ ಝೆಂಗ್‌ಜೌವ್ ನಗರದಲ್ಲಿ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಮುಖ್ಯ ರಸ್ತೆಗಳು ನದಿಗಳಂತಾಗಿ ಮಾರ್ಪಟ್ಟಿದ್ದು, ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಹೀಗಾಗಿ ಹೆಚ್ಚು ನಗರಗಳಲ್ಲಿ ಸಂಚಾರ ಸಂಪೂರ್ಣ ರದ್ದಾಗಿದೆ. ಸುಮಾರು 94 ಮಿಲಿಯನ್ ಜನರಿಗೆ ನೆಲೆಯಾಗಿರುವ ಹೆನಾನ್ ಪ್ರಾಂತ್ಯ ಅಸಾಮಾನ್ಯ ಸಕ್ರಿಯ ಮಳೆಗೆ ತತ್ತರಿಸಿ ಹೋಗಿದೆ. ಹೀಗಾಗಿ ಮುನಂದಿನ ದಿನಗಳಲ್ಲಿ ವಿಪರೀತ ಮಳೆಯಾಗುವ ಸಾಧ್ಯತೆಯಿದ್ದು ಹವಾಮಾನ ಎಚ್ಚರಿಕೆಯನ್ನು ನೀಡಿದೆ.

ಬೀದಿಗಳು ಮುಳುಗಿರುವುದನ್ನು ತೋರಿಸುವ, ಕಾರುಗಳು ಮತ್ತು ಭಗ್ನಾವಶೇಷಗಳು ವೇಗವಾಗಿ ಚಲಿಸುವ ಪ್ರವಾಹದ ನೀರಿನಲ್ಲಿ ತೇಲುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇತ್ತೀಚಿನ ಬಿರುಗಾಳಿಗಳಿಂದ ಹಾನಿಗೊಳಗಾದ ಹೆನಾನ್ ಪ್ರಾಂತ್ಯದ ಅಣೆಕಟ್ಟು ಕುಸಿದು ಹೋಗಬಹುದು ಎಂಬ ಆತಂಕವೂ ಇದೆ. ಹೀಗಾಗಿ ಲುಯೊಯಾಂಗ್ ನಗರದ ಅಣೆಕಟ್ಟಿನಲ್ಲಿ 20 ಮೀಟರ್ (65 ಅಡಿ) ದೂರದಲ್ಲಿ ಜನ ವಾಸಕ್ಕೆ ಉಲ್ಲಂಘಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರದೇಶಕ್ಕೆ ಸೈನಿಕರನ್ನು ನಿಯೋಜಿಸಲಾಗಿದ್ದು ಸೈನ್ಯದ ಹೇಳಿಕೆಯ ಪ್ರಕಾರ “ಯಾವುದೇ ಸಮಯದಲ್ಲಿ ಕುಸಿಯಬಹುದು” ಎಂದು ಎಚ್ಚರಿಸಿದೆ.

ಮುಂದಿನ 24 ಗಂಟೆಗಳ ಕಾಲ ಈ ಪ್ರದೇಶದಲ್ಲಿ ಮಳೆ ಮುಂದುವರಿಯಲಿದೆ.

Spread the love

Leave a Reply

Your email address will not be published. Required fields are marked *