‘ಸುಮಲತಾ ಅವರದ್ದು ನಟೋರಿಯಸ್ ಬಿಹೇವಿಯರ್’ ಎಂದ ಜೆಡಿಎಸ್ ಶಾಸಕ!

‘ಸುಮಲತಾ ಅವರದ್ದು ನಟೋರಿಯಸ್ ಬಿಹೇವಿಯರ್’ಎಂದು ಜೆಡಿಎಸ್ ದಳಪತಿಗಳು ಸಂಸದೆ ಸುಮಲತಾ ವಿರುದ್ಧ ಸಮರ ಸಾರಿದ್ದಾರೆ. ಜೆಡಿಎಸ್ ಶಾಸಕರು ಹಾಗೂ ಸಂಸದೆ ಸುಮಲತಾ ನಡುವೆ ಕನ್ನಂಬಾಡಿ ವಾಕ್ಸಮರ ತಾರಕಕ್ಕೇರಿದೆ.

ಸುತ್ತಲು ಅಕ್ರಮ ಗಣಿಗಾರಿಕೆಯಿಂದ ಕೆಆರ್ಎಸ್ ಆಣೆಕಟ್ಟು ಬಿರುಕುಬಿಟ್ಟಿದೆ. ಹೀಗಾಗಿ ಅಕ್ರಮ ಗಣಿಗಾರಿಕೆ ತಡೆಯುವ ನಿಟ್ಟಿನಲ್ಲಿ ಸಂಸದೆ ಸುಮಲತಾ ಮುಂದಾದಾಗಿನಿಂದ ಮಂಡ್ಯ ಜೆಡಿಎಸ್ ದಳಪತಿಗಳ ವಾಗ್ವಾದ ಹೆಚ್ಚಾಗಿದೆ. ಅಂಬರೀಶ್ ಸಂಸದರಾಗಿದ್ದಾಗಲೇ ಗಣಿಗಾರಿಕೆ ಅಕ್ರಮವಾಗಿ ನಡೆದಿತ್ತು. ಅಕ್ರಮಗಣಿಗಾರಿಕೆ ಹೊಣೆಯನ್ನು ಹೊತ್ತು ಸುಮಲತಾ ರಾಜೀನಾಮೆ ಕೊಡಬೇಕು ಎಂದು ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಸುಮಲತಾ ವಿರುದ್ಧ ಆಕ್ರೋಶ್ ವ್ಯಕ್ತಪಡಿಸಿದ್ದಾರೆ.

ಸುಮಲತಾ ವಿರುದ್ಧ ವಾಗ್ದಾಳಿ ನಡೆಸಿದ ರವೀಂದ್ರ ಶ್ರೀಕಂಠಯ್ಯ, ನಮಗೆ ಕಾಣಿಸದ ಬಿರುಕು ಅವರಿಗೆ ಎಲ್ಲಿ ಕಾಣಿಸಿದೆ. ಕೆಆರ್ಎಸ್ ನಲ್ಲಿ ಒಳ್ಳೆ ಕಾರ್ಯಗಳು ನಡೆಯುತ್ತಿವೆ. ನಾನು ಭೇಟಿ ಮಾಡಿಬಂದೆ. ಯಾವುದೇ ತರಹದ ಕ್ರ್ಯಾಕ್ ನಮಗೆ ಕಂಡಿಲ್ಲ. ಅಧಿಕಾರಿಗಳೂ ಹೇಳಿಲ್ಲ. ಅವರಿಗೆ ಹೇಗೆ ಕಂಡಿತೋ ಇದು ನನಗೆ ಬಹಳ ಆಶ್ಚರ್ಯ ಆಗ್ತಾಯಿದೆ. ಇಂಥ ಹೇಳಿಕೆಯನ್ನು ಕೊಟ್ಟು ಅವರಿಗೆ ಏನ್ ಲಾಭ ಗೊತ್ತಿಲ್ಲ. ಇಂಥಹ ಹೇಳಿಕೆಗಳ ವಿರುದ್ಧ ಸರ್ಕಾರ ಯಾಕೆ ಕ್ರಮ ತೆಗೆದುಕೊಂಡಿಲ್ಲ ಅನ್ನೋದು ಅನುಮಾನವಾಗುತ್ತಿದೆ ಎಂದರು.

ಅಂಬರೀಶ್ ಮುಂದೆ ಯಾರು ಕೈಕಟ್ಟಿ ನಿಂತಿದ್ರೋ ಗೊತ್ತಿಲ್ಲ. ಇದೇ ವಿಚಾರಕ್ಕೆ ಅವರು ಎರಡು ಬಾರಿ ಸೋತಿದ್ರು. ಅಂಬರೀಶ್ ಕಾಲದಲ್ಲಿ ಎಲ್ಲವೂ ಅಕ್ರಮ ನಡೆದಿದೆ. ಅಂಬರೀಶ್ ನೇತೃತ್ವದಲ್ಲಿ ಗಣಿಗಾರಿಕೆ ನಡೆದಿದೆ. ಅವರ ಗಮನಕ್ಕೆ ಬಂದೇ ಅಕ್ರಮ ಗಣಿಗಾರಿಕೆ ನಡೆದಿದೆ. ಅಂಬರೀಶ್ ನನ್ನ ವಿರೋಧ ಹೀಗೆ ಮಾಡಿಕೊಂಡು ಸೋತಿದ್ದರು ಎಂದರು.

ಹೀಗೆ ದಳಪತಿಗಳು ಸುಮಲತಾ ವಿರುದ್ಧ ಸಮರ ಸಾರಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights