ಕನಸಿನ ಕಾರಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ರಿಷಬ್ ಜಾಲಿ ರೈಡ್…
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರು ಕೇಳ್ತಾಯಿದ್ದಂಗೆ ಸಿನಿಮಾ ಹೊರತುಪಡಿಸಿ ಕೆಲ ಸಿಹಿ ನೆನಪುಗಳು ಕಣ್ಣೆದುರು ಬರುತ್ತವೆ. ಜನರಿಗೆ ಸಹಾಯ ಮಾಡುವುದು, ಪ್ರಾಣಿಗಳನ್ನು ದತ್ತು ಪಡೆಯುವುದು, ಸಾಕುವುದು ಇದೆಲ್ಲವೂ ದಚ್ಚು ಸ್ಪಷಲ್. ಮಾತ್ರವಲ್ಲ ಜಾಲಿ ರೈಡ್ ಹೋಡುವುದು, ಸಾಕು ಪ್ರಾಣಿಗಳೊಂದಿಗೆ ಸಮಯ ಕಳಿಯುವುದು, ಬೈಕ್- ದುಬಾರಿ ಕಾರ್ ಗಳನ್ನು ಖರೀದಿಸುವುದು ಇದೆಲ್ಲವೂ ದಚ್ಚು ಕ್ರೇಜ್.
ದಚ್ಚ ಕ್ರೇಜ್ ಗೆ ಸ್ಯಾಂಡಲ್ ವುಡ್ ಮಂದಿ ಕೂಡ ಫಿದಾ ಆಗಿದ್ದಾರೆ. ಯಾಕೆ ಗೊತ್ತಾ ಇತ್ತೀಚೆಗೆ ಜನಮನಗೆದ್ದ ಬೆಲ್ ಬಾಟಮ್ ಖ್ಯಾತಿಯ ಹೀರೋ ರಿಷಬ್ ಶೆಟ್ಟಿಯವರು ದಚ್ಚ ಜೊತೆ ಜಾಲಿ ರೈಡ್ ಮಾಡಿದ್ದಾರೆ.
ಅದು ತಮ್ಮ ನೆಚ್ಚಿನ ಫೋರ್ಡ್ ಮಸ್ಟಂಗ್ ಕಾರ್ ನಲ್ಲಿ. ಹೌದು… ದಿ ಬಾಸ್ ಗೆ ಕಾರಿಗೆ ಬಗ್ಗೆ ಹೆಚ್ಚು ಒಲವು ಇದೆ. ಹೀಗಾಗಿ ದಚ್ಚು ಮನೆ ಮುಂದೆ ಕಾರುಗಳ ಸಾಲೇ ಆಯುಧ ಪೂಜೆಯಂದು ನಿಂತಿರುತ್ತೆ. ಲ್ಯಾಂಬೋರ್ಗಿನಿ, ಪೋರ್ಷೆ ಕಂಪನಿಯ ದುಬಾರಿ ಕಾರುಗಳು ದಚ್ಚುನ ಫೇಚರೆಟ್. ಅಂತೆಯೇ ಚಿಂಗಾರಿಯ ಬಳಿ ಹಳದಿ ಬಣ್ಣದ ಫೋರ್ಡ್ ಮಸ್ಟಂಗ್ ಕಾರು ಎಲ್ಲರ ಗಮನ ಹರಿಸುವಂತೆ ಮಾಡಿದ್ದು ಸುಳ್ಳಲ್ಲ. ಇದರಲ್ಲಿ ಸದ್ಯ ರಿಷಬ್ ಹಾಗು ದರ್ಶನ ಜಾಲಿ ರೈಡ್ ಹೋಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಇದರ ಬಗ್ಗೆ ಟ್ವೀಟ್ ಮಾಡಿದ ರಿಷಬ್ ತಮ್ಮ ಕನಸಿನ ಕಾರು ಎಂದು ಬರೆದುಕೊಂಡಿದ್ದಾರೆ.ಅಂದಹಾಗೆ ದಚ್ಚು ಈ ಕಾರನ್ನು ಕಳೆದ 2 ವರ್ಷದ ಹಿಂದೆ ಸಂಕ್ರಾಂತಿ ಹಬ್ಬದಂದು ಖರೀದಿ ಮಾಡಿದ್ದರು. ಈ ಕಾರಿನ ಬೆಲೆ 75 ಲಕ್ಷ, ಇದಲ್ಲದೇ ಡಿ ಬಾಸ್ ಬಳಿ ಜಾಗ್ವಾರ್, ಆಡಿ ಕ್ಯೂ7, ಬಿಎಂಡಬ್ಲ್ಯು, ರೇಂಜ್ ರೋವರ್, ಫಾಚ್ರ್ಯೂನರ್ ಕಾರುಗಳು ಇವೆ.
ಸದ್ಯ ಚಾಲೆಂಜ್ ಸ್ಟಾರ್ ವೀರ ಮದಕರಿ ನಾಯಕ ಸಿನಿಮಾದಲ್ಲಿ ನಿರತರಾಗಿದ್ದರೆ. ರಿಷಬ್ ‘ಹರಿಕಥೆಯಲ್ಲಿ ಗಿರಿಕಥೆ’ ಸಿನಿಮಾ ಶೂಟಿಂಗ್ ನಲ್ಲಿ ಬ್ಯೂಸಿ ಆಗಿದ್ದಾರೆ.ಒಟ್ಟಿನಲ್ಲಿ ಇವರಿಬ್ಬರ ಜಾಲಿ ರೈಡ್ ಅಬಿಮಾನಿಗಳು ಹುಬ್ಬೇರಿಸುವಂತೆ ಮಾಡಿದ್ದು ಸುಳ್ಳಲ್ಲ.