ವರದಕ್ಷಿಣೆ ಕಿರುಕುಳ : ಪತ್ನಿಗೆ ಬೆಂಕಿ ಹಚ್ಚಿದ ಪತಿ : ಮಗಳ ನರಳಾಟ ಕಂಡು ಅಘಾತಗೊಂಡ ತಂದೆ..!

ವರದಕ್ಷಿಣೆ ಕಿರುಕುಳ ನೀಡಿ ಪತಿ ಪತ್ನಿಗೆ ಬೆಂಕಿ ಹಚ್ಚಿ ಕೊಂದ ಘಟನೆ ಪಂಜಾಬ್‌ನ ಲುಧಿಯಾನ ಜಿಲ್ಲೆಯಲ್ಲಿ ನಡೆದಿದೆ.

ಮೃತಳನ್ನು ಮಂದೀಪ್ ಕೌರ್ (34) ಎಂದು ಗುರುತಿಸಲಾಗಿದೆ. ಮಂದೀಪ್ ಸುಮಾರು ಮೂರು ವರ್ಷಗಳ ಹಿಂದೆ ಬಲರಾಮ್ ಸಿಂಗ್ ಅವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಒಂದು ವರ್ಷದ ಮಗಳು ಇದ್ದಾಳೆ. ಸಮ್ರಾಲಾ ನಿವಾಸಿ ಸುರಿಂದರ್ಪಾಲ್ ಸಿಂಗ್ ಸುಮಾರು 30 ಕಿ.ಮೀ ದೂರದ ಕಾಕೋವಾಲ್ ಮಜ್ರಾ ಗ್ರಾಮದ ಬಲರಾಮ್ ಸಿಂಗ್ ಗೆ ಮಗಳು ಮಂದೀಪ್ ಕೌರ್ ಅವರನ್ನು ಕೊಟ್ಟು ಮದುವೆ ಮಾಡಿದ್ದರು. ಆದರೆ ಮದುವೆ ಆದಾಗಿನಿಂದಲೂ ಮಗಳಿಗೆ ವರದಕ್ಷಿಣೆ ಕಾಟ ನೀಡಲಾಗುತ್ತಿತ್ತು ಎಂದು ಆರೋಪಿಸಿದ್ದಾರೆ.

“ಬಲರಾಮ್ ಮತ್ತು ಅವರ ಕುಟುಂಬ ಸದಸ್ಯರು ನನ್ನ ಮಗಳ ಮೇಲೆ ಆಗಾಗ್ಗೆ ಹಲ್ಲೆ ನಡೆಸುತ್ತಿದ್ದರು” ಎಂದು ಸುರಿಂದರ್‌ಪಾಲ್ ಆರೋಪಿಸಿದ್ದಾರೆ. ಮಗಳು ತಂದೆಗೆ ಮನೆಗೆ ಕರೆದುಕೊಂಡು ಹೋಗು ಇಲ್ಲವಾದರೆ ಇವರು ನನ್ನನ್ನು ಸಾಯಿಸುತ್ತಾರೆಂದು ಹೇಳಿದ್ದರೂ ತಂದೆ ಈ ವಿಚಾರ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ ಮಗಳು ಹೇಳಿದಂತೆ ಬಲರಾಮ್ ಸಿಂಗ್ ಮಂದೀಪ್ಗೆ ಬೆಂಕಿ ಹಚ್ಚಿದ್ದಾನೆ ಎನ್ನಲಾಗುತ್ತಿದೆ.

ಘಟನೆಯ ಬಳಿಕ ಮಂದೀಪ್‌ಗೆ ಕೆಲವು ಸುಟ್ಟ ಗಾಯಗಳಾಗಿದ್ದು, ಅವರನ್ನು ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿಸಲು ಅವರ ಮಗಳ ಮಾವ ಸುರಿಂದರ್‌ಪಾಲ್ ಗೆ ಕರೆ ಮಾಡಿದ್ದಾರೆ.

“ನಾನು ಆಸ್ಪತ್ರೆಗೆ ಧಾವಿಸಿದೆ. ಹೆಚ್ಚು ಗಾಯಗಳಾದ್ದರಿಂದ ನನ್ನ ಮಗಳನ್ನು ಪಟಿಯಾಲದ ರಾಜೀಂದ್ರ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅವಳು ದಾರಿಯಲ್ಲಿಯೇ ಸಾವನ್ನಪ್ಪಿದ್ದಾಳೆ. ಕೊನೆಯಲ್ಲಿ ನಾನು ಅವಳ ದೇಹವನ್ನು ನೋಡಿದಾಗ, ಅವಳು ಬಳಲುತ್ತಿದ್ದನ್ನು ಕಂಡು ನಾನು ಆಘಾತಗೊಂಡೆ. ಅವಳ ತಲೆ ಮತ್ತು ದವಡೆಯ ಮೇಲೆ ಗಾಯಗಳಾಗಿತ್ತು. ಆಕೆಯ ದೇಹದಾದ್ಯಂತ ಸುಟ್ಟ ಗಾಯಗಳಾಗಿವೆ “ಎಂದು ಸುರಿಂದರ್‌ಪಾಲ್ ಹೇಳಿದ್ದಾರೆ.

ಮಗಳನ್ನು ಮನೆಗೆ ಕರೆದುಕೊಂಡು ಹೋಗದಿದ್ದರೆ ಆಕೆಯನ್ನು ಕೊಲ್ಲುವುದಾಗಿ  ಪತಿ ಬಲರಾಮ್ ಈ ಹಿಂದೆ ಸುರಿಂದರ್‌ಪಾಲ್ ಗೆ ಹೇಳಿದ್ದರಂತೆ.

“ನಾನು ನನ್ನ ಮಗಳನ್ನು ಮನೆಗೆ ಕರೆದುಕೊಂಡು ಹೋಗದಿದ್ದರೆ ಅವನು ನನ್ನನ್ನು ಕೊಲ್ಲುತ್ತಾನೆ ಎಂದು ನನ್ನ ಮಗಳು ಹೇಳಿದ್ದಳು. ನಾನು ಅವಳನ್ನು ಸಮಯಕ್ಕೆ ಸರಿಯಾಗಿ ಮನೆಗೆ ಕರೆತಂದಿದ್ದರೆ, ಅವಳು ಇಂದು ಜೀವಂತವಾಗಿರುತ್ತಿದ್ದಳು” ಎಂದು ಸುರಿಂದರ್‌ಪಾಲ್ ಕಣ್ಣೀರು ಹಾಕಿದ್ದಾರೆ.

” ಆರಂಭದಲ್ಲಿ ನಾವು ಗ್ರಾಮ ಪಂಚಾಯಿತಿಯೊಂದಿಗೆ ಈ ವಿಷಯವನ್ನು ಎತ್ತಿದ್ದೇವೆ. ಹಳ್ಳಿಯ ಕೆಲವು ಜವಾಬ್ದಾರಿಯುತ ವ್ಯಕ್ತಿಗಳು ಸಮಸ್ಯೆಯನ್ನು ಬಗೆಹರಿಸಿ ನಮ್ಮ ಮಗಳನ್ನು ಗಂಡನ ಮನೆ ಕಳುಹಿಸುವಲ್ಲಿ  ನಮಗೆ ಸಹಾಯ ಮಾಡಿದರು. ಆದರೆ ನನ್ನ ಮಗಳು ತನ್ನ ಗಂಡನ ಮನೆಯಲ್ಲಿ ನಿಂದನೆಯನ್ನು ಅನುಭವಿಸುತ್ತಲೇ ಇದ್ದಳು “ಎಂದು ಸುರಿಂದರ್‌ಪಾಲ್ ಮರುಕ ವ್ಯಕ್ತಪಡಿಸಿದ್ದಾರೆ.

ಸದ್ಯ ಮಂದೀಪ್ ಅವರ ಪತಿ ಬಲರಾಮ್ ಸಿಂಗ್, ಅತ್ತೆ ಚಂದ್ ಸಿಂಗ್, ರಾಜವಂತ್ ಕೌರ್, ಅತ್ತಿಗೆ ರಾಜವಿಂದರ್ ಕೌರ್, ಮತ್ತು ಸೋದರ ಮಾವ ಕುಲಬೀರ್ ಸಿಂಗ್ ವಿರುದ್ಧ ಸೆಕ್ಷನ್ 304-ಬಿ (ವರದಕ್ಷಿಣೆ ಕಿರುಕುಳ) ಅಡಿ ದೂರು ದಾಖಲಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights