ಬಿಎಂಸಿ ವಿರುದ್ದ ಕಾನೂನು ಹೋರಾಟದಲ್ಲಿ ಗೆದ್ದ ಕಂಗನಾ; ಪಾಲಿಕೆಯದ್ದು ಶಕ್ತಿ ಪ್ರಯೋಗ ಎಂದ ಕೋರ್ಟ್
ನಟಿ ಕಂಗನಾ ಅವರಿಗೆ ಸೇರಿದ ಮುಂಬೈ ನಲ್ಲಿರುವ ಕಟ್ಟಡವನ್ನು ದ್ವಂಸಗೊಳಿಸಲು ಮುಂದಾಗಿದ್ದ ಬಿಎಂಸಿ (ಬೃಹತ್ ಮುಂಬೈ ಮಹಾನಗರ ಪಾಲಿಕೆ)ಯ ನಡೆ ದುರುದ್ದೇಶದಿಂದ ಕೂಡಿದ್ದು, ಪಾಲಿಕೆಯು ಯಾವುದೇ ವ್ಯಕ್ತಿಗಳ ವಿರುದ್ಧ ಶಕ್ತಿ ಪ್ರಯೋಗ ಮಾಡಬಾರದು ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
ಮಹಾರಾಷ್ಟ್ರ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದ ನಟಿ ಕಂಗನಾ ರಣಾವತ್ ಮನೆ ಕಂ ಕಚೇರಿಯನ್ನು ಅಕ್ರಮವಾಗಿ ಕಟ್ಟಿದ್ದಾರೆ ಎಂದು ಬಿಎಂಸಿ ಹೇಳಿತ್ತು. ಈ ಹಿನ್ನೆಲೆಯಲ್ಲಿ ಅವರ ಕಟ್ಟಡವನ್ನು ದ್ವಂಸಗೊಳಿಸಲು ಮುಂದಾಗಿತ್ತು. ಈ ಪ್ರಕರಣ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿತ್ತು.
ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಮನೆಯನ್ನು ಬಿಎಂಸಿ ಧ್ವಂಸಗೊಳಿಸಿದ್ದ ಪ್ರಕರಣದ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್, ಇದೊಂದು ದ್ವೇಷದ ನಡವಳಿಕೆಯೇ ಹೊರತು, ಕಾನೂನು ಸಮ್ಮತವಾದುದಲ್ಲ ಎಂದು ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ಮೀಸಲಾತಿಯನ್ನು ಚರ್ಚೆಗೆ ತಂದ ಪಟಾಕಿ ವಿಚಾರ: ಕಂಗನಾ ವಿರುದ್ಧ ನೆಟ್ಟಿಗರ ಆಕ್ರೋಶ!
ಸೆಪ್ಟೆಂಬರ್ 9(2020)ರಂದು ಮುಂಬೈನ ಪಾಲಿ ಹಿಲ್ ಪ್ರದೇಶದಲ್ಲಿದ್ದ ನಟಿ ಕಂಗನಾ ರಣಾವತ್ ನಿವಾಸದ ಒಂದು ಭಾಗವನ್ನು ಬಿಎಂಸಿ ಅಧಿಕಾರಿಗಳು ದ್ವಂಸಗೊಳಿಸಿದ್ದರು. ಪಾಲಿಕೆ ನಡೆಯನ್ನು ಪ್ರಶ್ನಿಸಿ ಕಂಗನಾ ಬಿಎಂಸಿ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ಬಿಎಂಸಿ ಕಾರ್ಯಾಚರಣೆಗೆ ಕೋರ್ಟ್ ತಡೆಯಾಜ್ಞೆ ನೀಡಿತ್ತು.
ಮಹಾರಾಷ್ಟ್ರ ಸರ್ಕಾರ ಹಾಗೂ ಆಡಳಿತಾರೂಢ ಶಿವಸೇನಾ ವಿರುದ್ಧ ಹೇಳಿಕೆ ನೀಡಿರುವುದಕ್ಕೆ ದ್ವೇಷದಿಂದ ಬಿಎಂಸಿ ತನ್ನ ಮನೆಯನ್ನು ಭಾಗಶಃ ಒಡೆದು ಹಾಕಿರುವುದಾಗಿ ಕಂಗನಾ ಆರೋಪಿಸಿದ್ದರು.
ಕಂಗನಾ ಅವರು ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ಸುಮಾರು 14 ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಬಿಎಂಸಿ ಪಟ್ಟಿ ಮಾಡಿತ್ತು. ಅಲ್ಲದೆ, 24 ಗಂಟೆಗಳ ಒಳಗೆ ಉತ್ತರ ನೀಡುವಂತೆ ನೋಟಿಸ್ ಜಾರಿ ಮಾಡಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಕಂಗನಾ ರಾಜ್ಯದಿಂದ ಹೊರಗಿದ್ದ ವೇಳೆ, ಕೇವಲ 24ಗಂಟೆಗಳ ಕಾಲಾವಧಿಯಲ್ಲಿ ಉತ್ತರ ನೀಡುವಂತೆ ಬಿಎಂಸಿ ಸೂಚಿಸುವುದು ಸರಿಯಲ್ಲ ಎಂದು ಹೇಳಿದ್ದು, ಹೆಚ್ಚಿನ ಸಮಯವನ್ನು ನೀಡುವಂತೆ ಪಾಲಿಕೆಗೆ ಸೂಚಿಸಿದೆ.
ಇದನ್ನೂ ಓದಿ: ಕೋಮು ಗಲಬೆ ಹರಡಲು ಇದು ಗುಜರಾತ್ ಅಲ್ಲ; ಇಲ್ಲಿ ಅವಕಾಶವೂ ಇಲ್ಲ: ಮಮತಾ ಬ್ಯಾನರ್ಜಿ