FACT CHECK | ಸುಹೇಲ್ ಅನ್ಸಾರಿ ಎಂಬ ಯೋಗ ತರಬೇತುದಾರ ಹಿಂದೂ ಮಹಿಳೆಯರನ್ನು ಇಸ್ಲಾಂಗೆ ಮತಾಂತರ ಮಾಡುತ್ತಿದ್ದಾನೆ ಎಂಬುದು ಸುಳ್ಳು
ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಮುಸ್ಲಿಂ ಯುಕನೊನ್ನ ಹಿಂದೂ ಹುಡುಗಿಯರನ್ನು ಇಸ್ಲಾಂಗೆ ಮದುವೆ ಮಾಡಿಸಿದ್ದಾನೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.
ಪೋಸ್ಟ್‌ನಲ್ಲಿ ಈ ರೀತಿ ಹೇಳಲಾಗಿದೆ, ಇವನ ಹೆಸರು ಸುಹೇಲ್ ಅನ್ಸಾರಿ..ಇವನು ಯೋಗ ತರಬೇತುದಾರ.ಯೋಗ ಕಲಿಸುವ ರೀತಿ ನೋಡಿ,ಅಷ್ಟೇ ಅಲ್ಲ ಇವನು ಐದು ಹಿಂದೂ ಮಹಿಳೆಯರುನ್ನು ಇಸ್ಲಾಂಗೆ ಮದುವೆ ಮಾಡಿಸಿದ್ದಾನೆ. ಈ ರೀತಿ ಯೋಗ ಮಾಡಲು ಹೋಗುವವರು ಶ್ರೀಮಂತ ಹಿಂದೂ ಮಹಿಳೆಯರು ಮಾತ್ರ. ಹಿಂದೂ ಹುಡುಗಿಯರು ಜಾಗ್ರತೆ ವಹಿಸಬೇಕು.ನೀವು ಯೋಗ ಮಾಡಬೇಕೆಂದರೆ ಹಲವಾರು ಹಿಂದೂ ಮಹಿಳಾ ಯೋಗ ಗುರುಗಳು ಸಿಗುತ್ತಾರೆ.ಈ ಜಿಹಾದಿಗಳಿಂದ ದೂರವಿರಿ ಎಂಬ ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ.
ಇತ್ತೀಚೆಗೆ ಮುಸ್ಲಿಮರಿಗೆ ಸಂಬಂಧಿಸಿದ ಯಾವುದೇ ವಿಷಯಗಳನ್ನು ಕೋಮುದ್ವೇಷ ಹರಡುವ ಸಲುವಾಗಿ ತಿರುಚಿ ಹಂಚಿಕೊಳ್ಳಲಾಗುತ್ತಿದೆ. ಹಾಗೆಯೇ ಮುಸ್ಲಿಂ ಪ್ರತಿಭೆಗಳನ್ನು ಕೇಂದ್ರವಾಗಿರಿಸಿಕೊಂಡು ಸುಳ್ಳು ಆರೋಪಗಳೊಂದಿಗೆ ಅಪಪ್ರಚಾರ ಮಾಡಲಾಗುತ್ತಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಮುಸ್ಲಿಂ ತರಬೇತುದಾರ ಸುಹೇಲ್ ಅನ್ಸಾರಿ ಎಂಬ ವ್ಯಕ್ತಿ ನಿಜವಾಗಿಯೂ ಪೋಸ್ಟ್‌ನಲ್ಲಿ ಹೇಳಿರುವಂತಹ ಕೃತ್ಯದಲ್ಲಿ ಭಾಗಿಯಾಗಿದ್ದಾನೆಯೇ? ಅವನ ವಿರುದ್ದ ಪ್ರಕರಣವೇನಾದರೂ ಇದೆಯೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಸುಹೇಲ್ ಅನ್ಸಾರಿ ಅಡ್ವಾನ್ಸ್ಡ್ ಯೋಗ ತರಬೇತಿ ಪಟು ಆಗಿದ್ದು, ಮೂಲತಃ ದೆಹಲಿಯವರಾಗಿದ್ದಾರೆ. ತಾನು ಕಾಮನ್ವೆಲ್ತ್ ಕ್ರಿಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದೆ ಎಂದು ಹೇಳಿಕೊಂಡಿದ್ದಾರೆ. ಇವರು ಯೋಗಕ್ಕೆ ಸಂಬಂಧಿಸಿದಂತೆ ಉತ್ತರಖಾಂಡದ ಋಷಿಕೇಶದ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಒಂದು ವರ್ಷದ ಡಿಪ್ಲಮೋ ಮತ್ತು ಎರಡು ವರ್ಷದ ಸ್ನಾತಕೊತ್ತರ ಪದವಿಯನ್ನು ಯೋಗದಲ್ಲಿ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
View this post on Instagram
ತಮ್ಮ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವಿಡಿಯೋಗೆ ಇನ್ಟಾಗ್ರಾಮ್ ಖಾತೆಯಲ್ಲಿ ಮೂಲಕ ಪ್ರತಿಕ್ರಿಯಿಸಿರುವ ಅವರು ವಿಡಿಯೋ ಒಂದನ್ನು ಇನ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ “ಇದೆಲ್ಲ ಸುಳ್ಳು. ನಾವು ಯೋಗ ಕಲಿಸಿಕೊಡುವಾಗ ಯಾವುದೇ ಜಾತಿ ಮತ್ತು ಧರ್ಮವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಕಲಿಸಿಕೊಡುವುದಿಲ್ಲ, ನಾನೊಬ್ಬ ಯೋಗ ತರಬೇತಿದಾರನಾಗಿ ಎಲ್ಲರನ್ನೂ ಸಮಾನವಾಗಿ ನೋಡುತ್ತೇನೆ. ಎಲ್ಲಾ ಧರ್ಮದವರು ಮತ್ತು ಗಂಡು-ಹೆಣ್ಣು ಎಂದು ಸಹ ಬೇದ ಭಾವ ಮಾಡುವುದಿಲ್ಲ. ನನ್ನ ಬಳಿ ಯೋಗ ಕಲಿಯಲು ಬರುವವರು ಬಹುತೇಕ ಯೋಗ ಟೀಚರ್‌ಗಳೇ ಆಗಿರುತ್ತಾರೆ. ನಾನು ಅವರಿಗೆ ಅಡ್ವಾನ್ಸ್ಡ್ ಯೋಗ ಕಳಿಸಿಕೊಡುತ್ತೇನೆ.” ಎಂದು ಸ್ಪಷ್ಟನೆ ನೀಡಿದ್ದಾರೆ.
ಸುಹೇಲ್ ಅನ್ಸಾರಿ ಅವರು ಹಿಂದು ಯುವತಿಯರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿರುವ ಕುರಿತು ಸರ್ಚ್ ಮಾಡಿದಾಗ ಅಂತಹ ಯಾವುದೇ ದಾಖಲೆಗಳಾಗಲಿ, ಪೊಲೀಸ್ ಪ್ರಕರಣವಾಗಿಲಿ ಸುದ್ದಿ ವರದಿಗಳಾಗಲಿ ಕಂಡುಬಂದಿಲ್ಲ. ಹಾಗಾಗಿ ಇದು ಕೋಮು ದ್ವೇಷದ ಹಿನ್ನಲೆಯಲ್ಲಿ ಹಂಚಿಕೊಳಲಾದ ಫೇಕ್ ಪೋಸ್ಟ್ ಎಂಬುದು ಸ್ಪಷ್ಟವಾಗುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ, ಯೋಗ ತರಬೇತುದಾರ ಸುಹೇಲ್ ಅನ್ಸಾರಿ 5 ಹಿಂದೂ ಮಹಿಳೆಯರುನ್ನು ಇಸ್ಲಾಂಗೆ ಮದುವೆ ಮಾಡಿಸಿದ್ದಾನೆ ಎಂದು ಸುಳ್ಳು ಮತ್ತು ಕೋಮು ದ್ವೇಷದ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: FACT CHECK | ಬಿಜೆಪಿ ಈ ದೇಶವವನ್ನು ಒಗ್ಗೂಡಿಸುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿಲ್ಲ