ಫ್ಯಾಕ್ಟ್‌ಚೆಕ್: ಆಂಧ್ರದ ಸಮುದ್ರ ತೀರದಲ್ಲಿ ಕಾಣಿಸಿಕೊಂಡ ಚಿನ್ನದ ರಥ ! ವಾಸ್ತವವೇನು ?

ಆಂಧ್ರ ಪ್ರದೇಶದಲ್ಲಿ ಅಸಾನಿ ಚಂಡಮಾರುತ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಎಲ್ಲಡೆ ಭಾರೀ ಮಳೆ ಸುರಿಯುತ್ತಿದ್ದು ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಈ ಎಲ್ಲಾ ಅವಾಂತರಗಳ ಸುದ್ದಿಯ ನಡುವೆ, ಆಂಧ್ರಪ್ರದೇಶದ ಶ್ರೀಕಾಕುಲಂ ಸಮುದ್ರ ತೀರದಲ್ಲಿ  “ಚಿನ್ನದಿಂದ ಮಾಡಿದ ರಥ” ಕಾಣಿಸಿಕೊಂಡಿದೆ ಚಂಡಮಾರುತದಿಂದ ಉಂಟಾಗಿರುವ ಅಲೆಗಳ ರಭಸಕ್ಕೆ ಸಮುದ್ರದ ದಡವನ್ನು ತಲುಪಿದೆ ಎಂಬ ಹೇಳಿಕೆಯೊಂದಿಗೆ ವೀಡಿಯೊ ವೈರಲ್ ಆಗಿದೆ.

ಸಾಗರದಲ್ಲಿ ಚಿನ್ನದ ರಥ ಕಂಡುಬಂದಿದೆ, ಅಸಾನಿ ಚಂಡಮಾರುತದಿಂದಾಗಿ, ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಕರಾವಳಿಯಲ್ಲಿ ಸಮುದ್ರದ ಅಲೆಗಳಿಗೆ ಚಿನ್ನದ ರಥವೊಂದು ಕೊಚ್ಚಿಕೊಂಡು ಬಂದಿದೆ. ಈ ರಥದ ರಚನೆಯು ಮಠದಂತೆ ಕಾಣುತ್ತಿದೆ. ಈ ರಥವು ಥೈಲ್ಯಾಂಡ್ ಅಥವಾ ಮ್ಯಾನ್ಮಾರ್‌ನಿಂದ ಹಾರಿ ಆಂಧ್ರದ ಕರಾವಳಿಯನ್ನು ತಲುಪಿದೆ ಎಂದು ನಂಬಲಾಗಿದೆ. ಎಂಬ ಹೇಳಿಕೆಯೊಂದಿಗೆ ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ವೈರಲ್ ಪೋಸ್ಟ್‌ಗಳನ್ನು ಇಲ್ಲಿ ಮತ್ತು ಇಲ್ಲಿ ಆರ್ಕೈವ್ ಮಾಡಲಾಗಿದೆ.

ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಅನೇಕ ಜನರು ವೀಡಿಯೊವನ್ನು “ಸಾಗರದಲ್ಲಿ ‘ಚಿನ್ನದ ರಥ ಕಂಡುಬಂದಿದೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಅಸಾನಿ ಚಂಡಮಾರುತದಿಂದಾಗಿ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಕರಾವಳಿಗೆ ಚಿನ್ನದಿಂದ ಮಾಡಿರುವ ರಥ ಬೇರೆಡೆಯಿಂದ ಸಮುದ್ರ ತೀರಕ್ಕೆ ಬಂದಿದೆ ಎಂದು ಹೇಳಿಕೊಂಡಿದ್ದಾರೆ. ರಥವು ಮಠದ ಆಕಾರದಲ್ಲಿದ್ದು ಬಹುಶಃ ಅದು ಥೈಲ್ಯಾಂಡ್ ಅಥವಾ ಮ್ಯಾನ್ಮಾರ್‌ನಿಂದ ತೇಲುತ್ತಾ ಆಂಧ್ರಪ್ರದೇಶದ ಕರಾವಳಿಯನ್ನು ತಲುಪಿದೆ. ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ಗಳಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ವೈರಲ್ ಪೋಸ್ಟ್‌ನಲ್ಲಿ ಪ್ರತಿಪಾದಿಸಲಾಗಿರುವ ಹೇಳಿಕೆಯ ಆಧಾರದಲ್ಲಿ ಗೂಗಲ್ ಸರ್ಚ್ ಮಾಡಿದಾಗ ಹಲವು ವಿಶ್ವಾಸಾರ್ಹ ಮಾಧ್ಯಮಗಳು ಘಟನೆಯನ್ನು ವರದಿ ಮಾಡಿರುವುದು ಕಂಡುಬಂದಿದೆ.  ಮೇ 10 ರಂದು ಶ್ರೀಕಾಕುಳಂನ ಕಡಲತೀರದಲ್ಲಿ ನಿಗೂಢವಾದ “ಚಿನ್ನದ ಬಣ್ಣದ” ರಥವು ದಡಕ್ಕೆ ಬಂದಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಸ್ಥಳೀಯರು ಚಿನ್ನದ ಬಣ್ಣದ ರಥವನ್ನು ಸಮುದ್ರ ತೀರಕ್ಕೆ ಎಳೆದುಕೊಂಡು ಹೋಗುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಆದರೆ ರಥವು ಚಿನ್ನದಿಂದ ಮಾಡಲ್ಪಟ್ಟಿದೆ ಎಂದು ಎಲ್ಲಿಯೂ ವರದಿಯಾಗಿಲ್ಲ.

ಶ್ರೀಕಾಕುಳಂ ಜಿಲ್ಲೆಯ ಜಿಲ್ಲಾಧಿಕಾರಿ ಶ್ರೀಕೇಶ್ ಬಿ ಲತಾಕರ್ ರಥದ ಬಗ್ಗೆ ಮಾಹಿತಿ ನೀಡಿದ್ದು, ರಥವು ಚಿನ್ನದಿಂದ ಮಾಡಲಾಗಿಲ್ಲ ಆದರೆ ಚಿನ್ನದ ಬಣ್ಣದ್ದಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. “ರಥವು ಈಗ ಸ್ಥಳೀಯ ಪೊಲೀಸರ ವಶದಲ್ಲಿದೆ” ಎಂದು ಇಂಡಿಯಾ ಟುಡೇ ಸುದ್ದಿ ವಾಹಿನಿಗೆ ಮಾಹಿತಿ ನೀಡಿದ್ದಾರೆ ಎಂದು ವರದಿ ಮಾಡಿದೆ.

ಚಿನ್ನದ ಬಣ್ಣದಿಂದ ಮಾಡಲ್ಪಟ್ಟಿರುವ ರಥದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಂಡಿಯಾ ಟುಡೇ ರಥವನ್ನು ನೋಡಿರುವ ಪ್ರತ್ಯಕ್ಷದರ್ಶಿ ಹಾಗೂ ಶ್ರೀಕಾಕುಳಂನ ಪೊಲೀಸ್ ಅಧಿಕಾರಿಯನ್ನು ಸಂಪರ್ಕಿಸಿದ್ದು, ಶ್ರೀಕಾಕುಳಂನ ತೆಕ್ಕಲಿ ವೃತ್ತದ ಸರ್ಕಲ್ ಇನ್ಸ್‌ಪೆಕ್ಟರ್ ಎಂ ವೆಂಕಟ ಗಣೇಶ್ ಅವರು ‘ಇಂಡಿಯಾ ಟುಡೇ’ಗೆ ದೂರವಾಣಿ ಮೂಲಕ ಮಾತನಾಡಿ, ತನಿಖೆಯ ನಂತರ ಪೊಲೀಸರಿಗೆ “ರಥದಲ್ಲಿ ಚಿನ್ನದಂತಹ ಯಾವುದೇ ಬೆಲೆಬಾಳುವ ಲೋಹ ಪತ್ತೆಯಾಗಿಲ್ಲ. ಇದು ಉಕ್ಕು ಮತ್ತು ಮರದಿಂದ ಮಾಡಲ್ಪಟ್ಟಿದೆ. ಆದರೆ ಅದರ ಬಣ್ಣ ಮಾತ್ರ ಬಂಗಾರದ್ದು”  ಇದರ ಬಗ್ಗೆ ಮತ್ತಷ್ಟು ತನಿಖೆ ಮಾಡಲಾಗುವುದು ಹಾಗಾಗಿ ಬಾಂಬ್ ಸ್ಕ್ವಾಡ್‌ಗಳನ್ನು ಬರಲು ತಿಳಿಸಿದ್ದೇವೆ ಅವರು ಬಂದ ನಂತರ ಇದರ  ಮತ್ತಷ್ಟು ವಿವರಗಳು ಲಭ್ಯವಾಗಲಿವೆ ಎಂದು ಹೇಳಿದ್ದಾರೆ.

ಈ ರಥ ಎಲ್ಲಿಂದ ಬಂತು ಎಂಬುದು ಜಿಲ್ಲಾಡಳಿತಕ್ಕೆ ಇನ್ನೂ ಖಚಿತವಾಗಿಲ್ಲ. “ರಥದ ಮೇಲೆ ಕೆಲವು ಶಾಸನಗಳಿದ್ದು. ಅವುಗಳನ್ನು ಅರ್ಥೈಸಿಕೊಳ್ಳಲು ತಜ್ಞರ ನೆರವು ಪಡೆಯುತ್ತಿದ್ದೇವೆ. ಇದು ನಮಗೆ ಕೆಲವು ಸುಳಿವನ್ನು ನೀಡಬಹುದು ” ಎಂದು ಶ್ರೀಕೇಶ್ ಬಿ ಲತಾಕರ್ ಹೇಳಿದ್ದಾರೆ

ಒಟ್ಟಾರೆಯಾಗಿ ಹೇಳುವುದಾದರೆ ಆಂದ್ರದ ಸಮುದ್ರ ತೀರದಲ್ಲಿ ಕಾಣಿಸಿಕೊಂಡಿರುವ  ” ರಥವು ” ಚಿನ್ನದಿಂದ ಮಾಡಲಾಗಿದೆ ಎಂಬುದು ಸುಳ್ಳು. ಇದು ಚಿನ್ನದ ಬಣ್ಣದಿಂದ ಇರುವುದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಚಿನ್ನದ ರಥ ಕಾಣಿಸಿಕೊಂಡಿದೆ ಎಂದು ತಪ್ಪಾಗಿ  ಪೋಸ್ಟ್ ಮಾಡಿದ್ದಾರೆ. ಹಾಗಾಗಿ ಇದು ಚಿನ್ನದ ರಥ ಎಂದು ಎಲ್ಲಿಯೂ ಧೃಡಪಟ್ಟಿಲ್ಲ.

ಕೃಪೆ: ಇಂಡಿಯಾಟುಡೆ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ.


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ರಾಜಸ್ಥಾನದಲ್ಲಿ ಮುಸ್ಲಿಮರಿಂದ ಹಿಂದೂಗಳ ಮೇಲೆ ಮಾರಣಾಂತಿಕ ಹಲ್ಲೆ ಎಂಬುದು ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ಫ್ಯಾಕ್ಟ್‌ಚೆಕ್: ಆಂಧ್ರದ ಸಮುದ್ರ ತೀರದಲ್ಲಿ ಕಾಣಿಸಿಕೊಂಡ ಚಿನ್ನದ ರಥ ! ವಾಸ್ತವವೇನು ?

  • May 12, 2022 at 6:08 pm
    Permalink

    ಅದು ನಿಜವಾಗಿಯೂ ರಥವಾಗಿದ್ರೆ, ಅದಕ್ಕೆ ಚಕ್ರವಿರಬೇಕು, ಒಂದು ವೇಳೆ ಮೇಲ್ಪದರ ಹಾರಿಬಂದಿದ್ರೆ ಅದರ ಕೆಳಗಡೆ ಡ್ರಮ್ಗಳು ಹೇಗೆ ಬಂದಿವೆ? ಯಾರೋ ಬೇಕಂತ್ತಲೆ ಡ್ರಮ್ ಗಳನ್ನು ಅದಕ್ಕೆ ಜೋಡಿಸಿ ಸಮುದ್ರಕ್ಕೆ ಬಿಟ್ಟಿರಬೇಕು ಅದರ ಹಿಂದಿನ ಷಡ್ಯಂತ್ರ ಅರಿಯಬೇಕಿದೆ ಅನಿಸುತ್ತಿದೆ

    Reply

Leave a Reply

Your email address will not be published.