FACT CHECK | ರಷ್ಯಾದಲ್ಲಿ ಇತ್ತೀಚೆಗೆ ಸಂಭವಿಸಿದ ವಿಮಾನ ಅಪಘಾತ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ

ರಷ್ಯಾದಲ್ಲಿ ಇತ್ತೀಚೆಗೆ ಸಂಭವಿಸಿದ ವಿಮಾನ ಅಪಘಾತಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ವಿಮಾನವೊಂದು ನೀರಿನಿಂದ ತುಂಬಿದ ರನ್ ವೇ ನಲ್ಲಿ ಚಲಿಸುತ್ತಿರುವುದನ್ನು ಕಾಣಬಹುದು.

ರಷ್ಯಾ ವಿಮಾನ ಪತನ ಎಂದು ಸಂಬಂಧವಿಲ್ಲದ ವೀಡಿಯೋ ಹಂಚಿಕೆ

“ವಿಮಾನ ಪತನ; ಲ್ಯಾಂಡಿಂಗ್ ಪ್ರಯತ್ನ ವಿಫಲ; 5 ಮಕ್ಕಳು, ಸಿಬ್ಬಂದಿ ಸೇರಿದಂತೆ 49 ಮಂದಿ  ದುರಂತ ಸಾವು” ಎಂಬ ಹೇಳಿಕೆಯೊಂದಿಗೆ ಫೇಸ್‌ಬುಕ್ ನಲ್ಲಿ ವೀಡಿಯೋ ಹಂಚಿಕೊಳ್ಳಲಾಗುತ್ತಿದೆ. ಇದೇ ರೀತಿಯ ಹೇಳಿಕೆಯಿರುವ ಪೋಸ್ಟ್‌ಗಳನ್ನು ಇಲ್ಲಿ,ಇಲ್ಲಿಮತ್ತುಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೊಣ.

ಫ್ಯಾಕ್ಟ್‌ಚೆಕ್ :

ರಷ್ಯಾದಲ್ಲಿ ವಿಮಾನ ಪತನದ ವಿಡಿಯೋ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವನ್ನು ಪರಿಶೀಲಿಸಲು, ವಿಡಿಯೋದ ಕೀ ಫ್ರೇಮ್‌ಗಳನ್ನು ತೆಗೆದು  ಗೂಗಲ್ ಲೆನ್ಸ್‌ ಮೂಲಕ ಸರ್ಚ್ ಮಾಡಿದಾಗ, ಡಿಸೆಂಬರ್ 22, 2024 ರಂದು @Combat_learjet  ಎಂಬ ಎಕ್ಸ್ ನಿಂದ ಹಂಚಿಕೊಂಡ ಪೋಸ್ಟ್‌ ಲಭ್ಯವಾಗಿದೆ. ಈ ವೀಡಿಯೋ ನೀರು ತುಂಬಿದ ರನ್‌ವೇಯಲ್ಲಿ ವಿಮಾನ ಇಳಿಯುವ ಅದೇ ವೀಡಿಯೊವನ್ನು ಒಳಗೊಂಡಿತ್ತು, ಇದು ಇತ್ತೀಚಿನ ಅಪಘಾತಕ್ಕಿಂತ ಹಿಂದಿನದು ಎಂದು ದೃಢಪಡಿಸುತ್ತದೆ.

ರಷ್ಯಾ ವಿಮಾನ ಪತನ ಎಂದು ಸಂಬಂಧವಿಲ್ಲದ ವೀಡಿಯೋ ಹಂಚಿಕೆ

ವೈರಲ್ ಕ್ಲಿಪ್ ಅನ್ನು ಎಚ್ಚರಿಕೆಯಿಂದ ವಿಶ್ಲೇಷಿಸಿದಾಗ, ಮೇಲ್ನೋಟಕ್ಕೆ ವಿಮಾನಕ್ಕೆ ಯಾವುದೇ ಹಾನಿಯಿಲ್ಲದ ರೀತಿ ಸುರಕ್ಷಿತವಾಗಿ ಇಳಿದಂತೆ ಕಾಣುವುದನ್ನು ಗಮನಿಸಿದ್ದೇವೆ. ಇದಲ್ಲದೇ  ರಷ್ಯಾದ ವಿಮಾನವು ದಟ್ಟವಾದ ಕಾಡಿನಲ್ಲಿ ಪತನಗೊಂಡಿರುವ ವರದಿಗಳಿದ್ದು, ವೈರಲ್ ವೀಡಿಯೋ ಅದಕ್ಕೆ ವಿರುದ್ಧವಾಗಿರುವುದು ಅನುಮಾನಗಳನ್ನು ಹುಟ್ಟುಹಾಕಿದೆ.

ಮಳೆಯ ನಂತರ ದಕ್ಷಿಣ ಸುಡಾನ್‌ನ ಜುಬಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸ್ಥಿತಿಯನ್ನು ತೋರಿಸುವ ವೈರಲ್ ಕ್ಲಿಪ್ ಅನ್ನು ‘ SSGTV ನ್ಯೂಸ್: ಸೌತ್ ಸುಡಾನ್ ಗ್ಲೋಬಲ್ ‘ ಮಾರ್ಚ್ 29, 2023 ರಂದು ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಲಾಗಿದೆ.

ಈ ವೀಡಿಯೊದ ಕುರಿತು ಇತರ ವಿವರಗಳನ್ನು ನಾವು ಸ್ವತಂತ್ರವಾಗಿ ಖಚಿತಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ, ಆದಾಗ್ಯೂ, ಇದು ಕನಿಷ್ಠ ಮಾರ್ಚ್ 2023 ರಿಂದ ಆನ್‌ಲೈನ್‌ನಲ್ಲಿ ಲಭ್ಯವಿದೆ ಮತ್ತು ಆದ್ದರಿಂದ ರಷ್ಯಾದ ಅಮುರ್ ಪ್ರದೇಶದಲ್ಲಿ ಅಂಗಾರ ಏರ್‌ಲೈನ್ಸ್ ವಿಮಾನ ಅಪಘಾತದ ದೃಶ್ಯ ಇದಲ್ಲ ಎಂಬುದು ಸ್ಪಷ್ಟವಾಗಿದೆ. ಸಾಕ್ಷ್ಯಗಳ ಪ್ರಕಾರ, ಹಳೆಯ ಮತ್ತು ಸಂಬಂಧವಿಲ್ಲದ ದೃಶ್ಯಗಳನ್ನು ರಷ್ಯಾದಲ್ಲಿ ಇತ್ತೀಚೆಗೆ ನಡೆದ ವಿಮಾನ ಅಪಘಾತದೊಂದಿಗೆ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ ಎಂದು ಕಂಡುಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ರಷ್ಯಾದಲ್ಲಿ ಇತ್ತೀಚೆಗೆ ಸಂಭವಿಸಿದ ವಿಮಾನ ಅಪಘಾತದ ದೃಶ್ಯ ಎಂದು ಹಳೆಯ ಸಂಬಂಧವಿಲ್ಲದ ವಿಡಿಯೋ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ವ್ಯಕ್ತಿಯೊಬ್ಬ ಮಹಿಳೆಯಂತೆ ಬುರ್ಖಾ ಧರಿಸಿದ ಈ ಘಟನೆ ಭಾರತದ್ದಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights