ವರದಕ್ಷಿಣೆ ಕಿರುಕುಳ: ಮಹಿಳೆಯನ್ನು ಬೆತ್ತಲೆಗೊಳಿಸಿ – ಥಳಿಸಿ ಅಮಾನವೀಯ ದೌರ್ಜನ್ಯ

24 ವರ್ಷದ ಯುವತಿಯೊಬ್ಬಳನ್ನು ಬೆತ್ತಲೆಗೊಳಿಸಿ, ಅಮಾನವೀಯವಾಗಿ ಥಳಿಸಿರುವ ಘಟನೆ ಒಡಿಶಾದ ಕೇಂದ್ರಪರಾ ಜಿಲ್ಲೆಯ ಕೊರುಕ್ ಗ್ರಾಮದಲ್ಲಿ  ಶನಿವಾರ ನಡೆದಿದೆ. ಘಟನೆಯ ವಿಡಿಯೋ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆಯ ಬಗ್ಗೆ ದೌರ್ಜನ್ಯಕ್ಕೆ ಒಳಗಾದ ಮಹಿಳೆಯ ಚಿಕ್ಕಪ್ಪ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಅಧಿಕಾರಿ ಹೇಳಿದರು.

ಜಿಲ್ಲೆಯ ನಿಕಿರೈ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಕಾಬುಲಿ ಬಾರಿಕ್ ಅವರ ಪ್ರಕಾರ, ವರದಕ್ಷಿಣೆ ಬೇಡಿಕೆಗಳನ್ನು ಈಡೇರಿಸಲು ಮಹಿಳೆಗೆ ಸಾಧ್ಯವಾಗದ ಕಾರಣ, ಆಕೆಗೆ ಆಕೆಯ ಗಂಡನ ಮನೆಯವರು ಚಿತ್ರಹಿಂಸೆ ನೀಡಿದ್ದಾರೆ. ಅವರ ದೌರ್ಜನ್ಯವನ್ನು ತಡೆದು ಮಹಿಳೆಯನ್ನು ರಕ್ಷಿಸಲು ಗ್ರಾಮದ ಕೆಲವು ಸ್ಥಳೀಯರು ಮಧ್ಯಪ್ರವೇಶಿಸಲು ಪ್ರಯತ್ನಿಸಿದ್ದರು.ಯಾರ ಮನವಿಗೂ ಕಿವಿಗೊಡದೆ ಆಕೆಯನ್ನು ಅಮಾನವೀಕವಾಗಿ ಥಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಮಹಿಳೆಯ ಹೇಳಿಕೆಯನ್ನು ದಾಖಲಿಸಲಾಗಿದೆ. ಮಹಿಳೆಯ ಗಂಡನೆ ಮನೆಯವರು ಪರಾರಿಯಾಗಿದ್ದಾರೆ. ಅಪರಾಧಿಗಳನ್ನು ಬಂಧಿಸಲು ವಿಶೇ‍ಷ ತಂಡವನ್ನು ರಚಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್‌ನ ಮಹಿಳಾ ಮುಖಂಡೆ ಮೇಲೆ ಅತ್ಯಾಚಾರ ಆರೋಪ: ಕಾಂಗ್ರೆಸ್‌ ಶಾಸಕನ ಪುತ್ರನ ವಿರುದ್ಧ ಪ್ರಕರಣ ದಾಖಲು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights