ಗೋದಿ ಮೀಡಿಯಾ ವಿರುದ್ಧ ಪರ್ಯಾಯ ಕಂಡುಕೊಂಡ ಪಂಜಾಬ್ ಯುವಜನರು!

ಸುಮಾರು ಎರಡು ತಿಂಗಳ ಹಿಂದೆ, ಪಂಜಾಬ್‌ನ ರೈತರು ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸಲು ಪ್ರಾರಂಭಿಸಿದಾಗ, ಅವರು ಮುಖ್ಯವಾಹಿನಿಯ ಮಾಧ್ಯಮಗಳಿಂದ ಹೆಚ್ಚು ಗಮನ ಸೆಳೆಯಲಿಲ್ಲ. ಬದಲಿಗೆ ರೈತರನ್ನು ಖಲಿಸ್ಥಾನಿಗಳು, ಪ್ರತ್ಯೇಕವಾದಿಗಳು ಎಂದು ಬಿಂಬಿಸುತ್ತಿವೆ. ಇದು ಮಾಧ್ಯಮಗಳು ರೈತ ವಿರೋಧಿ ನಡೆಯನ್ನು ಅನುಸರಿಸುತ್ತಿದೆ ಎಂಬುಕ್ಕೆ ಸಾಕ್ಷಿಯಾಗಿದೆ. ಆದ್ದರಿಂದ, ಈ ಗೋದಿ ಮೀಡಿಯಾಗಳ ವಿರುದ್ಧ ಪಂಜಾಬ್ ಯುವಕ-ಯುವತಿಯರು ರೈತರ ಹೋರಾಟವನ್ನು ವಿಸ್ತೃತವಾಗಿ ದೇಶಾದ್ಯಂತ ಹರಡಲು ಮತ್ತು ದೇಶದ ಗಮನ ಸೆಳೆಯಲು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳ ಬಳಕೆಯಲ್ಲಿಯೂ ಪ್ರತಿಭಟನೆಗಳು ಮೇಲುಗೈ ಸಾಧಿಸಿವೆ ಎಂಬುದನ್ನು ಅರಿತಿರುವ ಪಂಜಾಬ್‌ ಯುವಜನರು ಟ್ವಿಟ್ಟರ್‌ ಸೇರಿದಂತೆ ಹಲವು ಸಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿ ರೈತ ಹೋರಾಟವನ್ನು ದೇಶದ ಮೂಲೆಗಳಿಗೆ ತಲುಪಿಸುತ್ತಿದ್ದಾರೆ.

ʼನಮ್ಮದು ಬರೀ ಬೀದಿ ಹೋರಾಟವಲ್ಲ, ಬದಲು ಬೌದ್ಧಿಕ ಹೋರಾಟವೂ ಹೌದುʼ ಅನ್ನುತ್ತಿದ್ದಾರೆ ಗೋದಿ ಮಾಧ್ಯಮಗಳನ್ನು ತಿರಸ್ಕರಿಸಿದ ಪಂಜಾಬಿನ ರೈತರ ಮಕ್ಕಳು. ಅವರಿಗೆ ಬಿ ಜೆ ಪಿಯ ಐ ಟಿ ಸೆಲ್‌ ಮತ್ತು ಅದರ ಅಂಧಾನುಯಾಯಿಗಳು ಮಾಡುತ್ತಿರುವ ನಿರಂತರ ಅಪಪ್ರಚಾರಗಳ ಬಗ್ಗೆ ಸರಿಯಾದ ತಿಳಿವಳಿಕೆಯಿದೆ. ಹಾಗೆಯೇ ರಾಷ್ಟ್ರೀಯ ಮಾಧ್ಯಮಗಳೆಂದು ಹಣೆ ಪಟ್ಟಿ ಕಟ್ಟಿಕೊಂಡು ಪಕ್ಷಪಾತ ಮಾಡುತ್ತಿರುವ ಧೂರ್ತ ಪತ್ರಕರ್ತರ ಬಗ್ಗೆಯೂ ಅರಿವಿದೆ. ಹಾಗಾಗಿ ಅವರು ಇದೀಗ ಪರ್ಯಾಯ ಹಾದಿಗಳನ್ನು ಕಂಡುಕೊಂಡಿದ್ದಾರೆ.

ʼರೈತರು ಖಾಲಿಸ್ಥಾನಿಗಳುʼ ಎಂಬ ಅಪಪ್ರಚಾರವನ್ನು ಬಲವಾಗಿ ವಿರೋಧಿಸಿದ ಲುಧಿಯಾನದ, ೨೫ ವರ್ಷದ ಪ್ರಿದ್ಯುನ್‌, ನಮ್ಮ ಹಿರಿಯರು ಈ ದೇಶಕ್ಕಾಗಿ ಪ್ರಾಣ ತೆತ್ತಿದ್ದಾರೆ, ಎಂದು ಹೇಳಿ, #savefarmers and #nohatred ಹ್ಯಾಷ್‌ ಟ್ಯಾಗನ್ನು ಆರಂಭಿಸಿ ಲಕ್ಷಾಂತರ ಜನಗಳನ್ನು ತಲುಪುವಲ್ಲಿ ಯಶಶ್ವಿಯಾಗಿದ್ದಾರೆ.

ಇದನ್ನೂ ಓದಿ: ಶೇಮ್‌ ಆನ್ ಮೀಡಿಯಾ: ರೈತರು ಮಾಧ್ಯಮಗಳನ್ನು ತಿರಸ್ಕರಿಸುತ್ತಿರುವುದೇಕೆ?

ಅದೇ ಊರಿನ ರಣವೀರ್‌ ಸಿಂಗ್‌ʼ ನಾನು ಟ್ರಾಕ್ಟರ್‌ ಓಡಿಸುತ್ತಿದ್ದೆ, ಈಗ ಟ್ವಿಟರ್‌ ಓಡಿಸುತ್ತಿದ್ದೇನೆʼ ಎನ್ನುತ್ತಾ ಹೋರಾಟದ ಚಿತ್ರ ಹಾಗೂ ವೀಡಿಯೋಗಳನ್ನು ಫೇಸ್‌ ಬುಕ್‌ ಮತ್ತು ಇನ್ಸ್ಟಾಗ್ರಾಂನಲ್ಲಿ ಹರಿಯ ಬಿಡುತ್ತಿದ್ದಾರೆ. ೨೨ ವರ್ಷದ ಲಕ್ಕಿಯು #Godimedia and #Gobackgodimedia ಗಳನ್ನು ಆರಂಭಿಸಿ ಝೀ ನ್ಯೂಸ್‌ ಮೇಲೆ ಸಮರ ಸಾರಿದ್ದಾರೆ.

ಇನ್ಸ್ಟಾಗ್ರಾಂನಲ್ಲಿ 15,000 ಫಾಲೋವರ್ಸ್‌ ಹೊಂದಿರುವ ಮುಸ್ಕಾನ್ ಎಂಬ ಯುವತಿ‌ ಸುಳ್ಳು ಸುದ್ದಿಗಳನ್ನು ಬಯಲಿಗೆಳೆಯುವ ಕೆಲಸದಲ್ಲಿ ನಿರತಳಾಗಿದ್ದಾರೆ. ‌ ‘ರೈತ ವಿರೋಧಿಗಳು ಹಬ್ಬಿಸುತ್ತಿರುವ ಸುಳ್ಳು ಸುದ್ದಿಗಳಿಂದ ನಮ್ಮ ಮನೆಯಲ್ಲಿರುವ ಹಿರಿಯರು ಗೊಂದಲಕ್ಕೀಡಾಗಬಾರದು, ಹಾಗಾಗಿ ಈ ಕೆಲಸ ಬಹಳ ಅಗತ್ಯ. ಈ ಬಗೆಯ ಕೆಲಸಗಳಿಂದಾಗಿ ದೇಶ ವಿದೇಶಗಳನ್ನು ತಲುಪಲು ನಮಗೆ ಸಾಧ್ಯವಾಗಿದೆʼ ಎಂದು ಮುಸ್ಕಾನ್‌ ಹೇಳಿದ್ದಾರೆ.

ಹೋರಾಟದಲ್ಲಿ ನಮ್ಮ ಹೆಸರನ್ನು ಹಾಳು ಮಾಡಲು ವಿರೋಧಿಗಳೇ ಕೆಲವರನ್ನು ಕಳಿಸಿಕೊಡುತ್ತಾರೆ, ಅಂಥ ದುಷ್ಟ ಶಕ್ತಿಗಳನ್ನೂ ನಾವು ಬಯಲು ಮಾಡುತ್ತೇವೆʼ ಎಂಬುದು ೨೫ ವರ್ಷದ ಲುಧಿಯಾನದ ಜಸ್ಜೀತ್‌ ಸಿಂಗ್‌ ಅವರ ಅಭಿಪ್ರಾಯ.

https://twitter.com/diljitdosanjh/status/1334494029124304896?s=20

೩೮ ವರ್ಷದ ಬವ್ಜೀತ್‌ ಸಿಂಗ್‌ ತನ್ನ ಗೆಳೆಯರೊಂದಿಗೆ ಸೇರಿಕೊಂಡು #Tractor2twitr ಎಂಬ ಹೆಸರಿನ ಟ್ವಿಟರ್‌ ಖಾತೆಯನ್ನು ಆರಂಭಿಸಿ ತನ್ನ ಗೆಳೆಯರನ್ನೆಲ್ಲಾ ಅಲ್ಲಿಗೆ ಆಹ್ವಾನಿಸಿದ್ದಾರೆ. ಸಂದೀಪ್‌ ಸಿಂಗ್‌ ಹೇಳುವ ಪ್ರಕಾರ ಕಂಗನಾ ಹೆಸರಿನಿಂದ ತುಂಬಿದ್ದ ಟ್ವಿಟರ್‌ ಈಗ ʼಕಿಸಾನ್‌ʼ ಪದದಿಂದ ತುಂಬಿ ತುಳುಕುತ್ತಿದೆ.

ಮೂಲ : Newslaundry

ಕೃಪೆ: ವಾಟ್ಸಾಪ್‌ 


ಇದನ್ನೂ ಓದಿ: ಮಾಧ್ಯಮಗಳು ರೈತ ಹೋರಾಟವನ್ನು ತಿರುಚುತ್ತಿರುವುದೇಕೆ? ಇಲ್ಲಿವೆ ಅಸಲಿ ಕಾರಣಗಳು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights