ಅಮೆರಿಕಾ: ತಪ್ಪು ಮಾಹಿತಿ ನೀಡುವ 3 ಲಕ್ಷಕ್ಕೂ ಹೆಚ್ಚು ಟ್ವೀಟ್‌ಗಳನ್ನು ಡಿಲೀಟ್ ಮಾಡಿದ ಟ್ವಿಟರ್‌!

ಈ ವಾರ ಟ್ವಿಟರ್‌ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, 2020 ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಸಂಬಂಧಿಸಿದಂತೆ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಸುಮಾರು 3 ಲಕ್ಷ ಟ್ವೀಟ್‌ಗಳನ್ನು ನಿರ್ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

“ವಿವಾದಿತ ಮತ್ತು ತಪ್ಪುದಾರಿಗೆಳೆಯುವ ವಿಷಯಕ್ಕಾಗಿ ಸುಮಾರು 3 ಲಕ್ಷ ಟ್ವೀಟ್‌ಗಳನ್ನು ನಮ್ಮ ಸಿವಿಕ್ ಸಮಗ್ರತೆ ನೀತಿಯಡಿಯಲ್ಲಿ ಲೇಬಲ್ ಮಾಡಲಾಗಿದೆ” ಎಂದು ಟ್ವಿಟರ್ ತನ್ನ ನವೆಂಬರ್ 12 ರ ಚುನಾವಣಾ ನೀತಿಯ ನವೀಕರಣದಲ್ಲಿ ಪ್ರಕಟಿಸಿದೆ ಎಂದು ಹಿಂದೂಸ್ಥಾನ್ ಟೈಮ್ಸ್‌ ವರದಿ ಮಾಡಿದೆ.

“ಈ ಅವಧಿಯಲ್ಲಿ ಕಳುಹಿಸಲಾದ ಎಲ್ಲಾ ಅಮೆರಿಕಾ ಚುನಾವಣಾ ಸಂಬಂಧಿತ ಟ್ವೀಟ್‌ಗಳಲ್ಲಿ ಇವು ಶೇಕಡಾ 0.2 ರಷ್ಟನ್ನು ಪ್ರತಿನಿಧಿಸುತ್ತವೆ” ಎಂದು ಮೈಕ್ರೋಬ್ಲಾಗಿಂಗ್ ಸೈಟ್ ಹೇಳಿದೆ.

ಎರಡು ವಾರಗಳ ಅವಧಿಯಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ 89 ಮಿಲಿಯನ್ ಅನುಯಾಯಿಗಳನ್ನುದ್ದೇಶಿಸಿ ಮಾಡಿದ ಕನಿಷ್ಠ 50 ಟ್ವೀಟ್ ಮತ್ತು ರಿಟ್ವೀಟ್‌ಗಳನ್ನು ನಿರ್ಬಂಧಿಸಿದೆ.

ಚುನಾವಣಾ ತಪ್ಪು ಮಾಹಿತಿಯ ಹರಡುವಿಕೆಯನ್ನು ತಡೆಯಲು ಟ್ವಿಟರ್‌ ವೇದಿಕೆ ಈ ಕ್ರಮವನ್ನು ಕೈಗೊಂಡಿದೆ.

ತುದಿಗಾಲಿನಲ್ಲಿ ನಿಂತು ನಿರೀಕ್ಷಿಸುವಂತೆ ಮಾಡಿದ್ದ ಅಮೆರಿಕಾ ಚುನಾವಣೆಯಲ್ಲಿ ಜೋ ಬೈಡೆನ್ ಗೆಲುವು ಸಾಧಿಸಿದ್ದಾರೆ. ಆದರೆ ಟ್ರಂಪ್, ಜೋ ಬೈಡೆನ್‌ರ ಈ ಗೆಲುವನ್ನು ಇನ್ನೂ ಒಪ್ಪಿಕೊಂಡಿಲ್ಲ. ಬದಲಿಗೆ ನಾವೇ ಗೆಲ್ಲುತ್ತೇವೆ ಎನ್ನುವ ಭರವಸೆಯನ್ನು ಇನ್ನೂ ವ್ಯಕ್ತಪಡಿಸುತ್ತಿದ್ದಾರೆ.


ಇದನ್ನೂ ಓದಿ: ಹಸಿರು ಪಟಾಕಿಯಿಂದಲೂ ಕಣ್ಣಿಗೆ ಅಪಾಯ: ವೈದ್ಯರ ಎಚ್ಚರಿಕೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights