Fact Check: ಟ್ರಾಕ್ಟರ್ ಪರೇಡ್‌ನಲ್ಲಿ ರೈತರ ಮೇಲೆ ಪೊಲೀಸರ ಹಲ್ಲೆ; ಘಟನೆಗೆ ಸಂಬಂಧವಿಲ್ಲದ ಹಳೆಯ ಫೋಟೋಗಳು ವೈರಲ್!
ದೆಹಲಿಯಲ್ಲಿ ಗಣರಾಜ್ಯೋತ್ಸವದಂದು ರೈತರ ಟ್ರಾಕ್ಟರ್ ಪರೇಡ್ ಸಂದರ್ಭದಲ್ಲಿ ನಡೆದ ಘರ್ಷಣೆಯಲ್ಲಿ ದೆಹಲಿ ಪೊಲೀಸರು ರೈತನನ್ನು ಥಳಿಸಿದ್ದಾರೆ ಎಂದು ಹಲವು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅಂತೆಯೇ ಗಾಯಗೊಂಡ ಸಿಖ್ ವ್ಯಕ್ತಿಯ ಫೋಟೋವೊಂದನ್ನು ಪರೇಡ್‌ನಲ್ಲಿ ಪೊಲೀಸರು ಹಲ್ಲೆ ಮಾಡಿದ ಸಂದರ್ಭದ ಫೋಟೋ ಎಂದು ಹಂಚಿಕೊಳ್ಳಲಾಗುತ್ತಿದೆ. 26 ಜನವರಿ 2021 ರಂದು, ಸಾವಿರಾರು ರೈತ ಪ್ರತಿಭಟನಾಕಾರರು ಪೊಲೀಸರ ಬ್ಯಾರಿಕೇಟ್‌ಗಳನ್ನು ಭೇದಿಸಿ ಕೆಂಪುಕೋಟೆಯತ್ತ ತೆರಳಿಸಿದ್ದರು. ಈ ವೇಳೆ ಪೊಲೀಸರು ಟಿಯರ್ ಗ್ಯಾಸ್ ಮತ್ತು ಲಾಠಿ ಚಾರ್ಜ್ ಮಾಡಿದ್ದರು. ಈ ಸಂದರ್ಭದಲ್ಲಿ ಈ ಪೋಸ್ಟ್‌ಗಳನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಈ ಪೋಸ್ಟ್‌ಗಳ ಆರ್ಕೈವ್ ಮಾಡಲಾದ ಆವೃತ್ತಿಯನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಪ್ರತಿಪಾದನೆ: ಗಣರಾಜ್ಯೋತ್ಸವದಂದು ಆಯೋಜಿಸಿದ್ದ ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಭಾಗವಹಿಸಿದ ರೈತರನ್ನು ದೆಹಲಿ ಪೊಲೀಸರು ಥಳಿಸಿರುವ ಫೋಟೋಗಳು.
ಸತ್ಯ: 2013 ರಲ್ಲಿ ಪ್ರಧಾನ ಮಂತ್ರಿ ಕಚೇರಿಯತ್ತ ಸಾಗುತ್ತಿರುವಾಗ ಸಿಖ್ ಪ್ರತಿಭಟನಾಕಾರನನ್ನು ದೆಹಲಿ ಪೊಲೀಸರು ತಡೆದಿದ್ದಾರೆ ಎಂದು ವೈರಲ್ ಆದ ಒಂದು ಫೋಟೋ ತೋರಿಸುತ್ತದೆ. ಇನ್ನೊಂದು ಫೋಟೋದಲ್ಲಿರುವ ಗಾಯಗೊಂಡ ಸಿಖ್ ವ್ಯಕ್ತಿ ಗ್ರಾಮೀಣ ಸೇವಾ ಆಟೋ ಚಾಲಕನಾಗಿದ್ದು, ಅವರನ್ನು 2019 ರಲ್ಲಿ ದೆಹಲಿ ಪೊಲೀಸರು ಥಳಿಸಿದ್ದಾರೆ. ಈ ಫೋಟೋಗಳಿಗೂ ಪ್ರತಿಭಟನಾ ನಿರತ ರೈತರು ಮತ್ತು ದೆಹಲಿ ಪೊಲೀಸರ ನಡುವೆ ಇತ್ತೀಚೆಗೆ ನಡೆದ ಹಿಂಸಾತ್ಮಕ ಘರ್ಷಣೆಗೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ಪೋಸ್ಟ್‌ಗಳಲ್ಲಿ ಮಾಡಿದ ಪ್ರತಿಪಾದನೆಗಳು ತಪ್ಪಾಗಿವೆ.
ಫೋಟೋ -1:
ಪೋಸ್ಟ್‌ನಲ್ಲಿ ಹಂಚಲಾದ ಫೋಟೋವನ್ನು ರಿವರ್ಸ್ ಇಮೇಜ್ ಮೂಕಲ ಹುಡುಕಿದಾಗ, 05 ಮೇ 2013 ರಂದು ‘ಡೈಲಿ ಮೇಲ್’ ಸುದ್ದಿ ವೆಬ್‌ಸೈಟ್ ಪ್ರಕಟಿಸಿದ ಲೇಖನದಲ್ಲಿ ಇದೇ ರೀತಿಯ ಫೋಟೋ ಕಂಡುಬಂದಿದೆ. ಫೋಟೋದ ವಿವರಣೆಯಲ್ಲಿ, 1984 ರ ಸಿಖ್ ವಿರೋಧಿ ಗಲಭೆಯ ಸಂತ್ರಸ್ತರಿಗೆ ನ್ಯಾಯ ಕೋರಿ ಸಿಖ್ಖರು ನಡೆಸುತ್ತಿರುದ್ದ ಪ್ರತಿಭಟನೆಯ ಸಂದರ್ಭದಲ್ಲಿ ಒಬ್ಬ ಪ್ರತಿಭಟನಾಕಾರ ನೆಲಕ್ಕೆ ಬಿದ್ದಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಲೇಖನದ ಪ್ರಕಾರ, 1984 ರ ಸಿಖ್ ವಿರೋಧಿ ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ ಅವರನ್ನು ಖುಲಾಸೆಗೊಳಿಸಿದ್ದನ್ನು ವಿರೋಧಿಸಿ ಸಿಖ್ ಪ್ರತಿಭಟನಾಕಾರರ ಗುಂಪು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿವಾಸದ ಕಡೆಗೆ ಮೆರವಣಿಗೆ ನಡೆಸಲು ಪ್ರಯತ್ನಿಸಿತ್ತು. ಈ ವೇಳೆ ಬ್ಯಾರಿಕೇಡ್‌ಗಳನ್ನು ಭೇದಿಸಲು ಯತ್ನಿಸಿದ ಸುಮಾರು 50 ಪ್ರತಿಭಟನಾಕಾರರನ್ನು ಪೊಲೀಸ್ ಅಧಿಕಾರಿಗಳು ಬಂಧಿಸಿದ್ದರು.
ಈ ಕೀವರ್ಡ್‌ಗಳನ್ನು ಬಳಸಿಕೊಂಡು ಮತ್ತಷ್ಟು ಮಾಹಿತಿ ಮೂಲಗಳಿಗಾಗಿ ಹುಡುಕಿದಾಗ, ಸಿಖ್ ಪ್ರತಿಭಟನಾಕಾರರು 2013 ರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿವಾಸದ ಕಡೆಗೆ ಮೆರವಣಿಗೆ ನಡೆಸುವ ಹಲವಾರು ಲೇಖನಗಳು ದೊರೆತಿವೆ. ಅವುಗಳನ್ನು ಇಲ್ಲಿ ನೋಡಬಹುದು.
ಫೋಟೋ -2:
ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ಫೋಟೋವನ್ನು ರಿವರ್ಸ್ ಇಮೇಜ್ ಮೂಲಕ ಹುಡುಕಿದಾಗ, ಇದೇ ರೀತಿಯ ಫೋಟೋ 17 ಜೂನ್ 2019 ರಂದು ಪ್ರಕಟವಾದ ಸುದ್ದಿ ಲೇಖನದಲ್ಲಿ ಕಂಡುಬಂದಿದೆ. ಲೇಖನದಲ್ಲಿ, 16 ಜೂನ್ 2019 ರಂದು ವಾಯುವ್ಯ ದೆಹಲಿಯಲ್ಲಿ ಪೊಲೀಸರು ಮುಖರ್ಜಿ ನಗರದಲ್ಲಿ ಗ್ರಾಮೀಣ ಸೇವಾ ಆಟೋ ಚಾಲಕ ಮತ್ತು ಅವರ ಮಗನನ್ನು ಕ್ರೂರವಾಗಿ ಥಳಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಈ ಫೋಟೋಗಳು ಗಾಯಗೊಂಡ ಗ್ರಾಮೀಣ ಸೇವಾ ಆಟೋ ಚಾಲಕನನ್ನು ತೋರಿಸುತ್ತವೆ. ಈ ಕ್ರೂರ ಘಟನೆಯಲ್ಲಿ ಭಾಗಿಯಾಗಿರುವ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ವರದಿಯಾಗಿದೆ.
ಈ ಕೀವರ್ಟ್‌ಗಳನ್ನು ಬಳಸಿಕೊಂಡು ಹೆಚ್ಚಿನ ವಿವರಗಳಿಗಾಗಿ ಹುಡುಕಿದಾಗ, ಸುದ್ದಿ ವೆಬ್‌ಸೈಟ್‌ಗಳಲ್ಲಿ ಈ ಘಟನೆಯನ್ನು ವರದಿ ಮಾಡಿರುವ ಹಲವಾರು ಸುದ್ದಿ ಲೇಖನಗಳು ಕಂಡುಬಂದಿವೆ. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಈ ಎಲ್ಲ ಸಾಕ್ಷ್ಯಗಳಿಂದ, ಪೋಸ್ಟ್‌ನಲ್ಲಿ ಹಂಚಲಾದ ಫೋಟೋಗಳು ಹಳೆಯ ಘಟನೆಗಳಿಗೆ ಸಂಬಂಧಿಸಿವೆ ಮತ್ತು ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ರೈತರ ಟ್ರಾಕ್ಟರ್ ರ್ಯಾಲಿಯಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಗಳೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ತೀರ್ಮಾನಿಸಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, ಗಣರಾಜ್ಯೋತ್ಸವದಂದು ಆಯೋಜಿಸಲಾಗಿದ್ದ ಟ್ರಾಕ್ಟರ್ ರ್ಯಾಲಿಯಲ್ಲಿ ಭಾಗವಹಿಸಿದ ರೈತರನ್ನು ದೆಹಲಿ ಪೊಲೀಸರು ಥಳಿಸಿದ್ದರೂ, ಈ ಘಟನೆಗೆ ಸಂಬಂಧವಿಲ್ಲ ಹಳೆಯ ಫೋಟೋಗಳನ್ನು ಹಂಚಿಕೊಳ್ಳಲಾಗುತ್ತಿದೆ.
Read Also: ಕೃಷಿ ಕಾಯ್ದೆಗಳು: ಗೆದ್ದು ಸೋಲುತ್ತಿರುವ ಮೋದಿ; ಸೋತು ಗೆಲ್ಲುತ್ತಿದ್ದಾರೆ ರೈತರು!