ಬಂಗಾಳ ಚುನಾವಣೆ: ಮಮತಾ ವಿರುದ್ದ ಬಿಜೆಪಿ ಮೈಂಡ್‌ಗೇಮ್‌ ಅಸ್ತ್ರ; ವರ್ಕ್‌ ಆಗತ್ತಾ ಭಯದ ಸ್ಟ್ರಾಟಜಿ?

ಮೈಂಡ್ ಗೇಮ್‌ಗಳು ಚುನಾವಣೆಗಳಲ್ಲಿ ಗೆಲ್ಲಲು ಸಾಧ್ಯವಾದರೆ,ಬಿಜೆಪಿ ಖಂಡಿತವಾಗಿಯೂ ಪಶ್ಚಿಮ ಬಂಗಾಳವನ್ನು ಗೆಲ್ಲಲು ಸಾಧ್ಯವಾಗಬಹುದು. ಮುಖ್ಯಮಂತ್ರಿ ಮತ್ತು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರು ತಮ್ಮ ಮಾಜಿ ವಿಶ್ವಾಸಾರ್ಹಿ-ಪ್ರತಿಸ್ಪರ್ಧಿ ಸುವೆಂದು ಅಧಿಕಾರಿಯ ವಿರುದ್ದ ಸಂದಿಗ್ರಾಮದಲ್ಲಿ ಸ್ಪರ್ಧಿಸಿದ್ದರು. ಎರಡು ದಿನಗಳ ಹಿಂದೆ ಅಲ್ಲಿಯ ಮತದಾನ ಮುಗಿದಿದೆ. ಆ ಪ್ರತಿಷ್ಠಿತ ಕ್ಷೇತ್ರದಲ್ಲಿ ಮಮತಾ ಸೋಲುತ್ತಾರೆ ಎಂದು ಬಿಜೆಪಿ ಹೇಳುತ್ತಲೇ ಇದೆ.

ದಕ್ಷಿಣ 24-ಪರಗಣಗಳಲ್ಲಿ ಶನಿವಾರ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನಂದಿಗ್ರಾಮದಲ್ಲಿ ಮಮತಾ ಸೋಲನ್ನು ಒಪ್ಪಿಕೊಳ್ಳಬೇಕು. ಅಲ್ಲದೆ, ಒಂದು ವೇಳೆ ಅವರು ಇನ್ನೊಂದು ಕ್ಷೇತ್ರದಲ್ಲಿ ಸ್ಪರ್ಧಿಸಲು ನಿರ್ಧರಿಸಿದರೆ, ಅಲ್ಲಿಯೂ ಅವರು ಸೋಲುತ್ತಾರೆ ಎಂದು ಹೇಳಿದರು.

ಮಮತಾ ಅವರ ಅವಳಿ ಸೋಲು ಬಂಗಾಳದ ರಾಜಕೀಯದಲ್ಲಿ ಟಿಎಂಸಿ ಕಣ್ಮರೆಗೆ ಕಾರಣವಾಗುತ್ತದೆ ಎಂದು ಅವರು ಹೇಳಿದರು.

ಇದಕ್ಕೂ ಮೊದಲು ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಮತ್ತು ಕೇಸರಿ ಶಿಬಿರದ ಇತರ ಪ್ರಭಾವಿ ನಾಯಕರು ಕೂಡ ಇದೇ ಧಾಟಿಯಲ್ಲಿ ಮಾತನಾಡಿದ್ದಾರೆ. ಮತದಾನದ ಆರು ಹಂತಗಳು ಇನ್ನೂ ಬಾಕಿ ಇವೆ. ಹೀಗಾಗಿ ಟಿಎಂಸಿ ಕಾರ್ಯಕರ್ತರು ಮತ್ತು ಮತದಾರರಲ್ಲಿ ಟಿಎಂಸಿ ಸೋಲುತ್ತದೆ ಎಂಬ ಭಾವನೆಯನ್ನು ಹುಟ್ಟುಹಾಕಲು ಬಿಪಿಜೆ ಯತ್ನಿಸುತ್ತಿದೆ. ಈ ಮೂಲಕ ಟಿಎಂಸಿಗರನ್ನು ನಿರಾಶೆಗೊಳಿಸಬಹುದು ಎಂದು ಬಿಜೆಪಿ ಭಾವಿಸಿದೆ.

ಇಂತಹ ಮೈಡ್‌ ಗೇಮ್‌ನಿಂದ ಮಮತಾ ಅವರ ಅರ್ಧದಷ್ಟು ಬೆಂಬಲಿಗರಲ್ಲಿ ನಿರಾಶಾ ಭಾವವನ್ನು ಹುಟ್ಟುಹಾಕಲು ಬಿಜೆಪಿ ಯಶಸ್ವಿಯಾದರೆ, ಕೇಸರಿ ಪಕ್ಷ ಬಂಗಾಳದಲ್ಲಿ ತನ್ನ ಆಟವನ್ನು ಆಡಬಹುದು.

“ಮಮತಾ ಬ್ಯಾನರ್ಜಿ ಟಿಎಂಸಿ ಪಕ್ಷದ ಏಕೈಕ ಮುಖವಾಗಿದ್ದಾರೆ. ಈಗ ನಾವು ಮುಂದಿನ ಕೆಲವು ಹಂತಗಳಲ್ಲಿ ದಕ್ಷಿಣ ಬಂಗಾಳ ಜಿಲ್ಲೆಗಳಲ್ಲಿ ಚುನಾವಣೆಯನ್ನು ಎದುರಿಸಲಿದ್ದೇವೆ. ಇವನ್ನು ಟಿಎಂಸಿಯ ಭದ್ರಕೋಟೆಗಳು ಎಂದು ಕರೆಯಲಾಗುತ್ತದೆ. ಆಕೆಯ ಸೋಲು ಸನ್ನಿಹಿತವಾಗಿದೆ ಎಂಬ ಸಂದೇಶವನ್ನು ಜನರಿಗೆ ತಲುಪಿಸಲು ನಾವು ಯಶಸ್ವಿಯಾದರೆ, ಅವರ ಅನುಯಾಯಿಗಳು ಮತ್ತು ಆಡಳಿತ ಪಕ್ಷದ ಮತದಾರರು ಭಯಭೀತರಾಗುತ್ತಾರೆ. ತರುವಾಯ ಅದು ಮುಂದಿನ ಹಂತಗಳಲ್ಲಿ ನಮಗೆ ಚುನಾವಣಾ ಲಾಭಾಂಶವನ್ನು ನೀಡುತ್ತದೆ” ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದರು.

“ನಿಮ್ಮ ಮನೆಯಿಂದ ನೀವು (ಮಮತಾ) ಸ್ಕೂಟರ್‌ನಲ್ಲಿ ನಬಣ್ಣಾಗೆ ಹೋಗಿದ್ದೀರಿ. ನಂತರ ನೀವು ನಂದಿಗ್ರಾಮ್‌ಗೆ ಹೋಗಿದ್ದೀರಿ, ಅಲ್ಲಿ ನೀವು ಭಾರಿ ಅಂತರದಿಂದ ಸೋಲುತ್ತೀರಿ. ಸೋಲು ನಿಮ್ಮ ಮುಂದೆ ನಿಂತಿದೆ. ಅದನ್ನು ದೀದೀ ಒಪ್ಪಿಕೊಳ್ಳಬೇಕು. ನಿಮ್ಮ ಪಕ್ಷದ ಹಲವು ನಾಯಕರು ನೀವು ನಂದಿಗ್ರಾಮದಿಂದ ಸ್ಪರ್ಧಿಸುವ ನಿರ್ದಾರ ತಪ್ಪು ಎಮದು ಹೇಳುತ್ತಿದ್ದಾರೆ” ಎಂದು ಮೋದಿ ಹೇಳಿದ್ದಾರೆ.

ಪ್ರಧಾನ ಮಂತ್ರಿಯವರ ಸ್ಕೂಟರ್ ಸವಾರಿ ಹೇಳಿಕೆಯು, “ರಾಜ್ಯದಲ್ಲಿ ಚುನಾವಣಾ ದಿನಾಂಕ ಘೋಷಣೆಗೂ ಮುನ್ನ ಇಂಧನ ಬೆಲೆ ಏರಿಕೆಯ ವಿರುದ್ಧ ಕೊಲ್ಕತ್ತಾದಲ್ಲಿ ಮಮತಾ ನಡೆಸಿದ ಪ್ರತಿಭಟನೆಯಾಗಿತ್ತು.” ಅದನ್ನು ಮೋದಿ ಚುನಾವಣಾ ಪ್ರಚಾರವೆಂದು ಉಲ್ಲೇಖಿಸಿ ಭಾಷಣ ಮಾಡಿದ್ದಾರೆ.

“ನೀವು ಇನ್ನೊಂದು ಸ್ಥಾನದಿಂದ ಸ್ಪರ್ಧಿಸಲು ಯೋಜಿಸುತ್ತಿದ್ದೀರಿ ಎಂದು ನಾನು ಕೇಳಿದೆ. ನೀವು ಅಂತಹ ನಿರ್ಧಾರ ಮಾಡಿದರೆ, ಅದು ಮತ್ತೊಂದು ತಪ್ಪು ನಿರ್ಧಾರವಾಗಲಿದೆ. ಏಕೆಂದರೆ ನಿಮ್ಮ ಅವಳಿ ಸೋಲು ಪಶ್ಚಿಮ ಬಂಗಾಳದ ಚುನಾವಣಾ ರಂಗದಿಂದ ಟಿಎಂಸಿ ಕಣ್ಮರೆಗೆ ಕಾರಣವಾಗುತ್ತದೆ ”ಎಂದು ಮೋದಿ ಹೇಳಿದರು.

ಶಾ ಮತ್ತು ನಡ್ಡಾ ಒಂದೇ ಉಸಿರಿನಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಅವರೆಲ್ಲರೂ, ಮಮತಾ ಮತ್ತೊಂದು ಕ್ಷೇತ್ರದಿಂದ ಸ್ಪರ್ಧಿಸುವ ಚಿಂತನೆ ನಡೆಸಿದ್ದಾರೆ ಎಂದು ತಮ್ಮ ಭಾಷಣದಲ್ಲಿ ಒತ್ತಿ ಒತ್ತಿ ಹೇಳುತ್ತಿದ್ದಾರೆ. ಈ ಮೂಲಕ ಮತದಾರರೊಂದಿಗೆ ಬಿಜೆಪಿ ನಾಯಕರು ಮೈಂಡ್‌ ಗೇಮ್‌ ಆಡುತ್ತಿದ್ದಾರೆ.

ತೃಣಮೂಲ ಸಂಸದೆ ಮತ್ತು ವಕ್ತಾರೆ ಸೌಗತಾ ರಾಯ್ ಮಾತನಾಡಿ, ಭಯದ ಮನೋಭಾವವನ್ನು ಸೃಷ್ಟಿಸಿ ಆಟ ಆಡಲು ಬಿಜೆಪಿ ಪ್ರಯತ್ನಿಸುತ್ತಿದೆ. ಆದರೆ ಇದು ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್‌ನ ಮಹಿಳಾ ಮುಖಂಡೆ ಮೇಲೆ ಅತ್ಯಾಚಾರ ಆರೋಪ: ಕಾಂಗ್ರೆಸ್‌ ಶಾಸಕನ ಪುತ್ರನ ವಿರುದ್ಧ ಪ್ರಕರಣ ದಾಖಲು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights