ಸಾಹುಕಾರನ ರಾಸಲೀಲೆ ವೀಡಿಯೋ ರಿಲೀಸ್ : ಎಲ್ಲಿದ್ದಾರೆ ಸಚಿವ ರಮೇಶ್ ಜಾರಕಿಹೊಳಿ?
ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ದೃಶ್ಯ ರಿಲೀಸ್ ಆಗಿದೆ. ರಾಸಲೀಲೆ ಸಿಡಿ ಬಿಡುಗಡೆ ಮಾಡುತ್ತಿದ್ದಂತೆ ಮೈಸೂರಿನಲ್ಲಿದ್ದ ಸಚಿವ ರಮೇಶ್ ಜಾರಕಿಹೊಳಿ ನಾಪತ್ತೆಯಾಗಿದ್ದಾರೆ. ಸಿಡಿ ರಿಲೀಸ್ ಆಗುತ್ತಿದ್ದಂತೆ ರಮೇಶ್ ಜಾರಕಿಹೊಳಿಯವರು ಅಜ್ಞಾತ ವಾಸಕ್ಕೆ ಹೋಗಿದ್ದಾರೆ.
ಮೈಸೂರಿಗೆ ಖಾಸಗಿ ಕಾರ್ಯಕ್ರಮಕ್ಕೆ ಹೋದ ರಮೇಶ್ ಜಾರಕಿಹೊಳಿ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಸರ್ಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ ಲೈಂಗಿಕ ತೃಷೆ ತೀರಿಸಿಕೊಳ್ಳುತ್ತಿದ್ದಾರೆಂದು ಆರೋಪಿಸಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ದೂರು ದಾಖಲಾಗಿದೆ.
“ಪ್ರಭಾವಿ ನಾಯಕರ ವಿರುದ್ಧ ದೂರು ನೀಡುತ್ತಿದ್ಧೇನೆ. ಸಂತ್ರಸ್ತೆಯ ಹೆಸರು ಬಹಿರಂಗ ಪಡಿಸುವುದಿಲ್ಲ. ಸಂತ್ರಸ್ತೆಗೆ ಬೆದರಿಕೆ ಇರುವ ಕಾರಣ ಮಹಿಳೆ ಬರುವುದಿಲ್ಲ” ಎಂದು ದೂರು ನೀಡಿದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಮಾಧ್ಯಮದ ಮುಂದೆ ಹೇಳಿದ್ದಾರೆ.
ಡ್ರೋನ್ ಕ್ಯಾಮೆರಾಗಳ ಮೂಲಕ ಕರ್ನಾಟಕದ ಡ್ಯಾಂ ಗಳನ್ನು ಚಿತ್ರೀಕರಣ ಮಾಡಲು ಮಹಿಳೆ ಬಯಸಿದ್ದರು. ಆದರೆ ಈ ಮಹಿಳೆಯನ್ನು ರಮೇಶ್ ಜಾರಕಿಹೊಳಿ ತನ್ನ ಕಾಮ ತೃಷೆಗೆ ಬಳಸಿಕೊಳ್ಳುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಪ್ರಕರಣ ದಾಖಲಾಗುತ್ತಿದ್ದಂತೆ ರಮೇಶ್ ಜಾರಕಿಹೊಳಿ ಮೈಸೂರಿನಲ್ಲಿ ಕಾರ್ಯಕ್ರಮಗಳಿಗೂ ಭೇಟಿ ನೀಡಿಲ್ಲ. ಈ ಸಂಗತಿ ಕ್ಷೇತ್ರದ ಜನರಿಂದ ಮುಚ್ಚಿಡಲು ಕರೆಂಟ್ ಕಟ್ ಮಾಡಿಸಿದ್ದಾರೆಂದು ಹೇಳಲಾಗುತ್ತಿದೆ.
ರಾಸಲೀಲೆ ಸಿಡಿ ಬಿಡುಗಡೆಯಾಗುತ್ತಿದ್ದಂತೆ ಕೋಕಾಕ್ ಕ್ಷೇತ್ರದಲ್ಲಿ ಮಾತ್ರ ಪವರ್ ಕಟ್ ಮಾಡಲಾಗಿದೆ ಎಂದು ಜನ ಹೇಳಿಕೊಳ್ಳುತ್ತಾರೆ.