ಬಿಹಾರ: ಕೇವಲ 43 ಸ್ಥಾನಗಳನ್ನು ಗೆದ್ದಿರುವವರು ಹೇಗೆ ಮುಖ್ಯಮಂತ್ರಿ ಆಗುತ್ತಾರೆ? ಆರ್‌ಜೆಡಿ ಪ್ರಶ್ನೆ

ಬಿಹಾರದಲ್ಲಿ ಸರಳ ಬಹುಮತ ಪಡೆದಿರುವ ಎನ್‌ಡಿಎ ಮೈತ್ರಿಕೂಟ ನಿತೀಶ್‌ ಕುಮಾರ್ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದೆ. ಈ ಹಿನ್ನೆಲೆಯಲ್ಲಿ ನಿತೀಶ್‌ ವಿರುದ್ದ ವಾಗ್ದಾಳಿ ನಡೆಸಿರುವ ಆರ್‌ಜೆಡಿ ನಾಯಕ ಮನೋಜ್‌ ಝಾ, ಕೇವಲ 43 ಸ್ಥಾನಗಳನ್ನು ಗಳಿಸಿರುವವರು, ಜನಾದೇಶವಿಲ್ಲದ ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ್ ಮುಖ್ಯಮಂತ್ರಿ ಆಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

‘ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ಕೇವಲ 43 ಸ್ಥಾನಗಳನ್ನು ಗಳಿಸಿದೆ. ಜನರ ಆದೇಶವು ಅವರ ವಿರುದ್ಧವಾಗಿದೆ. ಹಾಗಾಗಿ ನಿತೀಶ್‌ ಕುಮಾರ್ ಸಿಎಂ ಆಗಲು ಹೇಗೆ ಸಾಧ್ಯ? ರಾಜ್ಯಕ್ಕೆ ಯಾರು ಮುಖ್ಯಮಂತ್ರಿ ಆಗಬೇಕು ಎನ್ನುವುದನ್ನು ಜನರು ನಿರ್ಧರಿಸಬೇಕು. ಈ ವಿಚಾರವಾಗಿ ಬಿಹಾರವು ಪರ್ಯಾಯವನ್ನು ಕಂಡುಕೊಳ್ಳಲಿದೆ. ಇದು ಈಡೇರಲು ಒಂದು ವಾರ, ಹತ್ತು ದಿನ ಅಥವಾ ಒಂದು ತಿಂಗಳು ತೆಗೆದುಕೊಳ್ಳಬಹುದು’ ಎಂದು ಝಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘2017ರಲ್ಲಿ ಮಹಾಘಟಬಂಧನದಿಂದ ಹೊರಹೋಗಿ ಎನ್‌ಡಿಎ ಜೊತೆ ಸೇರುವ ಮೂಲಕ ಜನರ ಆದೇಶವನ್ನು ನಿತೀಶ್‌ ಕುಮಾರ್‌ ಧಿಕ್ಕರಿಸಿದರು. ಆದರೆ, ಬಿಹಾರದ ಜನರು ಈಗ ಎಚ್ಚರಗೊಂಡಿದ್ದಾರೆ’ ಎಂದು ಮನೋಜ್‌ ಝಾ ತಿಳಿಸಿದ್ದಾರೆ.

‘ಕೇವಲ 40 ಸ್ಥಾನಗಳನ್ನು ಹೊಂದಿರುವ ವ್ಯಕ್ತಿಯು ಮುಂದಿನ ಮುಖ್ಯಮಂತ್ರಿಯಾಗಲು ನೋಡುತ್ತಿದ್ದಾರೆ. ಅವರೀಗ ಬಿಜೆಪಿಯ ನಿಯಂತ್ರಣದಲ್ಲಿದ್ದಾರೆ. ಅದಕ್ಕೆ ಸ್ಕ್ರಿಪ್ಟ್ ಸಿದ್ದವಾಗಿದೆ. ನಿತೀಶ್‌ ಅವರಿಗೆ ಬೇರೆ ದಾರಿ ಇಲ್ಲ’ ಎಂದು ಝಾ ಹೇಳಿದ್ದಾರೆ.

ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಜನತಾ ದಳ 43 ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ 74 ಸ್ಥಾನಗಳನ್ನು ಗೆದ್ದಿದೆ. ಹೀಗಾಗಿ ಎನ್‌ಡಿಎ ಒಟ್ಟು 125 ಕ್ಷೇತ್ರದಲ್ಲಿ ಜಯ ಸಾಧಿಸಿದೆ. ಆರ್‌ಜೆಡಿ 75 ಸ್ಥಾನಗಳಲ್ಲಿ ಗೆದ್ದಿದ್ದು, ಆರ್‌ಜೆಡಿ ನೇತೃತ್ವದ ಮಹಾಗಠಬಂಧನ 110 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಆದರೆ, 75 ಸ್ಥಾನಗಳಲ್ಲಿ ಗೆಲುವು ಪಡೆಯವ ಮೂಲಕ ಆರ್‌ಜೆಡಿಯು ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.


ಇದನ್ನೂ ಓದಿ: BJPಯ ಫ್ಯಾಸಿಸ್ಟ್‌ ಧೋರಣೆಯನ್ನು ಹಿಮ್ಮೆಟ್ಟಲ್ಲು ಸಿದ್ದರಾಗಿ: ಸಿಪಿಐ(ಎಂಎಲ್) ಕರೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights