ಟ್ರಂಪ್ ವಕೀಲರ ತಲೆಯಿಂದ ಹೇರ್ ಕಲರ್ ಮಿಶ್ರಿತ ಬೆವರು : ಟ್ರೋಲ್ ಆಯ್ತು ವೀಡಿಯೋ..

ಇತ್ತೀಚೆಗೆ ಸೋಷಿಯಲ್ ವೀಡಿಯಾದಲ್ಲಿ ಸೂಕ್ಷ್ಮ ವಿಚಾರಗಳು ಹೈಲೆಟ್ ಆಗುತ್ತಿವೆ. ಮಾದ್ಯಮದಲ್ಲಿ ಸೆರೆಯಾದ ಕೆಲ ವೀಡಿಯೋಗಳನ್ನು ನೆಟ್ಟಿಗರು ಸೂಕ್ಷ್ಮವಾಗಿ ಗಮನಿಸಲು ಶುರುಮಾಡಿದ್ದಾರೆ ಎನ್ನುವುದಕ್ಕೆ ಟ್ರಂಪ್ ವಕೀಲರ ವೀಡಿಯೋವೇ ಸಾಕ್ಷಿ.

ಹೌದು… ವಿಶ್ವದ ದೊಡ್ಡಣ್ಣ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಕೀಲ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಟ್ರೋಲ್ ಆಗಿದ್ದಾರೆ. ಪತ್ರಿಕಾಗೋಷ್ಠಿ ವೇಳೆ ಟ್ರಂಪ್ ಖಾಸಗಿ ವಕೀಲ ರೂಡಿ ಗಿಯುಲಿಯಾನಿ(76) ಅವರ ತಲೆಯಿಂದ ಹೇರ್ ಕಲರ್ ಮಿಶ್ರಿತ ಬೆವರು ಮುಖದ ಮೇಲೆ ಹರಿದಿದ್ದು ಭಾರೀ ಮುಜುಗರಕ್ಕೆ ಕಾರಣವಾಗಿದೆ. ಪತ್ರಿಕಾಗೋಷ್ಠಿ ವೇಳೆ ಈ ಘಟನೆ ನಡೆದಿದ್ದು ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ.

ಪ್ರೆಸ್ ಕಾನ್ಫರೆನ್ಸ ನಲ್ಲಿ ರೂಡಿ ಅವರು ಈ ಬಾರಿ ನಡೆದ ಅಧ್ಯಕ್ಷೀಯ ಚುನಾವಣೆ ವೇಳೆ ವಂಚನೆ ನಡೆದಿದೆ ಎಂದು ಆರೋಪ ಮಾಡುತ್ತಿದ್ದರು. ಇದೇ ವೇಳೆ ರೂಡಿ ಕೆನ್ನೆ ಮೇಲೆ ಹೇರ್ ಕಲರ್ ಮಿಶ್ರಿತ ಬೆವರು ಸುರಿಯುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಮಾದ್ಯಮ ಕ್ಯಾಮರಾ ಕಣ್ಣು ಬೆವರಿನತ್ತ ಬೀಳುತ್ತಿದ್ದಂತೆ ಮುಜುಗರಕ್ಕೊಳಗಾದ ಎದ್ದು ಹೋಗಲು ಆಗದೆ ರೂಡಿ ಪದೇ ಪದೇ ಬೆವರನ್ನು ಒರೆಸಿಕೊಂಡಿದ್ದಾರೆ. ಈ ಘಟನೆ ಸದ್ಯ ನೆಟ್ಟಗರ ಗಮನ ಸೆಳೆದಿದ್ದು ಭಾರೀ ಟ್ರೋಲ್ ಆಗಿದೆ.

ಈ ವೀಡಿಯೋಕ್ಕೆ ಸಾಕಷ್ಟು ಕಾಮೆಂಟ್ ಗಳು ಬರುತ್ತಿದ್ದು ಸುದ್ದಿಗೋಷ್ಠಿಗೂ ಮುನ್ನ ರೂಡಿ ಹೇರ್ ಕಲರ್ ಮಾಡಿಸಿಕೊಂಡಿದ್ದಾರೆಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights