ಲೆಹೆಂಗಾ ಹೋಗಿ ಶಾರ್ಟ್ಸ್ ಬಂತು ಡುಂಡುಂಕುಡುಂ… : ಬಿಗ್ ಬಾಸ್ ಸ್ಪರ್ಧಿಗೆ ನೆಟ್ಟಿಗರು ಗುಂ.. ಗುಂ..

ಫ್ಯಾಷನ್ ಜಗತ್ತಿನಲ್ಲಿ ಏನ್ ತೊಟ್ಟರೂ ಫ್ಯಾಷನ್. ಹಾಗಂತಾ ಎಲ್ಲಾ ಉಡಿಯಲ್ಲೂ ಫ್ಯಾಷನ್ ಮಾಡಲು ಹೊರಟರೆ ಜನರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಹೆಚ್ಚು. ಅದ್ರಲ್ಲೂ ಸಾಂಪ್ರದಾಯಿಕ ಉಡಿಗೆಗಳು ಸ್ಟೈಲಿಶ್ ಆಗಿ ತುಂಡುಡುಗೆಗಳಾಗಿ ಮಾರ್ಪಡಿಸಿ ನೋಡುಗರ ಆಕ್ರೋಶಕ್ಕೆ ಕೆಲ ನಟಿಯರು ಗುರಿಯಾಗುವುದು ಕಾಮನ್ ಆಗಿದೆ. ಸದ್ಯ ನಟಿ, ಗಾಯಕಿ ಜಸ್ಲೀನ್ ಮಾಥಾರೂ ತೊಟ್ಟ ಉಡುಗೆ ನೋಡುಗರನ್ನ ಕೆಣಕಿಸಿದೆ.

ವಧು ರೀತಿಯಲ್ಲಿ ಡ್ರೆಸ್ ಹಾಕಿಕೊಂಡ ಬಿಗ್ ಬಾಸ್ ಸೀಸನ್ 12 ಸ್ಪರ್ಧಿ ಜಸ್ಲೀನ್ ಲೆಹೆಂಗಾ ಬದಲು ಶಾರ್ಟ್ಸ್ ತೊಟ್ಟು ಫೋಸ್ ನೀಡಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರ ಆಕ್ರೋಶಕ್ಕೆ ತುತ್ತಾಗಿದೆ. ಫೋಟೋದಲ್ಲಿ ನಟಿ ಜಸ್ಲೀನ್ ವಧುವಿನಂತೆ ದುಪ್ಪಟ್ಟ, ರೆಡ್ ಟಾಪ್, ಬಿಂದಿ, ಆಭರಣ ತೊಟ್ಟು ಲೆಹೆಂಗಾ ಬದಲಿಗೆ ಶಾರ್ಟ್ಸ್ ಧರಿಸಿದ್ದಾಳೆ. ಈ ಫೋಟೋವನ್ನು ತನ್ನ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ ನಟಿ ತಾನು ಮನೆಯಿಂದ ಹೊರಟಿರುವುದಾಗಿ ಬರೆದುಕೊಂಡಿದ್ದಾಳೆ.

ಬಿಗ್ ಬಾಸ್ ಸ್ಪರ್ಧಿ ಆಗಿದ್ದಾಗಿನಿಂದಲೂ ಭಾರೀ ಸದ್ದು ಮಾಡಿದ್ದ ಜಸ್ಲೀನ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದಾರೆ. ಲೆಹೆಂಗಾವಿಲ್ಲದೇ ವಧುವಿನಂತೆ ಅಲಂಕಾರ ಮಾಡಿಕೊಂಡ ನಟಿಯ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಭಾರತೀಯ ಸಂಸ್ಕ್ರತಿಗೆ ಧಕ್ಕೆಯುಂಟು ಮಾಡಿದ್ದೀರಿ ಎಂದು ನೆಟ್ಟಿಗರು ಆಕ್ರೋಶಗೊಂಡಿದ್ದಾರೆ. ಹೀಗಾಗಿ ದೇಶದ ಜನತೆಗೆ ಕ್ಷಮೆ ಕೇಳಬೇಕೆಂದು ನೆಟ್ಟಿಗರು ಆಗ್ರಹಿಸಿದ್ದಾರೆ.

ಈ ವೀಡಿಯೋಗೆ ಕೆಲ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights