Categories
Breaking News District National Political State

ಕೆಪಿಸಿಸಿ ಕಿರೀಟ ಯುದ್ಧ : ಮಂಕಾಯ್ತಾ ಡಿಕೆ ಶಿವಕುಮಾರ್ ಕನಸು…?

ಕೆಪಿಸಿಸಿ ಅಧ್ಯಕ್ಷ ಪಟ್ಟ ಡಿಕೆ ಶಿವಕುಮಾರ್ ಗೋ ಅಥವಾ ಎಂಬಿ ಪಾಟೀಲ್ ಗೋ..? ಇ ಬಗ್ಗೆ ಸಾಕಷ್ಟು ಚರ್ಚೆ ರಾಜ್ಯ ರಾಜಕೀಯದಲ್ಲಿ ಸೃಷ್ಟಿಯಾಗಿದೆ. ಈ ವಿಚಾರವಾಗಿ ಹೈಕಮಾಂಡ ಜೊತೆ ಚರ್ಚೆಗಿಳಿದ ಸಿದ್ದು ಸೂಚಿಸಿದ ಹೆಸರು ಯಾವುದು..? ದೆಹಲಿಯಲ್ಲಿ ಮಂಗಳವಾರ ಸಿದ್ದು ಮಾಡಿದ್ದೇನು..? ದೆಹಲಿಯಲ್ಲಿ ಸಿದ್ದರಾಮಯ್ಯ ಅಧಿನಾಯಕಿಗೆ ಹೇಳಿದ್ದೇನು…? ಏನಿದ್ದು ಕೆಪಿಸಿಸಿ ಕಿರೀಟ್ ಯುದ್ಧ.. ಸಿದ್ದರಾಮಯ್ಯ ದೆಹಲಿ ಆಡಿದ ಗೇಮ್ ಯಾವುದು..? ಅನ್ನೋ ಪ್ರಶ್ನೆಗೆ ಉತ್ತರ ಸಾಕಷ್ಟು ಕುತೂಹಲ ಕೆರಳಿಸಿದೆ.

ಕರ್ನಾಟಕದ ಕಾಂಗ್ರೆಸ್ ರಾಜಕಾರಣದ ಬಗ್ಗೆ ಮಾತನಾಡುತ್ತಾ ಹೋದ್ರೆ ಕೆಪಿಸಿಸಿ ಪಟ್ಟದ ಗುಂಗು ಸದ್ಯ ಗುಲ್ಲೆದ್ದಿದೆ. ಮಂಗಳವಾರ ದೆಹಲಿಯಲ್ಲಿ ಬೀಡುಬಿಟ್ಟ ಸಿದ್ದು ಮಾಡಿದ ತಂತ್ರಗಾರಿಕೆಗೆ ಮೂಲ ಕಾಂಗ್ರೆಸ್ಸಿಗರ ದಿಕ್ಕು ಬದಲಾದಂತೆ ಕಾಣ್ಣುತ್ತಿದೆ.

ಹೌದು.. 2019 ಡಿ9 ರಂದು 15 ಕ್ಷೇತ್ರಗಳ ಉಚನುಮಾವಣೆಯಲ್ಲಿ ಕಾಂಗ್ರೆಸ್ 2ಸ್ಥಾನ ಪಡೆದುಕೊಂಡು ಹೀನಾಯ ಸೋಲು ಅನುಭವಿಸಿದ ಹೊಣೆ ಹೊತ್ತು ದಿನೇಶ್ ಗುಂಡೂರುರಾವ್ ಹಾಗೂ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟದ್ದರು. ಇದೇ ಸ್ಥಾನಕ್ಕೆ ಸದ್ಯ ಕಾಂಗ್ರೆಸ್ ನಾಯಕರಲ್ಲಿ ಲಾಬಿ ನಡೆದಿದೆ.

ಈ ಬಗ್ಗೆ ಚರ್ಚೆ ಮಾಡಲು ದೆಹಲಿಗೆ ತೆರಳಿರುವ ಸಿದ್ದರಾಮಯ್ಯ ಹೊಸ ಗೇಮ್ ಆಡಿದ್ದಾರೆ ಎನ್ನಲಾಗುತ್ತಿದೆ. ಈ ಗೇಮ್ ನಲ್ಲಿ  ಡಿಕೆ ಕನಸನ್ನು ಮಂಕಾಗಿದೆ.

ಹೌದು… ಕೆಪಿಸಿಸಿ ಕಿರೀಟದ ಯುದ್ಧದ ದಿಕ್ಕು ಬದಲಿಸಿದ್ರಾ ಸಿದ್ದು.. ರಾಜೀನಾಮೆಯ ಬಳಿಕೆ ಸಿದ್ದರಾಮಯ್ಯ ಕಥೆ ಮುಗಿತೂ ಅಂತ ಕೆಲ ನಾಯಕರು ಬೀಗುತ್ತಿದ್ದರು. ಆದರೆ ಡಿ 16 ರ ಸಂಜೆ ದೆಹಲಿಯಿಂದ ಬಂದ ಒಂದು ಫೋನ್ ಕಾಲ್ ನಿಂದ ಸಿದ್ದರಾಮಯ್ಯ ಅಸಲಿ ಆಟ ಶುರು ಮಾಡಿದ್ದಾರೆ. ಕೆ.ಹೆಚ್ ಮುನಿಯಪ್ಪ ಹಾಗೂ ಡಿಕೆ ಶಿವಕುಮಾರ್ ಜೊತೆ ಎಂಬಿ ಪಾಟೀಲ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಲಾಬಿ ನಡೆಸಿದ್ದರು.

ಆದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಎಂ.ಬಿ ಪಾಟೀಲ್‌ಗೆ ನೀಡಿ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮುಂದೆ ಮಾಜಿ ಸಿಎಂ ಸಿದ್ದರಾಮಯ್ಯ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ದೆಹಲಿಯಲ್ಲಿ ಮಂಗಳವಾರ ಸೋನಿಯಾ ಭೇಟಿ ಮಾಡಿದ್ದ ಸಿದ್ದರಾಮಯ್ಯ ಪಕ್ಷ ಸಂಘಟನೆ ಹಾಗೂ ಹೊಂದಾಣಿಗೆ ದೃಷ್ಟಿಯಲ್ಲಿ ಡಿ.ಕೆ ಶಿವಕುಮಾರ್‌ ಬದಲಾಗಿ ಎಂ.ಬಿ ಪಾಟೀಲ್‌ ಅವರ ಆಯ್ಕೆ ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಸೋನಿಯಾ ಗಾಂಧಿ ಅವರ ಜೊತೆಗೆ ಸುಮಾರು 45 ನಿಮಿಷಗಳ ಕಾಲ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದಾರೆ. ಅದಕ್ಕೂ ಮೊದಲು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಹಾಗೂ ಅಹ್ಮದ್ ಪಟೇಲ್ ಜೊತೆಗೂ ಸುದೀರ್ಘವಾಗಿ ಸಿದ್ದರಾಮಯ್ಯ ಅವರು ಮಾತನಾಡಿದ್ದರು.

ಮಾತುಕತೆಯ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕಾಂಗ ನಾಯಕ ಸ್ಥಾನವನ್ನು ಮುಂದುವರಿಸಿಕೊಂಡು ಹೋಗುವಂತೆ ಸಿದ್ದರಾಮಯ್ಯ ಅವರಿಗೆ ಸೋನಿಯಾ ಗಾಂಧಿ ಸೂಚಿಸಿದ್ದಾರೆಂದು ತಿಳಿದುಬಂದಿದೆ. ಇದೇ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ ಕೆ ಶಿವಕುಮಾರ್ ಬದಲಾಗಿ ತನ್ನ ಆಪ್ತರಾದ ಎಂಬಿ ಪಾಟೀಲ್‌ ಅಥವಾ ಕೃಷ್ಣ ಭೈರೇಗೌಡ ಅವರಿಗೆ ನೀಡಿ ಎಂದು ಬೇಡಿಕೆ ಇಟ್ಟಿದ್ದಾರೆ.

ಕೆಪಿಸಿಸಿ ಪಟ್ಟಕ್ಕಾಗಿ ಡಿಕೆಶಿ ಹಾಗೂ ಎಂಬಿಪಿ ನಡುವೆ ತೀವ್ರ ಪೈಪೋಟಿ ನಡೆಯುತ್ತಿದ್ದು ಹಿರಿಯ ಮುಖಂಡರು ಡಿಕೆಶಿ ಪರವಾಗಿ ಒಲವು ವ್ಯಕ್ತಪಡಿಸಿದ್ದರೆ ಸಿದ್ದರಾಮಯ್ಯ ಬಣ ಎಂಬಿಪಿಗೆ ಪಟ್ಟಕಟ್ಟುವ ಉತ್ಸಾಹದಲ್ಲಿದೆ.

ಒಂದು ವೇಳೆ ಡಿಕೆ ಶಿವಕುಮಾರ್ ಅವರಿಗೆ ಅಧ್ಯಕ್ಷ ಸ್ಥಾನ ನೀಡಿದರೆ ಪಕ್ಷದ ಹಿಡಿತ ಸಿದ್ದರಾಮಯ್ಯ ಕೈ ತಪ್ಪಿ ಹೋಗುತ್ತದೆ. ಈ ಕಾರಣಕ್ಕಾಗಿ ಎಂಬಿ ಪಾಟೀಲ್‌ ಅವರಿಗೆ ನೀಡಿದರೆ ಸಿದ್ದರಾಮಯ್ಯ ಹಿಡಿತದಲ್ಲೇ ಪಕ್ಷ ಮುಂದುವರಿಯಲಿದ್ದು ಲಿಂಗಾಯತ ಸಮುದಾಯವನ್ನು ಒಳಗೊಂಡಂತೆ ಆಗುತ್ತದೆ ಎಂಬುವುದು ಸಿದ್ದರಾಮಯ್ಯ ಬಣದ ವಾದ.

ಒಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್ ನಲ್ಲಿ ಮತ್ತೆ ಮನಸ್ತಾಪಗಳು ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದ್ದು. ಮುಂದಾಗುವ ಬೆಳವಣಿಗೆಗಳನ್ನು ಕಾದು ನೋಡಬೇಕಿದೆ.

Categories
Breaking News Cricket

ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ಜಯ : ಪಾಕ್ ಸೆಮಿಫೈನಲ್ ಕನಸು ಭಗ್ನ

ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ಜಯಗಳಿಸುತ್ತಿದ್ದಂತೆ ಪಾಕಿಸ್ತಾನದ ಸೆಮಿಫೈನಲ್ ಪ್ರವೇಶದ ಕನಸು ಭಗ್ನಗೊಂಡಿದೆ.

ಬುಧವಾರದ ಪಂದ್ಯದಲ್ಲಿ ಒಂದು ವೇಳೆ ಇಂಗ್ಲೆಂಡ್ ಸೋತು, ಶುಕ್ರವಾರ ನಡೆಯಲಿರುವ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಜಯಗಳಿಸಿದರೆ ಪಾಕ್ ಸುಲಭವಾಗಿ ಸೆಮಿಫೈನಲ್ ಪ್ರವೇಶಿಸಬಹುದಿತ್ತು. ಆದರೆ ಈ ಪಂದ್ಯವನ್ನು 119 ರನ್ ಗಳಿಂದ ಇಂಗ್ಲೆಂಡ್ ಜಯಗಳಿಸಿದ ಪರಿಣಾಮ ಪಾಕ್ ಈಗ ಟೂರ್ನಿಯಿಂದಲೇ ನಿರ್ಗಮಿಸಿದೆ. ಆದರೂ ಒಂದು ವೇಳೆ ಪವಾಡ ಏನಾದರೂ ನಡೆದು ಬಾಂಗ್ಲಾ ತಂಡವನ್ನು ಭಾರೀ ಅಂತರದಿಂದ ಸೋಲಿಸಿದರೆ ಪಾಕಿಸ್ತಾನ ಸೆಮಿಫೈನಲ್ ಪ್ರವೇಶಿಸುವ ಸಾಧ್ಯತೆಯಿದೆ.

ಆಸ್ಟ್ರೇಲಿಯಾ, ಭಾರತ, ಇಂಗ್ಲೆಂಡ್ ತಂಡಗಳು ಕ್ರಮವಾಗಿ 14, 13, 12 ಅಂಕಗಳನ್ನು ಪಡೆದು ಸೆಮಿಫೈನಲ್ ಪ್ರವೇಶಿಸಿದ್ದರೆ ನ್ಯೂಜಿಲೆಂಡ್ 11 ಅಂಕಗಳಿಸಿದೆ. ಪಾಕಿಸ್ತಾನ 9 ಅಂಕ ಗಳಿಸಿ 5ನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ ತಾನು ಆಡಿದ ಎಲ್ಲ 9 ಪಂದ್ಯಗಳಲ್ಲಿ 5 ಪಂದ್ಯ ಗೆದ್ದು, 3ರಲ್ಲಿ ಸೋತು, ಒಂದು ಪಂದ್ಯ ಮಳೆಯಿಂದ ರದ್ದಾದ ಪರಿಣಾಮ +0.175 ರನ್ ರೇಟ್‍ನೊಂದಿಗೆ 11 ಅಂಕ ಸಂಪಾದಿಸಿದೆ. ಇತ್ತ ಪಾಕಿಸ್ತಾನ 8 ಪಂದ್ಯಗಳಲ್ಲಿ 4ರಲ್ಲಿ ಗೆದ್ದು, 3ರಲ್ಲಿ ಸೋತು, ಒಂದು ಪಂದ್ಯ ಮಳೆಯಿಂದ ರದ್ದಾದ ಪರಿಣಾಮ -0.792 ರನ್ ರೇಟ್‍ನೊಂದಿಗೆ 9 ಅಂಕ ಗಳಿಸಿದೆ.

ನಾಳಿನ ಪಂದ್ಯದಲ್ಲಿ ಪಾಕಿಸ್ತಾನ ಗೆದ್ದರೆ  11 ಅಂಕಗಳಿಸುತ್ತದೆ. ಎರಡು ತಂಡಗಳು ಅಂಕಗಳು ಸಮವಾಗಿದ್ದಾಗ ರನ್‍ರೇಟ್ ಲೆಕ್ಕಾಚಾರ ಮಾಡಲಾಗುತ್ತದೆ. ಒಂದೇ ಪಂದ್ಯದಲ್ಲಿ ನ್ಯೂಜಿಲೆಂಡಿನ ರನ್ ರೇಟ್‍ಗಿಂತಲೂ ಉತ್ತಮ ರನ್ ರೇಟ್ ಹೊಂದಬೇಕಾದರೆ ಪಾಕಿಸ್ತಾನ ಪವಾಡವೇ ನಡೆಸಬೇಕು. ಮೇಲೆ ನೀಡಲಾಗಿರುವ ಲೆಕ್ಕಾಚಾರಗಳು ಓದಲು ಚೆನ್ನಾಗಿದೆಯೋ ಹೊರತು ಅಂಗಳದಲ್ಲಿ ಜಾರಿಯಾಗುವುದು ಅಸಾಧ್ಯ. ಈ ಪವಾಡ ನಡೆಯಲು ಸಾಧ್ಯವಿಲ್ಲದ ಕಾರಣ ಪಾಕಿಸ್ತಾನ ಈಗ ಟೂರ್ನಿಯಿಂದಲೇ ಹೊರ ನಡೆದಿದೆ.

Categories
Breaking News Political State

ಕಾಂಗ್ರೆಸ್‍ಗೆ ಪವರ್ ಫುಲ್ ಸಚಿವರೇ ಅಧಿಪತಿ : ಕನಸಿನ ಹುದ್ದೆಗೇರ್ತಾರಾ ಡಿಕೆಶಿ?

ರಾಜ್ಯ ರಾಜಕಾರಣದಲ್ಲಿ ಕನಸಿನ ಹುದ್ದೆ ಏರಲೇಬೇಕು ಎಂದುಕೊಂಡಿರುವ ಸಚಿವ ಡಿಕೆ ಶಿವಕುಮಾರ್ ಭವಿಷ್ಯ ಜೂನ್ 25ಕ್ಕೆ ನಿರ್ಧಾರ ಆಗಲಿದೆ. ಜೂನ್ 25ರ ಸತ್ವ ಪರೀಕ್ಷೆಯಲ್ಲಿ ಪಾಸಾದರೆ, ರಾಜ್ಯ ಕಾಂಗ್ರೆಸ್‍ಗೆ ಡಿಕೆಶಿಯೇ ಅಧಿಪತಿ ಎನ್ನುವ ಮಾತು ಕಾಂಗ್ರೆಸ್ ವಲಯದಲ್ಲಿ ಜೋರಾಗಿ ಕೇಳಿ ಬರುತ್ತಿದೆ.

ಜೂನ್ 25ರಂದು ಬೆಂಗಳೂರಿನ ಜನ ಪ್ರತಿನಿಧಿಗಳ ನ್ಯಾಯಾಲಯದಲ್ಲಿ ಸಚಿವ ಡಿ.ಕೆ ಶಿವಕುಮಾರ್ ಅವರ ಐಟಿ ಕೇಸ್‍ಗೆ ಸಂಬಂಧಿಸಿದ ದೂರೊಂದರ ತೀರ್ಪು ಪ್ರಕಟವಾಗಲಿದೆ. ತೀರ್ಪು ಡಿ.ಕೆ ಶಿವಕುಮಾರ್ ಪರವಾಗಿ ಬಂದರೆ ಅವರಿಗೆ ದೊಡ್ಡ ಮಟ್ಟದ ರಿಲೀಫ್ ಸಿಗಲಿದೆ. ಒಂದು ಸಾರಿ ಡಿಕೆಶಿಗೆ ಕೋರ್ಟ್ ಕೇಸಿನ ಜಂಜಾಟದಿಂದ ರಿಲೀಫ್ ಸಿಕ್ಕರೆ ಡಿಕೆಶಿ ರಾಜ್ಯದಲ್ಲಿ ಪಕ್ಷದ ಉಸ್ತುವಾರಿ ಹೊರಲು ಜೈ ಎನ್ನುವ ಸಾಧ್ಯತೆ ಇದೆ.

ಈಗ ಹೇಗಿದ್ದರೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬದಲಾವಣೆಯ ಮಾತು ಕೇಳಿ ಬರುತ್ತಿದ್ದು, ಡಿ.ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬರೋದು ಗ್ಯಾರಂಟಿ ಎಂಬ ಮಾತುಗಳು ಕೂಡ ಕೇಳಿಬರುತ್ತಿದೆ. ಕೆಪಿಸಿಸಿ ಅಧ್ಯಕ್ಷನಾಗಿ ಪಕ್ಷವನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತಂದು ರಾಜ್ಯದ ಸಿಎಂ ಆಗಬೇಕು ಎಂಬುದು ಡಿಕೆಶಿ ಕನಸು. ಡಿಕೆಶಿ ಸಂಕಷ್ಟದ ಪರಿಸ್ಥಿತಿಯಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಟ್ರಬಲ್ ಶೂಟರ್ ಎನಿಸಿಕೊಂಡಿದ್ದಾರೆ.

ತಮ್ಮ ಬಹು ದಿನಗಳ ಬಯಕೆಯ ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ಅದರ ಮೂಲಕ ಸಿಎಂ ಖುರ್ಚಿ ಕನಸು ನನಸು ಮಾಡಿಕೊಳ್ಳಲು ಡಿಕೆಶಿ ಮೆಗಾ ಪ್ಲಾನ್ ಮಾಡಿದ್ದಾರೆ. ಯಾವುದಕ್ಕೂ ಜೂನ್ 25 ರವರೆಗೆ ನಾನು ಮಾತನಾಡಲ್ಲ ಎಂದು ಡಿಕೆಶಿ ಹೇಳಿದ್ದಾರೆ. ಆದರೆ 25ರ ನಂತರ ಅಸಲಿ ಆಟ ಶುರು ಮಾಡುತ್ತಾರೆ.

Categories
Breaking News Cricket

ವಿಶ್ವಕಪ್ : ನ್ಯೂಜಿಲೆಂಡ್ ವಿರುದ್ಧ ಕಾದಾಟ – ಗೆಲುವಿನ ಕನಸಿನಲ್ಲಿರುವ ವಿರಾಟ್ ಪಡೆ

ಒಂದು ಕಡೆ ಶಿಖರ್ ಧವನ್ ಅವರ ಗಾಯ, ಇನ್ನೊಂದೆಡೆ ಗೆಲುವಿನ ಒತ್ತಡದೊಂದಿಗೆ ಟೀಮ್ ಇಂಡಿಯಾ ಗುರುವಾರ ನಾಟಿಂಗ್ ಹ್ಯಾಮ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಕಾದಾಟ ನಡೆಸಲಿದ್ದು, ವಿರಾಟ್ ಪಡೆ ಹ್ಯಾಟ್ರಿಕ್ ಗೆಲುವಿನ ಕನಸಿನಲ್ಲಿದೆ.
ಎರಡೂ ತಂಡಗಳು ಬಲಿಷ್ಠವಾಗಿದ್ದು, ಎರಡೂ ತಂಡಗಳ ಫೈಟ್ ರೋಚಕತೆ ಹುಟ್ಟಿಸಿದೆ. ಆಡಿರುವ ಮೂರು ಪಂದ್ಯಗಳನ್ನು ಗೆದ್ದು ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಕಿವೀಸ್, ಮೂರನೇ ಸ್ಥಾನದಲ್ಲಿರುವ ಭಾರತ ತಂಡದ ವಿರುದ್ಧ ಕಾದಾಟ ನಡೆಸಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಬಡ್ತಿ ಪಡೆಯುವ ಕನಸು ಬ್ಲ್ಯೂ ಬಾಯ್ಸ್ ತಂಡದ್ದಾಗಿದೆ.
ವಿಶ್ವಕಪ್ ನಲ್ಲಿ ಉಭಯ ತಂಡಗಳು ಈ ವರೆಗೆ 7 ಬಾರಿ ಮುಖಾಮುಖಿಯಾಗಿದ್ದು, ಭಾರತ 3 ರಲ್ಲಿ ಜಯ ಸಾಧಿಸಿದರೆ, ನಾಲ್ಕರಲ್ಲಿ ಕಿವೀಡ್ ಜಯ ಸಾಧಿಸಿದೆ. ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಉಭಯ ತಂಡಗಳು ಬಲಾಢ್ಯವಾಗಿದ್ದು, ಪಂದ್ಯ ರೋಚಕತೆ ಹೆಚ್ಚೊಸಿದೆ.
ನಾಲ್ಕನೇ ಕ್ರಮಾಂಕದಲ್ಲಿ ಯಾರು..?
ಹೆಬ್ಬೆರಳಿನ ಗಾಯದಿಂದ ಹೊರಕ್ಕೆ ಉಳಿದಿರುವ ಗಬ್ಬರ್ ಸಿಂಗ್ ಖ್ಯಾತೀಯ ಶಿಖರ್ ಧವನ್ ಅವರ ಬದಲಿಗೆ ಆರಂಭಿಸುವ ಹೊಣೆಯನ್ನು ಕರ್ನಾಟಕದ ಸ್ಟಾರ್ ಆಟಗಾರ ಕೆ.ಎಲ್.ರಾಹುಲ್ ಹೊತ್ತುಕೊಳ್ಳಲಿದ್ದಾರೆ. ರೋಹಿತ್ ಜೊತೆಗೆ ಕಿವೀಸ್ ಬೌಲರ್ ಗಳನ್ನು ಕಾಡಲು ಕನ್ನಡಿಗ ಪ್ಲಾನ್ ಮಾಡಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ತಮ್ಮ ಭರ್ಜರಿ ಫಾರ್ಮ್ ಮುಂದು ವರೆಸಲು ಯೋಜನೆ ರೂಪಿಸಿಕೊಂಡಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಯಾರು ಎಂಬ ಪ್ರಶ್ನೆ ತಂಡದ ಚಿಂತೆಯನ್ನು ದ್ವಿಗುಣ ಗೊಳಿಸಿದೆ.
ವಿಜಯ್ ಶಂಕರ್ ಹಾಗೂ ದಿನೇಶ್ ಕಾರ್ತಿಕ್ ಈ ಸ್ಥಾನದ ಮೇಲೆ ಕಣ್ಣು ನೆಟ್ಟಿದ್ದು, ಮ್ಯಾನೇಜ್ಮೆಂಟ್ ಯಾರಿಗೆ ಮಣೆ ಹಾಕುತ್ತದೆ ಎಂಬುದು ಕುತೂಹಲ ಮೂಡಿಸಿದೆ. ಧೋನಿ, ಕೇದಾರ್ ಜಾದವ್, ಹಾರ್ದಿಕ್ ಪಾಂಡ್ಯ ಸಮಯೋಚಿತ ಬ್ಯಾಟಿಂಗ್ ನಡೆಸಬಲ್ಲರು.
ಜಸ್ಪ್ರಿತ್ ಬೂಮ್ರಾ, ಭುವನೇಶ್ವರ್ ಕುಮಾರ್ ಅವರು ವಾತವಾರಣದ ಲಾಭ ಪಡೆದು ಬೌಲಿಂಗ್ ನಡೆಸಬೇಕಿದೆ. ಒಂದು ವೇಳೆ ಪಿಚ್ ಪೇಸ್ ಬೌಲರ್ಸ್ ಗಳಿಗೆ ನೆರವು ನೀಡಿದಲ್ಲಿ, ಶಮಿ ಅವರಿಗೆ ಸ್ಥಾನ ನೀಡಿದರೂ ಅಚ್ಚರಿ ಇಲ್ಲ. ರಿಸ್ಟ್ ಸ್ಪಿನ್ ಬೌಲರ್ಸ್ ಗಳಾದ ಯಜುವೇಂದ್ರ ಚಹಾಲ್ ಹಾಗೂ ಕುಲ್ದೀಪ್ ಯಾದವ್ ಅವರು ವಿಕೆಟ್ ಬೇಟೆ ನಡೆಸಬೇಕಿದೆ.
ನ್ಯೂಜಿಲೆಂಡ್ ತಂಡದಲ್ಲೂ ಸ್ಟಾರ್ ಆಟಗಾರರು ಇದ್ದು, ತಂಡಕ್ಕೆ ನೆರವಾಗಬಲ್ಲ ಸಾಮರ್ಥ ಹೊಂದಿದ್ದಾರೆ. ಕೇನ್ ವಿಲಿಯಮ್ಸನ್, ಮಾರ್ಟಿನ್ ಗುಪ್ಟಿಲ್, ಕಾಲಿನ್ ಮುನ್ರೊ, ರಾಸ್ ಟೇಲರ್ ಬ್ಯಾಟಿಂಗ್ ನಲ್ಲಿ ಆಧಾರವಾದರೆ, ಟ್ರೆಂಟ್ ಬೌಲ್ಟ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟನರ್ ವಿಕೆಟ್ ಬೇಟೆ ನಡೆಸಬಲ್ಲರು.
ಕಳೆದ ಎರಡು ದಿನಗಳಿಂದ ಸುರಿದ ಮಳೆಯಿಂದಾಗಿ ಸತತ ಎರಡು ಪಂದ್ಯಗಳು ರದ್ದಾಗಿವೆ. ಅದರಂತೆ ನಾಟಿಂಗ್‌ಹ್ಯಾಮ್‌ನಲ್ಲೂ ಕೂಡ ವಾತಾವರಣ ಚೆನ್ನಾಗಿಲ್ಲ. ಹಾಗಾಗಿ, ನಾಳೆ ಮಳೆ ಬರುವ ಸಾಧ್ಯತೆ ದಟ್ಟವಾಗಿದೆ. ಹಾಗಾಗಿ, ನಾಳಿನ ಪಂದ್ಯಕ್ಕೆ ಮಳೆ ಭೀತಿ ಶುರುವಾಗಿದೆ.
Categories
Breaking News Cricket

cricket world cup : ಆಫ್ರಿಕಾ ವಿರುದ್ಧ ವಿಶ್ವಕಪ್ ನಲ್ಲಿ ಅಭಿಯಾನ ಆರಂಭಿಸಲಿರುವ ವಿರಾಟ್ ಪಡೆ

ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡ ಬುಧವಾರ ಅಂಗಳ ಪ್ರವೇಶಿಸಲಿದ್ದು, ಮೂರನೇ ವಿಶ್ವಕಪ್ ಕನಸಿನ ಅಭಿಯಾನವನ್ನು ವಿರಾಟ್ ಕೊಹ್ಲಿ ಬಳಗ ಆರಂಭಿಸಲಿದೆ.
ಭರ್ಜರಿ ಪಾರ್ಮ್ ನಲ್ಲಿರುವ ಟೀಮ್ ಇಂಡಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಸೌಥ್ ಹ್ಯಾಮ್ಟನ್ ನಲ್ಲಿ ಅದೃಷ್ಟ ಪರೀಕ್ಷೆ ನಡೆಸಲಿವೆ. ಹರಿಣಗಳ ಪಡೆಗೆ ಗಾಯದ ಸಮಸ್ಯೆ ಬಹುವಾಗಿ ಕಾಡುತ್ತಿದ್ದು, ಹ್ಯಾಟ್ರಿಕ್ ಸೋಲಿನ ಭೀತಿ ಅನುಭವಿಸುತ್ತಿದೆ. ದಕ್ಷಿಣ ಆಫ್ರಿಕಾ ಈವರೆಗೆ ವಿಶ್ವಕಪ್ ನಲ್ಲಿ ಒಮ್ಮೆಯೂ ಹ್ಯಾಟ್ರಿಕ್ ಸೋಲು ಅನುಭವಿಸಿಲ್ಲ ಎಂಬುದೇ ವಿಶೇಷ.
ವಿಶ್ವದ ನಂಬರ್ ಆಟಗಾರ ವಿರಾಟ್ ಕೊಹ್ಲಿ ಹಾಗೂ ಮಾರಕ ಬೌಲರ್ ಜಸ್ಪ್ರಿತ್ ಬೂಮ್ರಾ ಅಂಗಳಕ್ಕೆ ಇಳಿಯಲಿದ್ದು ಕುತೂಹಲ ಮನೆ ಮಾಡಿದೆ. 19 ವರ್ಷದೊಳಗಿನವರ ವಿಶ್ವಕಪ್ ಗೆದ್ದ ಭಾರತ ತಂಡದ ನಾಯಕರಾಗಿದ್ದ ವಿರಾಟ್ ಕೊಹ್ಲಿಗೆ ಇದೀಗ ಹಿರಿಯರ ವಿಶ್ವಕಪ್ ಗೆದ್ದು ಈ ಸಾಧನೆ ಮಾಡಿದ ಮೊದಲಿಗ ಎಂಬ ದಾಖಲೆ ಬರೆಯುವ ಉತ್ತಮ ಅವಕಾಶ ಹೊಂದಿದ್ದಾರೆ. ಹೆಬ್ಬೆರಳಿಗೆ ಗಾಯವಾಗಿದ್ದರೂ ವಿರಾಟ್ ಕೊಹ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.
ಭಾರತದ ಬ್ಯಾಟಿಂಗ್ ಹಾಗೂ ಬೌಲಿಂಗ್ ಬಲಾಡ್ಯವಾಗಿದ್ದು, ಎದುರಾಳಿಗಳನ್ನು ಕಾಡಲು ಪ್ಲಾನ್ ಮಾಡಿಕೊಂಡಿದೆ. ಶಿಖರ್ ಧವನ್, ರೋಹಿತ್ ಶರ್ಮಾ ಉತ್ತಮ ಆರಂಭ ನೀಡುವ ವಿಶ್ವಾಸದಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ ಉತ್ತಮ ಫಾರ್ಮ್ ನಲ್ಲಿದ್ದು ರನ್ ಕಲೆ ಹಾಕಬಲ್ಲರು. ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ರನ್ ವೇಗಕ್ಕೆ ಚುರುಕು ಮುಟ್ಟಿಸಬಲ್ಲರು.
ಭಾರತದ ಬೌಲಿಂಗ್ ವಿಭಾಗದ ನೊಗವನ್ನು ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬೂಮ್ರಾ ಹೊತ್ತುಕೊಳ್ಳುತ್ತಿದ್ದು, ಶಮಿ ಸ್ವಿಂಗ್ ಮೂಲಕ ಎದುರಾಳಿಗಳಿಗೆ ಕಾಡಲಿದ್ದಾರೆ. ರಿಸ್ಟ್ ಸ್ಪಿನ್ ಬೌಲರ್ ಕುಲ್ದೀಪ್ ಯಾದವ್ ಹಾಗೂ ಯಜುವೇಂದ್ರ ಚಹಾಲ್ ಫಿರ್ಕಿ ಜಾದವು ಫ್ಲ್ಯಾಟ್ ಪಿಚ್ ನಲ್ಲಿ ನಡೆಯಬೇಕಿದೆ.
ಮತ್ತೊಂದೆಡೆ ದಕ್ಷಿಣ ಆಫ್ರಿಕಾ ತಂಡ ಗಾಯಗೊಂಡಿರುವ ವೇಗಿ ಡೇಲ್ ಸ್ಟೇನ್ ಅವರನ್ನು ಈ ಪಂದ್ಯದಲ್ಲಿ ಕಣಕ್ಕಿಳಿಸುವ ಸಾಧ್ಯತೆ ಇದೆ. ಆದರೆ ಮತ್ತೊಬ್ಬ ವೇಗಿ ಲುಂಗಿ ನಿಗ್ಡಿ ಗಾಯಗೊಂಡಿದ್ದು, ಈ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಸ್ಪಿನ್ನರ್ ಇಮ್ರಾನ್ ತಾಹಿರ್ ಮೇಲೆ ಒತ್ತಡ ಹೆಚ್ಚಿದೆ.
ಬ್ಯಾಟಿಂಗ್ ನಲ್ಲಿ ಕ್ವಿಂಟನ್ ಡಿ ಕಾಕ್ ಮತ್ತು ಫಾಫ್ ಡು ಪ್ಲೆಸಿಸ್ ಹೊರತುಪಡಿಸಿದರೆ ಉಳಿದ ಬ್ಯಾಟ್ಸ್ ಮನ್ ಗಳ ಬಗ್ಗೆ ಹೇಳಿಕೊಳ್ಳುವಂತಿಲ್ಲ. ಹಶೀಮ್ ಆಮ್ಲಾ ಮತ್ತು ಡುಮಿನಿ ಮೊದಲಿನಂತೆ ಆಡುತ್ತಿಲ್ಲ.
Categories
Breaking News International Technology

ಫ್ಯಾಮಿಲಿ ಫೋಟೋ ತೆಗೆಸಿಕೊಳ್ಳುವ ಕನಸು ನನಸು ಮಾಡಲು ಬಂದ ಮೃತಪಟ್ಟ ತಾಯಿ..!

ವ್ಯಕ್ತಿಯೊಬ್ಬರು ಮೃತಪಟ್ಟ ಬಳಿಕವೂ ಫೋಟೋಗಳಲ್ಲಿ ಕಾಣಿಸಿಕೊಂಡರೆ ನಂಬಲು ಅಸಾಧ್ಯ. ಆದರೆ ಮಲೇಷ್ಯಾ ಇಂತಹದೊಂದು ಘಟನೆ ನಡೆದಿದೆ. ಹೆರಿಗೆ ಸಮಯದಲ್ಲಿ ಮೃತಪಟ್ಟಿದ್ದ ತಾಯಿ 5 ತಿಂಗಳ ಬಳಿಕ ಫ್ಯಾಮಿಲಿ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ.

ಹೌದು. ಇದೇನಪ್ಪ ಸಾವನ್ನಪ್ಪಿದವರು ಫೋಟೋದಲ್ಲಿ ಹೇಗೆ ಬಂದರು ಎಂದು ಅಚ್ಚರಿ ಆಗಬಹುದು, ಆದರೆ ತಂತ್ರಜ್ಞಾನದಿಂದ ಇದು ನಿಜವಾಗಿದೆ. ಮಲೇಷ್ಯಾದ ಮಹಿಳಾ ಫೋಟೋಗ್ರಾಫರ್ ಜಾರಾ ಹಲೀನಾ ಅವರ ಸೃಜನಶೀಲತೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಶಂಸೆ ಪಡೆದಿದೆ.

 

ಮಲೇಷ್ಯಾದ ಅಡೆಲಿನ್ ನೆಲ್ಡಾ ನಾಲ್ಕನೇ ಮಗುವಿಗೆ ತಾಯಿಯಾಗುವ ಸಂತಸದಲ್ಲಿದ್ದರು. ನಾಲ್ಕನೇ ಮಗು ಜನಿಸಿದ ಬಳಿಕ ಫ್ಯಾಮಿಲಿ ಫೋಟೋ ಶೂಟ್ ಮಾಡಿಸಬೇಕೆಂಬ ಆಸೆ ಹೊಂದಿದ್ದರು. ಆದರಿಂದ ಅವರು ಫೋಟೋಗ್ರಾಫರ್ ಜಾರಾರನ್ನು ಸಂಪರ್ಕಿಸಿ, ಡೆಲಿವರಿ ಬಳಿಕ ಫ್ಯಾಮಿಲಿ ಫೋಟೋಶೂಟ್ ಮಾಡಿಸಲು ನಿರ್ಧರಿಸಿದ್ದರು. ಆದರೆ ದುರಾದೃಷ್ಟವಶಾತ್ ಡೆಲಿವರಿ ವೇಳೆ ಅಡೆಲಿನಾ ಮೃತಪಟ್ಟಿದ್ದಾರೆ.

ಅಡೆಲಿನ್ ಸಾವಿನಿಂದ ಆಕೆಯ ಕುಟುಂಬ ಸದಸ್ಯರು ಮಾತ್ರವಲ್ಲದೇ ಛಾಯಾಗ್ರಾಹಕಿ ಜಾರಾ ಕೂಡಾ ಬಹಳಷ್ಟು ದುಃಖಿತರಾಗಿದ್ದರು. ಅಲ್ಲದೇ ಅಡೆಲಿನ್ ಸಾವಿನಿಂದ ಆಕೆ ಕನಸಾಗಿದ್ದ ಫ್ಯಾಮಿಲಿ ಫೋಟೋಶೂಟ್ ಕೂಡಾ ಕನಸಾಗಿಯೇ ಉಳಿದಿತ್ತು. ಆದರೆ ಛಾಯಾಗ್ರಾಹಕಿ ಆ ಕನಸನ್ನ ನನಸು ಮಾಡಿದ್ದಾರೆ.

ಅಡೆಲಿನ್ ಸಾವನ್ನಪ್ಪಿದ 5 ತಿಂಗಳಲ್ಲೇ ಫ್ಯಾಮಿಲಿ ಫೋಟೋಶೂಟ್ ಆಯೋಜಿಸಿದ ಜಾರಾ ತಂತ್ರಜ್ಞಾನವನ್ನು ಬಳಸಿ ಅಡೆಲಿನ್‍ರನ್ನು ಕೂಡಾ ಈ ಫೋಟೋಗಳಲ್ಲಿ ಕಾಣುವಂತೆ ಕ್ರಿಯೇಟಿವ್ ಎಡಿಟಿಂಗ್ ಮಾಡಿ ಬೇಷ್ ಅನ್ನಿಸಿಕೊಂಡಿದ್ದಾರೆ.

ಸದ್ಯ ಈ ಫೋಟೋಶೂಟ್‍ನಲ್ಲಿ ತೆಗೆದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ಬಹುತೇಕ ಎಲ್ಲಾ ಛಾಯಾಗ್ರಾಹಕರು ಜಾರಾರ ಈ ಪ್ರಯತ್ನಕ್ಕೆ ಫಿದಾ ಆಗಿದ್ದಾರೆ.

Categories
Breaking News International Sports

ವಿಶ್ವಕಪ್ ಹಾಕಿ: ಸೆಮಿಫೈನಲ್ಸ್ ಗೆ ಅರ್ಹತೆ ಪಡೆಯುವ ಭಾರತದ ಕನಸು ಭಗ್ನ

ಭಾರತ ತಂಡ ವಿಶ್ವ ಕಪ್ ಹಾಕಿ ಟೂರ್ನಿಯ ನಾಲ್ಕರ ಘಟ್ಟ ತಲುಪುವ ಕನಾಉ ನುಚ್ಚು ನೂರಾಗಿದೆ. 50 ನೇ ನಿಮಿಷದಲ್ಲಿ ಗೋಲು ಬಿಟ್ಟ ಮನ್ ಪ್ರೀತ್ ಪಡೆ, ಉಪಾಂತ್ಯದ ಕನಸನ್ನು ಕೈ ಬಿಟ್ಟಿದೆ. ಗುರುವಾರ ಕಳಿಂಗ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ, ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಭರ್ಜರಿ ಪ್ರದರ್ಶನ ನೀಡುವ ವಿಶ್ವಾಸ ಹೊಂದಿತ್ತು.ಉತ್ತಮ ರಕ್ಷಣಾ ಆಟದ ಪ್ರದರ್ಶನ ನೀಡಿದ ಭಾರತ ಆರಂಭದಲ್ಲಿ ಮೇಲುಗೈ ಸಾಧಿಸುವ ಕನಸು, 12ನೇ ನಿಮಿಷದಲ್ಲಿ ಸಫಲವಾಯಿತು. ಆಕಾಶ್ ದೀಪ್ ಸಿಂಗ್ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಬಳಸಿಕೊಂಡು ತಂಡಕ್ಕೆ 1 ಗೋಲು ಮುನ್ನಡೆ ದೊರಕಿಸಿ ಕೊಟ್ಟರು.

ಆದ್ರೆ ಈ ಅವಧಿಯ ಕೊನೆಯ ನಿಮಿಷದಲ್ಲಿ ನೆದರ್ಲ್ಯಾಂಡ್ಸ್ ತಂಡ ಗೋಲು ಬಾರಿಸಿ, ಶಾಕ್ ನೀಡಿತು. ಎರಡು ಹಾಗೂ ಮೂರನೇ ಅವಧಿಯ ಆಟದಲ್ಲಿ ಗೋಲು ದಾಖಲಿಸುವ ಉಭಯ ತಂಡಗಳ ಆಸೆ ಮಣ್ಣು ಪಾಲಾಯಿತು.

ಕೊನೆಯ ಅವಧಿಯಲ್ಲಿ ಸಮಯೋಚಿತ ಆಟ ಆಡಿದ ನೆದರ್ಲೆಂಡ್ಸ್‌ 50 ನೇ ನಿಮಿಷದಲ್ಲಿ ಗೋಲು ದಾಖಲಿಸಿ ಜಯ ಸಾಧಿಸಿತು. ಭಾರತಕ್ಕೆ ಪಂದ್ಯದ ವೇಳೆ 2 ಪೆನಾಲ್ಟಿ ಕಾರ್ನರ್ ಅವಕಾಶಗಳು ಲಭಿಸಿದರೆ, ನೆದರ್ಲೆಂಡ್ಸ್‌ ತಂಡಕ್ಕೆ ಐದು ಅವಕಾಶಗಳು ಲಭಿಸಿದ್ದವು.

Categories
Breaking News Political State

ತರಾತುರಿಯಲ್ಲಿ ಇಂದಿರಾ ಕ್ಯಾಂಟೀನ್ ಲೋಕಾರ್ಪಣೆ : ನನಸಾಯಿತು ಮಾಜಿ ಸಿಎಂ ಕನಸು

ಮಾಜಿ ಸಿ.ಎಂ.ಸಿದ್ದರಾಮಯ್ಯ ರವರ ಮಹತ್ವಾಕಾಂಕ್ಷಿ ಯೋಜನೆ ಇಂದಿರಾ ಕ್ಯಾಂಟೀನ್. ಇದು ಎಲ್ಲೆಡೆ ಪ್ರಾರಂಭಗೊಂಡು ಹಸಿದವರಿಗೆ ಅತಿ ಕಡಿಮೆ ದರದಲ್ಲಿ ಅನ್ನ ನೀಡುತ್ತಿದೆ. ಆದರೆ ಇದು  ಮುಖ್ಯಮಂತ್ರಿಗಳ ಸ್ವಕ್ಷೇತ್ರದಲ್ಲಿ ಹಳ್ಳ ಹಿಡಿದಿರುವ ಬಗ್ಗೆ
ಎಲ್ಲಾ ಸುದ್ದಿ ವಾಹಿನಿಗಳಲ್ಲಿ ಸಾಕಷ್ಟು ಸುದ್ದಿಗಳು ಬಿತ್ತರಗೊಂಡಿದ್ದವು.  ಆದರೆ ಸಾಕಷ್ಟು ವ್ಯಾಪಕ ಟೀಕೆಗಳು ವರದಿಗಳು ಬಂದ ನಂತರ ಎಚ್ಚೇತ್ತ ನಗರಸಭೆ ಇಂದು ತರಾತುರಿಯಲ್ಲಿ ಇಂದಿರಾ ಕ್ಯಾಂಟೀನ್ ಅನ್ನು ಲೋಕಾರ್ಪಣೆ ಮಾಡಿತು.
ಸಂಸದರಿಂದ ಚಾಲನೆ:

ನಗರದ ಸಾರ್ವಜನಿಕ ಆಸ್ಪತ್ರೆ ಪಕ್ಕದ ಜೆ.ಸಿ.ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಇಂದಿರಾ ಕ್ಯಾಂಟೀನ್ ಅನ್ನು ಸಂಸದ ಡಿ.ಕೆ.ಸುರೇಶ್ ಇಂದು ಉದ್ಗಾಟನೆ ನೇರವೇರಿಸಿದರು. ಉದ್ಗಾಟನಾ ನುಡಿಗಳನ್ನಾಡಿದ ಸಂಸದರು ಕಾಂಗ್ರೇಸ್ ಪಕ್ಷದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದ್ದು ಇದು ಹಸಿದವರಿಗೆ ಅನ್ನ ನೀಡುವ ಪುಣ್ಯದ ಕೆಲಸವಾಗಿದ್ದು ಇದರಿಂದ ಸಾವಿರಾರು ಮಂದಿಗೆ ಅನುಕೂಲವಾಗಲಿದೆ ಎಂದರು. ದಿನನಿತ್ಯ ಪಟ್ಟಣಕ್ಕೆ ಉದ್ಯೋಗ ಹರಿಸಿ ಇಲ್ಲವೇ ನಾನಾ ಕೆಲಸ ಕಾರ್ಯಗಳಿಗೆಂದು ಗ್ರಾಮೀಣ ಮಂದಿ ಬರುತ್ತಾರೆ. ಅವರೆಲ್ಲಾ ಹೋಟೇಲ್ ಗಳಿಗೆ ತೆರಳಿ ಹೊಟ್ಟೆ ತುಂಬ ಊಟ ಮಾಡುವಷ್ಟು ಶಕ್ತಿವಂತರಾಗಿರುವುದಿಲ್ಲ. ಅಂತಹವರು ಇಲ್ಲಿ ಬಂದು ನಿಮ್ಮ ಬಳಿ ಇರುವ ಅತಿ ಕಡಿಮೆ ಹಣದಲ್ಲಿ ಗುಣಮಟ್ಟದ ಆಹಾರವನ್ನು ಸೇವಿಸಿ ಎಂದರು.

ಕಾರ್ಯಕ್ರಮದಲ್ಲಿ ಪೌರಾಯುಕ್ತ ಪುಟ್ಟಸ್ವಾಮಿ, ಅಧ್ಯಕ್ಷೆ ನಜ್ಮುನ್ನಿಸಾ,ಉಪಾಧ್ಯಕ್ಷೆ ಸರಳಾ ಸೇರಿದಂತೆ ಅನೇಕರು ಹಾಜರಿದ್ದರು.

Categories
Breaking News Political State

ಜೆಡಿಎಸ್ ಅಭ್ಯರ್ಥಿ ಭದ್ರೇಗೌಡ ಬಿಬಿಎಂಪಿ ಉಪಮೇಯರ್ ಆಗಿ ಆಯ್ಕೆ : ರಮೀಳಾ ಕನಸು ಈಡೇರಿಕೆಗೆ ಪಣ

ಬಿಬಿಎಂಪಿಯ ಉಪಮೇಯರ್ ಆಗಿ ಆಯ್ಕೆಯಾಗಿದ್ದ ಜೆಡಿಎಸ್ ಅಭ್ಯರ್ಥಿ ರಮೀಳಾ ಉಮಾಶಂಕರ್ ಅವರು ತೀವ್ರ ಹೃದಯಾಘಾತದಿಂದ ನಿಧನರಾಗಿ ಇವತ್ತಿಗೆ ಬರೋಬ್ಬರಿ ಎರಡು ತಿಂಗಳು ಕಳೆದಿವೆ. ಆಯ್ಕೆಯಾಗಿ ಒಂದೇವಾರದಲ್ಲಿ ಇವರು ನಿಧನರಾದರು. ರಮೀಳಾ ಉಮಾಶಂಕರ್ ನಿಧನದಿಂದ ಸ್ಥಾನ ತೆರವಾಗಿತ್ತು. ಇಂದು ಈ ಸ್ಥಾನಕ್ಕೆ ಜೆಡಿಎಸ್ ಅಭ್ಯರ್ಥಿ ಭದ್ರೇಗೌಡರನ್ನ ಆಯ್ಕೆ ಮಾಡಲಾಗಿದೆ. ಭದ್ರೆಗೌಡ ಅವಿರೋಧ ಆಯ್ಕೆ ಬಹುತೇಕ ಖಚಿತ ಎನ್ನಲಾಗುತ್ತಿದೆ. ಬಿಬಿಎಂಪಿಯ 53ನೇ ಉಪಮೇಯರ್​ ಆಗಿ ಜೆಡಿಎಸ್​ನ ಭದ್ರೇಗೌಡ ಆಯ್ಕೆಯಾಗಿದ್ದಾರೆ. ಭದ್ರೇಗೌಡ ನಾಗಪುರ ವಾರ್ಡ್​ನಿಂದ ಇದೇ ಮೊದಲಬಾರಿಗೆ ಬಿಬಿಎಂಪಿ ಸದಸ್ಯರಾಗಿದ್ದರು.

ಉಪಮೇಯರ್​ ಭದ್ರೇಗೌಡ ಮಾತನಾಡಿದ, ನಾಯಕರು ನನ್ನ ಮೇಲೆ ಇಟ್ಟ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ. ಟ್ರಾಫಿಕ್​ ಮುಕ್ತ ಹಸಿರು ಬೆಂಗಳೂರು ನಿರ್ಮಾಣಕ್ಕೆ ಒತ್ತು ಕೊಡುತ್ತೇನೆ. ಮಹಿಳೆಯರ ಸುರಕ್ಷತೆ ನನ್ನ ಮೊದಲ ಆದ್ಯತೆ. ರಮೀಳಾ ಉಮಾಶಂಕರ್​ ಅವರ ಕನಸುಗಳನ್ನು ಈಡೇರಿಸುತ್ತೇನೆ. ಮೇಯರ್​, ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಧಿಕಾರ ನಡೆಸುತ್ತೇನೆ ಎಂದು ತಿಳಿಸಿದರು.

Categories
Breaking News Political State

ಡಿ.5 ಸಂಪುಟ ವಿಸ್ತರಣೆ ಬಗ್ಗೆ ತೀರ್ಮಾನ : ಬಿಎಸ್ವೈ, ಈಶ್ವರಪ್ಪ ಸಿಎಂ ಕನಸು ಈಡೇರಲ್ಲ ಎಂದ ಮಾಜಿ ಸಿಎಂ

ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಸಿದ್ಧರಾಮಯ್ಯ, ಬಿಜೆಪಿಗೆ ಬಹುಮತ ಬಂದಿಲ್ಲ. ಆದರೂ ಬಿಎಸ್ ಯಡಿಯೂರಪ್ಪ ಹಾಗೂ ಕೆಎಸ್ ಈಶ್ವರಪ್ಪ ಏಕೆ ಕನಸು ಕಾಣುತ್ತಿದ್ದಾರೋ ಗೊತ್ತಿಲ್ಲ. ಅವರ ಕನಸು ಈಡೇರಲ್ಲ ಎಂದರು. ಸಿಎಂ ಆಗುವ ಹಗಲುಗನಸು ಕಾಣುತ್ತಲೇ ಇದ್ದಾರೆ.ಸಿಎಂ ಆಗುವ ಬಿಎಸ್ ಯಡಿಯೂರಪ್ಪ ಮತ್ತು ಕೆಎಸ್ ಈಶ್ವರಪ್ಪನವರ ಕನಸು ಈಡೇರಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಟಾಂಗ್ ಕೊಟ್ಟಿದ್ದಾರೆ. ಸಮ್ಮಿಶ್ರ ಸರ್ಕಾರ ಭದ್ರವಾಗಿದ್ದು ಐದು ವರ್ಷ ಪೂರೈಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಸಿದ್ಧರಾಮಯ್ಯ , ಡಿಸೆಂಬರ್ 5 ರಂದು ಸಮಸ್ವಯ ಸಮಿತಿ ಸಭೆ ಇದೆ. ಅಂದೇ ಸಂಪುಟ ಸಭೆ ವಿಸ್ತರಣೆ ಕುರಿತು ನಿರ್ಧರಿಸುತ್ತೇವೆ. ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಶಾಸಕರನ್ನು ಕಡೆಗಣಿಸಿಲ್ಲ ಎಂದು ತಿಳಿಸಿದರು.