ಅಮರಿಂದರ್‌ ಪಾಳಯಕ್ಕೆ ಪ್ರಶಾಂತ್‌ ಕಿಶೋರ್; ದೀದಿ ಸಖ್ಯ ತೊರೆದ ರಾಜಕೀಯ ತಜ್ಞ: BJP ಲೇವಡಿ

ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ರಾಜಕೀಯ ಪ್ರಧಾನ ಸಲಹೆಗಾರರಾಗಿ ರಾಜಕೀಯ ತಂತ್ರಜ್ಞ ಪ್ರಶಾಂತ್‌ ಕಿಶೋರ್‌ ನೇಮಕಗೊಂಡಿದ್ದಾರೆ. ಈ ಬಗ್ಗೆ ಲೇವಡಿ ಮಾಡಿರುವ ಬಿಜೆಪಿ, ಪ್ರಶಾಂತ್‌ ಕಿಶೋರ್‌ ಅವರು ಕಾಂಗ್ರೆಸ್‌ ನಾಯಕರ ಜೊತೆ ಸೇರುವ ಉದ್ದೇಶದಿಂದ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರನ್ನು ಬಿಟ್ಟುಹೋಗಿದ್ದಾರೆ ಎಂದು ಹೇಳಿದೆ.

“ಪ್ರಶಾಂತ್ ಅವರು ದೀದಿ (ಬ್ಯಾನರ್ಜಿ) ಯನ್ನು ಸಹ ತೊರೆದಿದ್ದಾರೆ. ಚುನಾವಣಾ ಫಲಿತಾಂಶಗಳನ್ನು ಪ್ರಕಟಿಸುವ ಮೊದಲೇ ಮಮತಾ ಅವರ ಅತಿದೊಡ್ಡ ಸಲಹೆಗಾರ ಬೇರೊಬ್ಬರೊಂದಿಗೆ ಸೇರಿಕೊಂಡಿದ್ದಾರೆ. ಇದು ಸಾಕಷ್ಟು ಮಾತನಾಡುತ್ತದೆ” ಎಂದು ಬಿಜೆಪಿ ವಕ್ತಾರ ಸಂಪಿತ್ ಪಾತ್ರ ವ್ಯಂಗ್ಯವಾಡಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಮಾರ್ಚ್ 27 ರಿಂದ ಎಂಟು ಹಂತದ ವಿಧಾನಸಭಾ ಚುನಾವಣೆ ನಡೆಯಲಿದ್ದು, ಟಿಎಂಸಿ ಪಕ್ಷದ ಪರವಾಗಿ ಪ್ರಶಾಂತ್‌ ಅವರು ಪ್ರಮುಖ ತಂತ್ರಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ವಿವಿಧ ವಿಧಾನಸಭಾ ಚುನಾವಣೆಗಳಲ್ಲಿ ಅವರು ಹಲವಾರು ಬಿಜೆಪಿ ವಿರೋಧಿ ಪಕ್ಷಗಳ ಗೆಲುವಿಗಾಗಿ ಕೆಲಸ ಮಾಡಿದ್ದಾರೆ.

294 ಸ್ಥಾನಗಳಿರುವ ಬಂಗಾಳ ವಿಧಾನಸಭೆಯಲ್ಲಿ ಕೇಸರಿ ಪಕ್ಷವು 200 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಬಿಜೆಪಿಯ ಹಿರಿಯ ನಾಯಕರಾದ ಅಮಿತ್ ಶಾ ಮತ್ತು ಜೆ.ಪಿ.ನಡ್ಡಾ ಅವರು ಆಗಾಗ್ಗೆ ಪ್ರತಿಪಾದಿಸುತ್ತಿದ್ದಾರೆ. ಈಗ ಇದನ್ನು ಎಲ್ಲರೂ  ಒಪ್ಪಿಕೊಳ್ಳುತ್ತಿದ್ದಾರೆ. “ಮುಖ್ಯವಾಗಿ ರಾಜಕೀಯ ಸಲಹೆಗಾರ ಎಂದು ಕರೆಯಲ್ಪಡುವವರು ಇದನ್ನು ಅರಿತುಕೊಂಡಿದ್ದಾರೆ” ಎಂದು ಸಂಪಿತ್‌ ಪಾತ್ರ ಹೇಳಿದ್ದಾರೆ.

ಕಿಶೋರ್ ಅವರನ್ನು ಪ್ರಧಾನ ಸಲಹೆಗಾರರನ್ನಾಗಿ ನೇಮಿಸಲಾಗಿದೆ ಎಂದು ಪಂಜಾಬ್‌ ಸಿಎಂ ಸಿಂಗ್ ಸೋಮವಾರ ಪ್ರಕಟಿಸಿದ್ದರು.

ಮುಂದಿನ ವರ್ಷದ ಆರಂಭದಲ್ಲಿ ಪಂಜಾಬ್ ವಿಧಾನಸಭಾ ಚುನಾವಣೆ ನಡೆಯಲಿರುವುದರಿಂದ ಈ ಬೆಳವಣಿಗೆ ಮಹತ್ವವನ್ನು ಪಡೆದುಕೊಂಡಿದೆ.

ಇದನ್ನೂ ಓದಿ: ಬಂಗಾಳದಲ್ಲಿ BJP ಎರಡಂಕಿ ದಾಟಲ್ಲ; ಗೆದ್ದರೆ ಟ್ವಿಟರ್‌ಗೆ ಗುಡ್‌-ಬೈ; ಪುನರುಚ್ಚರಿಸಿದ ಪ್ರಶಾಂತ್ ಕಿಶೋರ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights