7 ಲಕ್ಷ ಖರ್ಚು ಮಾಡಿ ಹೆಲಿಕಾಪ್ಟರ್‌ನಲ್ಲಿ ವಧುವನ್ನು ಕರೆತಂದ ರಾಜಸ್ಥಾನದ ವರ!

ರಾಜಸ್ಥಾನದ ವರನೊಬ್ಬ 7 ಲಕ್ಷ ಖರ್ಚು ಮಾಡಿ ಹೆಲಿಕಾಪ್ಟರ್‌ನಲ್ಲಿ ವಧುವನ್ನು ಕರೆತಂದ ಅಪರೂಪದ ಘಟನೆ ನಡೆದಿದೆ.

ರಾಜಸ್ಥಾನದ ವರನೊಬ್ಬ ಮದುವೆ ಸಮಾರಂಭದ ನಂತರ ಹೆಲಿಕಾಪ್ಟರ್‌ನಲ್ಲಿ ತನ್ನ ಮನೆಗೆ ವಧುವನ್ನು ಕರೆತರುವ ಮೂಲಕ ವಧುವಿನ ಕನಸನ್ನು ನನಸಾಗಿಸಿದ್ದಾನೆ. ವರ ಭರತ್‌ಪುರ ಜಿಲ್ಲೆಯ ವೈರ್ ಸಬ್‌ಬ್ಲಾಕ್‌ನ ರಾಯ್‌ಪುರ ಗ್ರಾಮದ ನಿವಾಸಿ ಸಿಯಾರಾಮ್ ಗುರ್ಜಾರ್. ಇವರು ಒಬ್ಬ ರೈತನ ಮಗ. ಗುರ್ಜರ್ ಅವರ ವಿವಾಹವನ್ನು ನಾಡ್ಬೈನ ಕರಿಲಿ ಗ್ರಾಮದ ಹನ್ಸ್ರಾಜ್ ಗುರ್ಜರ್ ಅವರ ಪುತ್ರಿ ರಾಮ ಅವರೊಂದಿಗೆ ಆಚರಿಸಲಾಯಿತು.

Rajasthan Man Fulfills His Bride's Dream, Spends Rs 7 Lakh to Bring Her Home in a Helicopter

ಗುರ್ಜರ್ ಅವರ ಪತ್ನಿ ರಾಮಾ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಿ ಗಂಡನ ಮನೆಗೆ ಹೋಗುವ ಕನಸು ಹೊಂದಿದ್ದರು. ಆದ್ದರಿಂದ ಅವರು ಚಾಪರ್ ಅನ್ನು ಬಾಡಿಗೆಗೆ ತೆಗೆದುಕೊಂಡ ಪತಿ ಇದಕ್ಕಾಗಿ 7 ಲಕ್ಷ ರೂ. ಖರ್ಚು ಮಾಡಿ ಕನಸು ನನಸು ಮಾಡಿಕೊಂಡಿದ್ದಾರೆ.

ಆರಂಭದಲ್ಲಿ ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ತನ್ನ ‘ಬರಾತ್’ ಗಾಗಿ ಹೆಲಿಕಾಪ್ಟರ್‌ ಬಾಡಿಗೆಗೆ ತೆಗೆದುಕೊಳ್ಳುವುದನ್ನು ವರಿಗೆ ಜಿಲ್ಲಾಧಿಕಾರಿ ಮತ್ತು ಸಿಎಮ್ಹೆಚ್ಒ ತಿರಸ್ಕರಿಸಿದ್ದರು. ಆದರೂ ಕೆಲ ಷರತ್ತುಗಳೊಂದಿಗೆ ಅನುಮತಿಯನ್ನು ನೀಡಲಾಗಿತ್ತು. ಅದನ್ನು ಸರಿಯಾಗಿ ವರನು ಅನುಸರಿಸಿದನು.

ಕೋವಿಡ್ ಮಾರ್ಗಸೂಚಿಯನ್ನು ಉಲ್ಲಂಘಿಸಿ ಟೇಕ್-ಆಫ್ ಸಮಯದಲ್ಲಿ ಹೆಲಿಕಾಪ್ಟರ್ ನನ್ನು ನೋಡಲು ದೊಡ್ಡ ಜನಸಮೂಹ ಜಮಾಯಿಸಿತ್ತು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights