ಗ್ರಾ.ಪಂ. ಚುನಾವಣೆ ಮುಂದೂಡುವಂತೆ ಮನವಿ : ಚುನಾವಣಾ ಆಯೋಗದ ವಿರುದ್ಧ ಸುಧಾಕರ್ ಅಸಮಧಾನ!
ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ದಿನಾಂಕ್ ನಿಗದಿಯಾಗುತ್ತಿದ್ದಂತೆ ತಾಲ್ಲೂಕಿನ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಗ್ರಾಮಗಳಲ್ಲಿ ಹೊಸ ಅಲೆ ಸೃಷ್ಟಿಯಾಗಿದೆ. ದಿನ ಕಳೆದಂತೆ ಚಳಿ ಹೆಚ್ಚಾದಂತೆ ಚುನಾವಣೆ ಕಾವು ಕೂಡ ಗ್ರಾಮಗಳಲ್ಲಿ ಹೆಚ್ಚಾಗುತ್ತಿದೆ. ಈ ನಡುವೆ ಸಚಿವೆ ಡಾ. ಸುಧಾಕರ್ ಚುನಾವಣೆ ಆಯೋಗ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಹೌದು… ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗ್ರಾಮ ಪಂಚಾಯಿತಿ ಚುನಾವಣೆ ಮುಂದೂಡಲು ಮನವಿ ಮಾಡಿದ್ದರೂ ಚುನಾವಣಾ ಆಯೋಗ ನಮ್ಮ ಮನವಿಗೆ ಕಿವಿ ಕೊಡಲಿಲ್ಲಾ ಎಂದು ಅಸಮಧಾನ ಹೊರಹಾಕಿದ್ದಾರೆ.
‘ನಾನು ಚುನಾವಣಾ ಆಯೋಗಕ್ಕೆ ಗ್ರಾಮ ಪಂಚಾಯಿತಿ ಚುನಾವಣೆ ಮುಂದೂಡಲು ಪತ್ರ ಬರೆದಿದ್ದೆ, ಕೋರ್ಟ್ ಗೂ ಮನವಿ ಸಲ್ಲಿಸಿದ್ದೆ ಆದರೆ ಅದೆಲ್ಲವೂ ವ್ಯರ್ಥವಾಗಿದೆ. ತಮ್ಮ ಮನವಿಗೆ ಸ್ಪಂದಿಸಿದ ಕೋರ್ಟ್ ಬಗ್ಗೆ ಸುಧಾಕರ ಮಾತನಾಡಿದ್ದು, ಒಂದು ವೇಳೆ ಪಂಚಾಯತ್ ಚುನಾವಣೆ ನಡೆಸಿದರೆ ಮನೆ ಮನೆಗೆ ವೈರಸ್ ಹರಡಿದಂತಾಗುತ್ತದೆ. ಹೀಗಾಗಿ ನಾನು ಕೋರ್ಟ್ ಗೂ ಮನವಿ ಸಲ್ಲಿಸಿದ್ದೆ ಆದರೆ ಕೋರ್ಟ್ ಅದನ್ನು ಪರಿಗಣಿಸಿಲ್ಲ.ಮಾರ್ಚ್ ವರೆಗೂ ಚುನಾವಣೆ ಮುಂದೂಡಬಹುದಿತ್ತು. ಆದರೆ ಈಗ ದಿನಾಂಕ್ ಫಿಕ್ಸ್ ಆಗಿದೆ. ಚುನಾವಣೆ ನಡೆಸುವದು ಅನಿವಾರ್ಯವಾಗಿದೆ ಎಂದು ಅವರು ಬೇಸರಗೊಂಡರು.
ಅವಧಿ ಮುಗಿದಿರುವ 5,761 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ದಿನಾಂಕವನ್ನು ಈಗಾಗಲೇ ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ. ಮೊದಲ ಹಂತದ ಮತದಾನ ಡಿ.22 ಮತ್ತು ಎರಡನೇ ಹಂತದ ಮತದಾನ ಡಿ.27ರಂದು ನಡೆಯಲಿದೆ. ಮೊದಲನೇ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಡಿ.27ರಿಂದ ಮತ್ತು ಎರಡನೇ ಹಂತದ ಮತದಾನಕ್ಕೆ ಡಿ.11 ರಿಂದ ನಾಮಪತ್ರ ಸಲ್ಲಿಸಬಹುದಾಗಿದ್ದು, ಡಿ.11 ಮತ್ತು 16 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಕವಾಗಿದೆ. ಡಿ.12 ಮತ್ತು 17ರಂದು ನಾಮಪತ್ರಗಳ ಪರಿಶೀಲನೆ ನಡೆಲಿದೆ.ನಾಮಪತ್ರ ವಾಪಸ್ ಪಡೆಯಲು ಕ್ರಮವಾಗಿ ಡಿ.14 ಮತ್ತು 19ರಂದು ಕೊನೆಯ ದಿನವಾಗಿದೆ. ಮತದಾಣ ಪ್ರಕ್ರಿಯೆ ಡಿ.24 ಮತ್ತು ಡಿ.29ರಂದು ನಡೆಯಲಿದೆ.

