ತಾರಕಕ್ಕೇರಿದ ಕನ್ನಂಬಾಡಿ ಕಾಳಗ : “ಹೆಚ್ಡಿಕೆ ಸುಮಲತಾ ಅಕ್ಕನ ತೇಜೋವಧೆ ಮಾಡಿಲ್ಲ”- ಶಾಸಕ ಅನ್ನದಾನಿ

ಕನ್ನಂಬಾಡಿ ಕಾಳಗ ತಾರಕಕ್ಕೇರಿದ್ದು ಮಂಡ್ಯದಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ಅಂಬರೀಷ್ ನಡುವೆ ವಾಕ್ಸಮರ ಜೋರಾಗಿದೆ. ಇದರ ಮಧ್ಯೆ ಜೆಡಿಎಸ್ ಶಾಸಕ ಅನ್ನದಾನಿ ಹೆಚ್ಡಿಕೆ ಸುಮಲತಾ ಅಕ್ಕನ ತೇಜೋವಧೆ ಮಾಡಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಮಾಧ್ಯಮದ ಮುಂದೆ ಮಾಜಿ ಸಿಎಂ ಹೆಚ್ಡಿಕೆ ಹೇಳಿಕೆಯನ್ನು ಸಮರ್ಥಿಸಿಕೊಂಡ ಜೆಡಿಎಸ್ ಶಾಸಕ ಅನ್ನದಾನಿ, ‘ಕೆಆರ್ಎಸ್ ಬಿರುಕು ಬಿಟ್ಟದ್ದರೆ ಅದಕ್ಕೆ ಸಂಸದೆ ಸುಮಲತಾ ಅವರನ್ನು ಮಲಗಿಸಿ’ ಎನ್ನುವ ಮಾತು ತೇಜೋವಧೆ ಮಾಡುವಂತ ಪದವಲ್ಲ, ಸಮಾನ್ಯಪದ ಎಂದಿದ್ದಾರೆ.

“ಸುಮಲತಾ ರಾಜಕಾರಣಕ್ಕೆ ಬಂದು 2 ವರ್ಷವಾಗಿದೆ. ಕುಮಾರಸ್ವಾಮಿಯವರು ರಕ್ತದಿಂದ ರಾಜಕಾರಣ ಮಾಡಿಕೊಂಡು ಬಂದವರು. ಅವರಿಗೆ ನೀವು ಕ್ಷಮೆ ಕೇಳಬೇಕು ಅಂದ್ರೆ ಹೇಗೆ? ನೀವು ರಾಜಕಾರಣ ಕಲಿತುಕೊಳ್ಳಿ. ಅಭಿವೃದ್ಧಿ ಮಾಡಲೂ ನಾವು ಕೂಡ ಶಾಸಕರಿದ್ದೇವೆ. ನೀವೇ ಮಾಡಬೇಕು ಅಂತೇನು ಇಲ್ಲ. ೀಗ ಯಾಕೆ ಇಷ್ಟೊಂದು ಬಡಿದಾಡುತ್ತಿದ್ದೀರಾ..” ಎಂದು ಪ್ರಶ್ನಿಸಿದ್ದಾರೆ.

ಇದರ ಬದಲಿಗೆ ಮೇಕೇದಾಟು ಯೋಜನೆ, ರೈಲ್ವೆ ಸಂಪರ್ಕದ ಬಗ್ಗೆ ವಿಚಾರಣೆ ಮಾಡಿ. ಶ್ರೀರಂಗಪಟ್ಟದಲ್ಲಿ ಯಾಕೆ ವಿರೋಧ ನಿಮ್ಗೆ. ಶಾಸಕ ರವೀಂದ್ರ ಶ್ರೀಕಂಠಯ್ಯ ಅವರ ಮೇಲೆ ಕೋಪಾನಾ ನಿಮ್ಗೆ? ಅಲ್ಲೇ ಯಾಕ್ ಹೋಗಿ ಅಕ್ರಮ ಗಣಿಗಾರಿಕೆ ಬಗ್ಗೆ ನೋಡ್ತೀರಾ. ಮಂಡ್ಯದ ಬಹುತೇಕ ಕಡೆಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಅಲ್ಲೆಲ್ಲ ಬಿಟ್ಟು ಶ್ರೀರಂಗಪಟ್ಟಕ್ಕೆ ಯಾಕೆ ಹೋಗ್ತೀರಾ..?

ಆಣೆಕಟ್ಟು ಕಟ್ಟಿದಾಗಿನಿಂದ ನೀರು ಲೀಕೇಜ್ ಆಗ್ತಾನೇ ಇದೆ. ಅದು ಸಹಜವಾಗಿ ಆಗ್ತಾಯಿದೆ. ಈಗ್ಲೂ ಆಗ್ತಿದೆ. ಅದನ್ನ ನೋಡಿ ಲೀಕ್ ಆಗ್ತಿದೆ ಎಂದು ಹೇಳಿದರೆ ಹೇಗೆ? ಕನ್ನಂಬಾಡಿ ನಾಲ್ವಡಿ ವಿಶ್ವೇಶ್ವರಯ್ಯ ಅವರು ಕಟ್ಟಿದ್ದು ಇನ್ನೂ ನೂರು ವರ್ಷ ಗಟ್ಟಿ ಇರುತ್ತೆ. ಎಂಪಿ ಆಗಿ 2 ವರ್ಷದಲ್ಲಿ ನೀವು ಏನ್ ಮಾಡಿದ್ದೀರಾ..? ಎಂದು ಪ್ರಶ್ನಿಸಿದ್ದಾರೆ.

ಸಿನಿಮಾ ತೋರಿಸಿ ಗೆದ್ದವರು ನೀವು, ನಾವಲ್ಲಾ. ಸಿನಿಮಾ ನಟ, ನಿರ್ದೇಶಕರನ್ನು ಕರೆತಂದು ಸಿನಿಮಾ ತೋರಿಸಿ ಗೆದ್ದವರು ನೀವು. ನಾವು ಗೆದ್ದು ಸೋತಿದ್ದೇವೆ ಎಂದು ತಿರುಗೇಟು ಕೊಟ್ಟಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights