BJPಯ ಫ್ಯಾಸಿಸ್ಟ್‌ ಧೋರಣೆಯನ್ನು ಹಿಮ್ಮೆಟ್ಟಲ್ಲು ಸಿದ್ದರಾಗಿ: ಸಿಪಿಐ(ಎಂಎಲ್) ಕರೆ

ಗುಣಮಟ್ಟದ ಶಿಕ್ಷಣ, ಆರೋಗ್ಯ ಸೇವೆ ಮತ್ತು ಸುಭದ್ರ ಉದ್ಯೋಗವನ್ನು ದೇಶದ ಎಲ್ಲಾ ಜನರಿಗೆ ಒದಗಿಸಬೇಕು. ರೈತರ ಮತ್ತು ಕಾರ್ಮಿಕರ ಹಕ್ಕುಗಳ ರಕ್ಷಣೆ, ನ್ಯಾಯ ವ್ಯವಸ್ಥೆಯ ಸಮರ್ಪಕ ನಿರ್ವಹಣೆ ಮಾಡಬೇಕು ಎಂಬ ವಿಚಾರಗಳನ್ನೇ ಅಜೆಂಡವಾಗಿಸಿಕೊಂಡು ಬಿಹಾರ ಚುನಾವಣೆಯಲ್ಲಿ ಸ್ಪರ್ಧಿಸಿದ ಎಡಪಕ್ಷಗಳು ಗೆದ್ದಿವೆ. ಹಾಗಾಗಿ ಈ ಕಾರ್ಯಸೂಚಿಯನ್ನು ಜಾರಿಗೊಳಿಸಲು ಮುಂದಿನ ದಿನಗಳಯೂ ಹೋರಾಟವನ್ನು ಮುನ್ನಡೆಸಲಿದೆ ಎಂದು ಸಿಪಿಐ(ಎಂಎಲ್) ಹೇಳಿದೆ.

ತನಗೆ ಕೊಟ್ಟ 19 ಕ್ಷೇತ್ರದಲ್ಲಿ 12 ಸ್ಥಾನಗಳನ್ನು ಗೆದ್ದು ಅಭೂಪೂರ್ವ ಸಾಧನೆ ಮಾಡಿರುವ ಸಿಪಿಐ(ಎಂಎಲ್) ಬಿಹಾರ ಜನತೆಯ ನಿರೀಕ್ಷೆಗಳನ್ನು ಸಾಕಾರಗೊಳಿಸುವ ಆಶ್ವಾಸನೆ ನೀಡಿದೆ. ಆ ಮೂಲಕ ಎಡ ಪಕ್ಷಗಳ ಸಮಸ್ತ ಕಾರ್ಯಕರ್ತರಿಗೆ ಮತ್ತು ದೇಶಾದ್ಯಂತ ಸಕ್ರಿಯವಾಗಿರುವ ಪ್ರಜಾತಂತ್ರ ಪರ ಹೋರಾಟದ ಸಂಘಟನೆಗಳಿಗೆ, ಮೋದಿ ಸರ್ಕಾರದ ವಿನಾಶಕಾರಿ ಕಾರ್ಪೋರೇಟ್ ಪರ ನೀತಿಗಳ ವಿರುದ್ಧ ಹೋರಾಟಕ್ಕೆ ಸಜ್ಜಾಗಲು ಕರೆ ಕೊಟ್ಟಿದ್ದು, ಬಿಜೆಪಿಯ ವಿಭಜಕ ರಾಜಕಾರಣ, ದ್ವೇಷ ರಾಜಕೀಯ ಮತ್ತು ಕೋಮು ಧೃವೀಕರಣ ಹಾಗೂ ಫ್ಯಾಸಿಸ್ಟ್ ಆಕ್ರಮಣವನ್ನು ಹಿಮ್ಮೆಟ್ಟಿಸಲು ಹೋರಾಟಕ್ಕೆ ಸಿದ್ಧರಾಗುವಂತೆ ಹೇಳಿದೆ.

“ಬಿಹಾರ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಕೂಟ ಅಲ್ಪ ಬಹುಮತದ ಜನದೇಶ ಪಡೆದಿದೆ. ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ನಡೆದ ಮೊದಲ ಪೂರ್ಣ ಪ್ರಮಾಣದ ಚುನಾವಣೆಯಲ್ಲಿ ಬಿಹಾರದ ಜನತೆ ಬದಲಾವಣೆಯನ್ನು ಬಯಸಿರುವುದು ಸ್ಪಷ್ಟವಾಗಿದೆ. ಅಂತಿಮ ಫಲಿತಾಂಶದಲ್ಲಿ ಮತದಾರರು ಎನ್‌ಡಿಎ ಮೈತ್ರಿಕೂಟಕ್ಕೆ ಅಧಿಕಾರಕ್ಕೇರಲು ಆದೇಶ ನೀಡಿದ್ದರೂ, ಪ್ರಬಲ ವಿರೋಧ ಪಕ್ಷವನ್ನು ಆಯ್ಕೆ ಮಾಡುವ ಮೂಲಕ ಬಿಹಾರದ ಜನತೆ ಬಿಜೆಪಿಯ ವಿರೋಧ ಪಕ್ಷ ಮುಕ್ತ ಭಾರತದ ಘೋಷಣೆಗೆ ಧಕ್ಕೆ ಉಂಟುಮಾಡಿದ್ದಾರೆ” ಎಂದು ಪಕ್ಷದ ಕೇಂದ್ರ ಸಮಿತಿ ಹೇಳಿದೆ.

ಚುನಾವಣಾ ಅಧಿಕಾರಿಗಳ ವಿರುದ್ದ ಕೇಳಿಬಂದಿರುವ ಹಲವು ಅಕ್ರಮಗಳು ಮತ್ತು ಅವ್ಯವಹಾರಗಳ ಆರೋಪಗಳಲ್ಲೂ ಸಹ ಸತ್ಯಾಂಶವಿದೆ ಎಂದಿರುವ ಪಕ್ಷವು, ಆ ಆರೋಪಕ್ಕೆ ಅಗತ್ಯ ಸಾಕ್ಷಿ ಪುರಾವೆಗಳು ಹುಡುಕುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿದೆ. ಸ್ಪರ್ಧಿಸಿದ 19 ಕ್ಷೇತ್ರಗಳ ಪೈಕಿ ಪಕ್ಷದ 12 ಅಭ್ಯರ್ಥಿಗಳು ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ. ಮೈತ್ರಿಕೂಟದ ಇತರ ಪಕ್ಷಗಳಿಗೆ ಹೋಲಿಸಿದರೆ ಪಕ್ಷದ ಅಭ್ಯರ್ಥಿಗಳ ಸ್ಟ್ರೈಕ್ ರೇಟ್ ಹೆಚ್ಚಾಗಿದ್ದು, 4% ಮತಗಳನ್ನು ಪಡೆದಿದೆ ಎಂದು ಸಿಪಿಐ(ಎಂಎಲ್) ಹೇಳಿದೆ.

ಸಿಪಿಐ(ಎಂಎಲ್) ಪಕ್ಷದ 12 ಶಾಸಕರು ಮತ್ತು ಸಿಪಿಐ ಹಾಗೂ ಸಿಪಿಎಂ ಪಕ್ಷದ ನಾಲ್ವರು ಶಾಸಕರು ಬಿಹಾರದ ವಿಧಾನಸಭೆಯಲ್ಲಿ ಎನ್‌ಡಿಎ ಸರ್ಕಾರದ ವಿರುದ್ಧ ದನಿ ಎತ್ತಲು ಒಂದು ಪ್ರಬಲವಾದ ಶಕ್ತಿಯಾಗಿ ಹೊರಹೊಮ್ಮುತ್ತಾರೆ ಎಂದು ಅದು ಭರವಸೆ ನೀಡಿದ್ದು, ಚುನಾವಣಾ ಪ್ರಚಾರಕ್ಕೆ ಪ್ರೋತ್ಸಾಹ ನೀಡಿದವರಿಗೆ ಪಕ್ಷದ ಕೇಂದ್ರ ಸಮಿತಿ ಧನ್ಯವಾದ ತಿಳಿಸಿದೆ.


ಇದನ್ನೂ ಓದಿ: ಬಿಹಾರದಲ್ಲಿ ಮತ್ತೆ ಸಿಎಂ ಆಗ್ತಾರ ನಿತೀಶ್‌: ಬಿಜೆಪಿ ಹೇಳುತ್ತಿರುವುದು ಏನು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights