ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ಮೊಬೈಲ್‌ ಟವರ್‌ ಏರಿ ಆತ್ಮಹತ್ಯೆಗೆ ಯತ್ನಿಸಿದ ರೈತ!

ಕೃಷಿಗಾಗಿ ಸಾಲ ಮಾಡಿ, ನಷ್ಟ ಅನುಭವಿಸಿರುವ ರೈತರೊಬ್ಬರು ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಮೊಬೈಲ್‌ ಟವರ್‌ ಮೇಲೆರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗೊರುವ ಘಟನೆ ಮಂಡ್ಯದಲ್ಲಿ ನಡೆಸಿದೆ.

ಮದ್ದೂರು ತಾಲೂಕಿನ ಬಿದರಮೊಳೆ ಗ್ರಾಮದ ರೈತ ಮೋಹನ್ ಎಂಬವರನ್ನ ಬೆಕ್ಕಳಲೆ ಗ್ರಾಮದ ಪ್ರಾಥಮಿಕ ಸಹಕಾರ ಸಂಘದಲ್ಲಿ ಸಾಲಮನ್ನಾ ಯೋಜನೆಯಿಂದ ಹೊರಗಿಟ್ಟಿದ್ದರಂತೆ. ತನ್ನ ಸಾಲವನ್ನ ಮನ್ನಾ ಮಾಡದೆ ಉದ್ದೇಶಪೂರ್ವಕವಾಗಿ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿದ್ದ ರೈತ ಮೋಹನ್‌, ಈ ಬಗ್ಗೆ ಕಾನೂನು ಹೋರಾಟ ಮಾಡಿದ್ರು ನ್ಯಾಯ ಸಿಗಲಿಲ್ಲವೆಂದು ಆರೋಪಿಸಿದ್ದಾರೆ.

ನ್ಯಾಯ ಸಿಗದೆ, ಸಾಲ ಮನ್ನಾ ಆಗದೆ ಆಕ್ರೋಶಿತನಾದ ಮೋಹನ್‌, ತನ್ನ ಸಾವಿಗೆ ಪ್ರಾಥಮಿಕ ಸಂಘದ ಇಒ, ಆಡಳಿತ ಮಂಡಳಿ, ಕೊಪ್ಪ ಡಿಸಿಸಿ ಬ್ಯಾಕ್ ಮೇಲ್ವಿಚಾರಕರು ಹಾಗೂ ಡಿ.ಆರ್ ಕಾರಣರೆಂದು ಪತ್ರ ಬರೆದು ಮೊಬೈಲ್‌ ಟವರ್ ಮೇಲೆ ಏರಿ ಆತ್ಮಹತ್ಯೆಯ ಬೆದರಿಕೆ ಹಾಕಿದ್ದಾನೆ. ಇನ್ನು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ರೈತನ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ. ಆದರೆ ಅದಕ್ಕೆ ಜಗ್ಗದೆ ಮೇಲೆಯೇ ಕೂತುಬಿಟ್ಟಿದ್ದಾನೆ.

ಹಾಗಾಗಿ ಸಾಲ ಮನ್ನಾ ಮಾಡಿಸಿ ಎಂದು ಒತ್ತಾಯಿಸಿ ಮಂಡ್ಯ ನಗರದ ಸಂಜಯ್ ಸರ್ಕಲ್‌ನಲ್ಲಿರುವ ಮೊಬೈಲ್‌ ಟವರ್‌ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದು, ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಆತನ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights