ಗಂಡು ಮಗು ಹುಟ್ಟಬೇಕೆಂದು ಮಗಳನ್ನೇ ಬಲಿಕೊಟ್ಟ ತಂದೆ! ಮಾಂತ್ರಿಕನ ಬಂಧನಕ್ಕೆ ಶೋಧ

ಗಂಡು ಮಗು ಹುಟ್ಟಬೇಕು ಎಂದರೆ ಹೆಣ್ಣು ಮಗುವನ್ನು ಬಲಿಕೊಡಬೇಕೆಂಬ ಮಾಂತ್ರಿಕನ ಮಾತನ್ನು ನಂಬಿ ತಂದೆಯೇ ತನ್ನ ಮಗಳ ಕತ್ತು ಕತ್ತರಿಸಿ ಬಲಿಕೊಟ್ಟಿರುವ ಭೀಕರ ಘಟನೆ ಜಾರ್ಖಂಡ್‌ನ ರಾಂಚಿಯಲ್ಲಿ ನಡೆದಿದೆ.

ತನೆಗೆ ಗಂಡುವಾಗಬೇಕೆಂದು ಬಯಸಿ, ಜ್ಯೋತಿಷಿಯ ಬಳಿ ಸಲಹೆ ಕೇಳಲು ಹೋಗಿದ್ದ ಸುಮನ್‌ ನೆಗಾಸಿಯಾಎಂಬಾತನಿಗೆ, ಮಗು ಮಗುವಾಗಬೇಕಿದ್ದರೆ, ನಿನ್ನ ಮಗಳನ್ನು ಬಲಿಕೊಡಬೇಕು ಎಂದು ಮಾಂತ್ರಿಕ ಸಲಹೆ ನೀಡಿದ್ದ.

ಆತನ ಮಾತು ನಂಬಿದ ಸುಮನ್‌ ನೆಗಾಸಿಯಾ, ತನ್ನ ಆರು ವರ್ಷದ ಹೆಣ್ಣು ಮಗುವಿನ ಕತ್ತನ್ನು ಕತ್ತರಿಸಿ ಬಲಿಕೊಟ್ಟಿದ್ದಾನೆ.

ಸುಮನ್ ರಾಂಚಿಯ ಲೋಹಾರ್ ಡಾಗಾದ ಪೇಶ್ರಾರ್ ಬ್ಲಾಕ್ ನ ನಿವಾಸಿಯಾಗಿದ್ದು, ಮಗಳನ್ನು ಬಲಿ ಕೊಡುವ ಸಂದರ್ಭದಲ್ಲಿ ಈತನ ಪತ್ನಿ ತವರು ಮನೆಗೆ ಹೋಗಿರುವುದಾಗಿ ವರದಿ ವಿವರಿಸಿದೆ.

ಘಟನೆಗೆ ಸಂಬಂಧಿಸಿದಂತೆ ಪೆಶ್ರಾರ್ ಪೊಲೀಸರು ಆರೋಪಿ ಸುಮನ್ ನನ್ನು ಬಂಧಿಸಿದ್ದಾರೆ. ಪೋಸ್ಟ್ ಮಾರ್ಟ್ಂ ನಡೆಸಿದ ನಂತರ ಬಾಲಕಿಯ ಶವವನ್ನು ಮನೆಯವರಿಗೆ ಹಸ್ತಾಂತರಿಸಲಾಯಿತು.

ಬಾಲಕಿಯನ್ನು ಬಲಿ ಕೊಡಲು ಸಲಹೆ ನೀಡಿದ ಮಾಂತ್ರಿಕನ ಬಂಧನಕ್ಕಾಗಿ ಶೋಧ ಕಾರ್ಯ ನಡೆಯುತ್ತಿದ್ದು, ತನಿಖೆ ಮುಂದುವರಿದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.


ಇದನ್ನೂ ಓದಿ: ಬಿಹಾರದಲ್ಲಿ ಮತ್ತೆ ಸಿಎಂ ಆಗ್ತಾರ ನಿತೀಶ್‌: ಬಿಜೆಪಿ ಹೇಳುತ್ತಿರುವುದು ಏನು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights