ಫ್ಯಾಕ್ಟ್‌ಚೆಕ್: ರಾಹುಲ್ ಗಾಂಧಿ ಹೀಗೆ ಮಾಡಿದ್ದು ನಿಜವೇ? ಈ ಸ್ಟೋರಿ ನೋಡಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ರಸ್ತೆ ಬದಿಯಲ್ಲಿ ಕೂರಿಸಿಕೊಂಡ ವ್ಯಕ್ತಿಯೊಬ್ಬ ಅವರ ಕಿವಿಯನ್ನು ಸ್ವಚ್ಛಗೊಳಿಸುತ್ತಿದ್ದಾನೆ. ರಾಹುಲ್ ಗಾಂಧಿಯ ಕಿವಿಯನ್ನು ಸ್ವಚ್ಛಗೊಳಿಸುತ್ತಿರುವ ವ್ಯಕ್ತಿಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. “ರಾಹುಲ್ ಗಾಂಧಿಯವರೆ ಮಾಡಿಕೊಳ್ಳಬೇಕಿರುವ ಜಾಗವನ್ನು ಸ್ವಚ್ಚ ಮಾಡಿಕೊಳ್ಳುವುದು ಬಿಟ್ಟು ,ಕಿವಿಯನ್ನು ಏಕೆ ಸ್ವಚ್ಛಗೊಳಿಸುತ್ತಿದ್ದೀರಿ ಎಂದು ವ್ಯಂಗ್ಯ ಭರಿತ ಹೇಳಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಹಾಗಿದ್ದರೆ ರಾಹುಲ್ ಗಾಧಿಯು ರಸ್ತೆ ಬದಿಯಲ್ಲಿ ತಮ್ಮ ಕಿವಿಗಳನ್ನು ಕ್ಲೀನ್ ಮಾಡಿಸಿಕೊಂಡಿದ್ದು ನಿಜವೇ ಇದರ ಸತ್ಯಾಸತ್ಯತೆಗಳು ಏನಿರಬಹುದೆಂದು ತಿಳಿದುಕೊಳ್ಳೋಣ.

ಫೇಸ್‌ಬುಕ್ ಮತ್ತು ಟ್ವಿಟರ್‌ಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

ಪೋಸ್ಟ್‌ನ ಆರ್ಕೈವ್ ಮಾಡಿದ ಲಿಂಕ್‌ ಅನ್ನು ಇಲ್ಲಿ ನೋಡಬಹುದು. ವೈರಲ್ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾಗಿರುವ ಪೋಟೋ ದ ಸತ್ಯಾಸತ್ಯತೆಗಳನ್ನು ಪರಿಶೀಲಿಸೋಣ.
ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others

ಫ್ಯಾಕ್ಟ್‌ಚೆಕ್:

ಪೋಸ್ಟ್‌ನಲ್ಲಿ ಹಂಚಿಕೊಂಡ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ, 27 ಸೆಪ್ಟೆಂಬರ್ 2021 ರಂದು ‘ದಿ ಸ್ಟೇಟ್ಸ್‌ಮನ್’ ಸುದ್ದಿ ವೆಬ್‌ಸೈಟ್ ಪ್ರಕಟಿಸಿದ ಲೇಖನದಲ್ಲಿ ಇದೇ ರೀತಿಯ ಫೋಟೋ ಕಂಡುಬಂದಿದೆ. ಆದರೆ ಈ ಲೇಖನದಲ್ಲಿ ಪ್ರಕಟಿಸಲಾದ ಮೂಲ ಫೋಟೋದಲ್ಲಿ ಇರುವುದು ರಾಹುಲ್ ಗಾಂಧಿ ಅಲ್ಲ.  ಕೋವಿಡ್-ಸಂದರ್ಭದಲ್ಲಿ ಮಾಡಲಾದ ಅವೈಜ್ಞಾನಿಕ ಲಾಕ್‌ಡೌನ್‌ಗಳಿಂದಾಗಿ ಸಾಂಪ್ರದಾಯಿಕ ಪದ್ದತಿಯ ಕಿವಿ ಸ್ವಚ್ಛಗೊಳಿಸುವ ಕೆಲಸಗಾರರು ಎದುರಿಸುತ್ತಿದ್ದ ಸಮಸ್ಯೆಗಳನ್ನು ಕುರಿತು ವರದಿ ಮಾಡಿದೆ, ಈ ಲೇಖನದಲ್ಲಿ ಒಂದು ಫೋಟೋವನ್ನು ಸಾಂದರ್ಭಿಕ ಚಿತ್ರವಾಗಿ ಪ್ರಕಟಿಸಿದೆ. ಈ ಲೇಖನವು ಫೋಟೋವನ್ನು ‘so.city’ ವೆಬ್‌ಸೈಟ್‌ನಿಂದ ಈ ಫೋಟೋವನ್ನು ಪಡೆಯಲಾಗಿದೆ.

13 ಮಾರ್ಚ್ 2016 ರಂದು ‘so.city’ ವೆಬ್‌ಸೈಟ್ ಪ್ರಕಟಿಸಿದ ಲೇಖನದಲ್ಲಿ ಅದೇ ಫೋಟೋವನ್ನು ಬಳಸಿಕೊಂಡಿರುವುದು ಕಂಡುಬಂದಿದೆ. ಈ ಲೇಖನವು ಭಾರತದಲ್ಲಿ ‘ದೇಸಿ ಜುಗಾಡ್’ ಅನ್ನು ಪ್ರತಿನಿಧಿಸುವ ಚಿತ್ರಗಳ ಸರಣಿಯನ್ನು ಪ್ರಕಟಿಸಿದೆ. ಈ ಎಲ್ಲಾ ಪುರಾವೆಗಳಿಂದ, ಪೋಸ್ಟ್‌ನಲ್ಲಿ ಹಂಚಿಕೊಂಡ ಫೋಟೋವನ್ನು ಎಡಿಟ್ ಮಾಡಿ ರಾಹುಲ್‌ ಗಾಂಧಿ ಅವರ ಪೋಟೋವನ್ನು ಸೇರಿಸಿದ್ದಾರೆ ಎಂದು ಹೇಳಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಕೊರೊನಾ ಸಂದರ್ಭದಲ್ಲಿ ಸಾಂಪ್ರದಾಯಿಕ ವೈದ್ಯರ ಕುರಿತು ಮಾಡಿದ ವರದಿಗೆ ಬಳಸಿಕೊಂಡಿರುವ ಫೋಟೋಗೆ,  ರಾಹುಲ್ ಗಾಂಧಿಯ ಫೋಟೋವನ್ನು ಸೇರಿಸಿ ಅವರು ಕಿವಿಯನ್ನು ಸ್ವಚ್ಛಗೊಳಿಸುತ್ತಿರುವಂತೆ ಎಡಿಟ್ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಂಗ್ಯದ ಹೇಳಿಕೆಯೊಂದಿಗೆ ಹಂಚಿಕೊಂಡಿದ್ದಾರೆ ಎಂದು ಫ್ಯಾಕ್ಟ್‌ಲಿ ವರದಿ ಮಾಡಿದೆ.. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಆಂಧ್ರದ ಸಮುದ್ರ ತೀರದಲ್ಲಿ ಕಾಣಿಸಿಕೊಂಡ ಚಿನ್ನದ ರಥ ! ವಾಸ್ತವವೇನು ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights