ಮೋದಿ ಸಂಪುಟದಲ್ಲಿ ಯಾರಿಗೆ ಯಾವ ಖಾತೆ..? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್…

ಬುಧವಾರ ಮೋದಿ ಸಂಪುಟಕ್ಕೆ 43 ಸಚಿವರು ಸೇರಿದ್ದು ಪ್ರಮಾಣವಚವನ್ನೂ ಸ್ವೀಕರಿಸಿದ್ದಾರೆ. ಈ 43 ಸಚಿವರ ಪೈಕಿ ಅನೇಕ ಹೊಸಾ ಮುಖಗಳಿಗೆ ಮಣೆ ಹಾಕಲಾಗಿದ್ದು. 11 ಜನ ಮಹಿಳೆಯನ್ನು ಈ ಸಚಿವ ಸಂಪುಟಕ್ಕೆ ಸೇರಿಸಲಾಗಿದೆ. ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ್ದ ಜ್ಯೋತಿರಾಧಿತ್ಯ ಸಿಂಧಿಯಾ ಅವರಿಗೂ ಸಚಿವ ಸ್ಥಾನ ನೀಡಲಾಗಿದ್ದು, ಈ ಎಲ್ಲಾ ನೂತನ ಸಚಿವರುಗಳು ಇಂದು ತಮ್ಮ ಅಧಿಕಾರ ವಹಿಸಲಿದ್ದಾರೆ ಎನ್ನಲಾಗುತ್ತಿದೆ.

ಈ ಮಧ್ಯೆ 12 ಸಚಿವರನ್ನು ಮಂತ್ರಿಮಂಡಲದಿಂದ ಕೈಬಿಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಹೊಸ ಕ್ಯಾಬಿನೆಟ್​ ರೀಬೂಟ್​ನಲ್ಲಿ ಸರ್ಬಾನಂದ ಸೋನೊವಾಲ್, ನಾರಾಯಣ್ ರಾಣೆ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಕ್ಯಾಬಿನೆಟ್​ ದರ್ಜೆಯ ಸಚಿವ ಸ್ಥಾನ ನೀಡಲಾಗಿದೆ. ಆದರೆ, ಈ ಹಿಂದಿನ ಸಂಪುಟದಲ್ಲಿದ್ದ  ಆರೋಗ್ಯ ಸಚಿವ ಹರ್ಷವರ್ಧನ್, ಐಟಿ ಮತ್ತು ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹಾಗೂ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಅವರನ್ನು ಮಂತ್ರಿಮಂಡಲದಿಂದ ಕೈಬಿಡಲಾಗಿರುವುದು ಅಚ್ಚರಿ ಮೂಡಿಸಿದೆ.

ಕೇಂದ್ರ ಸಂಪುಟದಲ್ಲಿ ಪ್ರಮುಖ ಖಾತೆಗಳನ್ನು ಹಂಚಿಕೆ ಮಾಡಲಾಗಿದ್ದು ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಮಾನವ ಸಂಪನ್ಮೂಲ ಖಾತೆ, ಪಿಯೂಷ್​ ಗೋಯಲ್​ ಅವರಿಗೆ ಜವಳಿ, ಆಹಾರ, ಗ್ರಾಹಕ ವ್ಯವಹಾರಗಳು, ಸ್ಮೃತಿ ಇರಾನಿ ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ, ಹರ್​ದೀಪ್​ ಪುರಿ – ಪೆಟ್ರೋಲಿಯಂ, ನಗರಾಭಿವೃದ್ದಿ ಖಾತೆ, ಜ್ಯೋತಿರಾಧಿತ್ಯ ಸಿಂಧಿಯಾ ಗೆ ನಾಗರಿಕ ವಿಮಾನಯಾನ, ಪುರುಷೋತ್ತಂ ರೂಪಾಲ ಗೆ ಡೈರಿ ಮತ್ತು ಮೀನುಗಾರಿಕೆ ಇಲಾಖೆ, ಸಚಿವ ಅಶ್ವಿನ್​ ವೈಷ್ಣವ್ ಗೆ​ ರೈಲ್ವೇ ಮತ್ತು ಮಾಹಿತಿ ತಂತ್ರಜ್ಞಾನ, ಅನುರಾಗ್​​ ಠಾಕೂರ್ ಗೆ​ ಕ್ರೀಡೆ, ಪಶುಪತಿ ಅವರಿಗೆ ಆಹಾರ ಸಂಸ್ಕರಣೆ, ಭೂಪೇಂದ್ರ – ಕಾರ್ಮಿಕ, ಸಚಿವ ಕಿರಣ್​ ರಿಜಿಜು – ಕಾನೂನು ಖಾತೆ, ಕಿಶನ್​ ರೆಡ್ಡಿ – ಸಂಸ್ಕೃತಿ, ಪ್ರವಾಸೋಧ್ಯಮ ಖಾತೆ, ಭೂಪೇಂದ್ರ ಯಾದವ್​ – ಪರಿಸರ ಖಾತೆ, ಸರ್ದಾರ್​ ಸೋನಾವಾಲ – ಬಂದರು, ಈಶಾನ್ಯ ರಾಜ್ಯ ಅಭಿವೃದ್ಧಿ ಮತ್ತು ಆಯುಷ್ ಇಲಾಖೆ ನೀಡಲಾಗಿದೆ.

ರಾಜ್ಯದಿಂದ ನೂತನ ಕೇಂದ್ರ ಸಚಿವ ನಾರಾಯಣ ಸ್ವಾಮಿ ಅವರಿಗೆ ಸಮಾಜ ಕಲ್ಯಾಣ, ಸಾಮಾಜಿಕ ನ್ಯಾಯ, ಸಬಲೀಕರಣ ಖಾತೆ ಸಚಿವೆ ಮೀನಾಕ್ಷಿ ಲೇಖಿ ಅವರಿಗೆ ವಿದೇಶಾಂಗ ವ್ಯವಹಾರ ಮತ್ತು ಸಂಸ್ಕೃತಿ ಖಾತೆ, ಸಚಿವ ಭಗವಂತ ಖೂಬಾ ಅವರಿಗೆ ನವೀಕರಿಸಿದ ಇಂಧನ ಖಾತೆ, ರಾಜೀವ್ ಚಂದ್ರಶೇಖರ್ ಅವರಿಗೆ ರೇಷ್ಮೆ ಅಭಿವೃದ್ಧಿ ರಾಜ್ಯ ಖಾತೆ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಖಾತೆ ಹಾಗೂ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಕೃಷಿ ರಾಜ್ಯ ಖಾತೆ ಯನ್ನು ನೀಡಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights