ಫ್ಯಾಕ್ಟ್‌ಚೆಕ್: ಪ್ರಧಾನಿ ಮೋದಿ ಅದಾನಿ ಪತ್ನಿಗೆ ತಲೆಬಾಗಿ ನಮಸ್ಕರಿದರು ಎಂಬುದು ನಿಜವೇ?
ಪ್ರಧಾನಿ ಮೋದಿ ಮಹಿಳೆಯೊಬ್ಬರಿಗೆ ಕೈಮುಗಿಯುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರಲ್ಲಿ ಮೋದಿ ಮಹಿಳೆಯ ಮುಂದೆ ತಲೆ ಬಾಗಿ ನಿಂತಿರುವಂತೆ ಕಾಣುತ್ತಿದೆ. ಮೋದಿ ನಮಸ್ಕರಿಸುತ್ತಿರುವುದು ರೈತ ಮಹಿಳೆಗೊ, ಯೋಧ ಮಹಿಳೆಗೊ ಅಲ್ಲ, ಬದಲಿಗೆ ಮೋದಿ ನಮಸ್ಕರಿಸುತ್ತಿರುವ ಮಹಿಳೆ ಖ್ಯಾತ ಉದ್ಯಮಿ ಅದಾನಿ ಅವರ ಪತ್ನಿ ಪ್ರೀತಿ ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಫೋಟೋವನ್ನು ಪರಿಶೀಲಿಸುವಂತೆ ಏನ್‌ಸುದ್ದಿ.ಕಾಂನ ಓದುಗರು ವಾಟ್ಸಾಪ್ ಮಾಡುವ ಮೂಲಕ ವಿನಂತಿಸಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್:
ಪ್ರಧಾನಿ ನರೇಂದ್ರ ಮೋದಿ ಅದಾನಿ ಅವರ ಪತ್ನಿ ಪ್ರೀತಿ ಅವರ ಮುಂದೆ ತಲೆ ಬಾಗಿ ನಮಸ್ಕರಿಸುತ್ತಿದ್ದಾರೆ ಎಂದು ಹೇಳಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಫೋಟೊವನ್ನು ಪರಿಶೀಲಿಸಿದಾಗ, 2018ರಂದು ಒನ್ ಇಂಡಿಯಾ ಇದೇ ಫೋಟೊವನ್ನು ಲೇಖನದ ಮೂಲಕ ಪ್ರಕಟಿಸಿದೆ.

ಲೇಖನದ ಪ್ರಕಾರ ಈ ವೈರಲ್ ಫೋಟೋವನ್ನು 2015ರಲ್ಲಿ ಕ್ಲಿಕ್ಕಿಸಲಾಗಿದ್ದು ಮೋದಿ ನಮಸ್ಕರಿಸುತ್ತಿರುವ ಮಹಿಳೆಯನ್ನು ದೆಹಲಿಯ NGO ದಿವ್ಯಜ್ಯೋತಿ ಸಾಂಸ್ಕೃತಿಕ ಸಂಸ್ಥೆ ಮತ್ತು ಸಮಾಜ ಕಲ್ಯಾಣ ಸಂಘದ (DCOWS) ಮುಖ್ಯ ಕಾರ್ಯಕಾರಿ ಅಧಿಕಾರಿ ದೀಪಿಕಾ ಮೊಂಡೋಲ್ ಎಂದು ವರದಿ ಮಾಡಿದೆ.

ಅಮರ್ ಉಜಾಲಾದಲ್ಲಿ ಅವರ 2018 ರಲ್ಲಿ ಪ್ರಕಟವಾದ ಲೇಖನವೂ ಇದನ್ನೆ ಖಚಿತಪಡಿಸಿದ್ದು, ಎಪಿಜೆ ಅಬ್ದುಲ್ ಕಲಾಂ, ಅಮಿತಾಬ್ ಬಚ್ಚನ್, ಜಯಾ ಬಚ್ಚನ್, ರಜನಿಕಾಂತ್, ಶಾರುಖ್ ಖಾನ್ ಮತ್ತು ವಿದ್ಯಾ ಬಾಲನ್ ಅವರಂತಹ ಇತರ ಪ್ರಮುಖ ವ್ಯಕ್ತಿಗಳೊಂದಿಗೆ ದೀಪಿಕ ಮೊಂಡೋಲ್ ಫೋಟೊಗಳನ್ನು ಹೊಂದಿದ್ದಾರೆ. ಈ ಫೋಟೋ 2015 ರಲ್ಲಿ ದೀಪಿಕಾ ಮೊಂಟಲ್ ಮತ್ತು ನರೇಂದ್ರ ಮೋದಿ ಅವರೊಂದಿಗೆ ತೆಗೆದದ್ದುಎಂದು ವರದಿ ಮಾಡಿದೆ.

NGO ಫೌಂಡೇಶನ್ ಡೈರೆಕ್ಟರಿಯಲ್ಲಿ ನಮೂದಿಸಲಾದ ಸಂಖ್ಯೆಯನ್ನು ಬಳಸಿಕೊಂಡು Altnews ದೀಪಿಕಾ ಅವರ ಪತಿ ಸಮರ್ ಮೊಂಡೋಲ್ ಅವರೊಂದಿಗೆ ಮಾತನಾಡಿದೆ. “ಪ್ರಧಾನಿ ಮೋದಿ ಅವರೊಂದಿಗಿನ ನನ್ನ ಪತ್ನಿಯ ಚಿತ್ರವನ್ನು ಸುಳ್ಳು ಹೇಳಿಕೆಯೊಂದಿಗೆ ಪ್ರಸಾರ ಮಾಡಲಾಗುತ್ತಿದೆ, ಈ ಚಿತ್ರವನ್ನು ಯಾವ ವರ್ಷ ಕ್ಲಿಕ್ಕಿಸಲಾಗಿದೆ ಎಂದು ನನಗೆ ನೆನಪಿಲ್ಲ, ಇದು ಬಹುಶಃ DCOWS ಈವೆಂಟ್‌ನಿಂದ ಬಂದಿದೆ ಎಂದು ದೀಪಿಕಾ ಅವರ ಪತಿ ಸಮರ್ ಮೊಂಡೋಲ್ ಆಲ್ಟ್‌ನ್ಯೂಸ್‌ಗೆ ತಿಳಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ದಿವ್ಯಜ್ಯೋತಿ ಸಾಂಸ್ಕೃತಿಕ ಸಂಸ್ಥೆ ಮತ್ತು ಸಮಾಜ ಕಲ್ಯಾಣ ಸಂಘದ (NGO) ಮುಖ್ಯಸ್ಥೆ ದೀಪಿಕಾ ಮೊಂಡೋಲ್ ಅವರನ್ನು ಉದ್ಯಮಿ ಅದಾನಿ ಅವರ ಪತ್ನಿ ಪ್ರಿತಿ ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರು ತಲೆಬಾಗಿ ನಮಸ್ಕರಿಸಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಹೊಸ ವರ್ಷದಿಂದ ಮತ್ತೆ ₹1000 ಮುಖಬೆಲೆಯ ನೋಟುಗಳು ಚಲಾವಣೆಗೆ ಬರುವುದು ನಿಜವೇ?

