ಫ್ಯಾಕ್ಟ್‌ಚೆಕ್ : ಬೀದಿ ನಾಯಿ ಕಡಿದರೆ, ನಾಯಿಗೆ ಆಹಾರ ನೀಡುವವರೇ ಸಂಪೂರ್ಣ ಹೊಣೆ ಎಂದು ಸುಪ್ರೀಂ ಕೋರ್ಟ್ ಹೇಳಿಲ್ಲ
ಪ್ರತಿಯೊಬ್ಬರಿಗೂ ಇಷ್ಟವಾಗುವ ಪ್ರಾಣಿ ಎಂದರೆ ನಾಯಿ. ಮನುಷ್ಯರೊಂದಿಗೆ ಹೆಚ್ಚು ಸ್ನೇಹದಿಂದ ಮತ್ತು ಅತಿ ಹೆಚ್ಚು ಬೆಲೆ ನೀಡುವ ಪ್ರಾಣಿ ನಾಯಿ. ಇಷ್ಟೆಲ್ಲ ಇದ್ದರೂ ಭಾರತದಲ್ಲಿ ವರ್ಷಕ್ಕೆ ಸರಾಸರಿ 2 ಕೋಟಿಯಷ್ಟು ಜನರು ನಾಯಿ ಕಡಿತಕ್ಕೆ ಒಳಗಾಗುತ್ತಾರೆ. ಈಗ ಸಾಮಾಜಿಕ ಜಾಲಾಣದಲ್ಲಿ ನಾಯಿ ಕಡಿತಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಆದೇಶದ ಸುದ್ದಿಯೊಂದು ಹರಿದಾಡುತ್ತಿದೆ.
ಸುಪ್ರೀಂ ಕೋರ್ಟ್‌ನ ಆದೇಶದ ಪ್ರಕಾರ ಬೀದಿನಾಯಿಯು ಮನುಷ್ಯನಿಗೆ ಕಚ್ಚಿದರೆ ಆ ನಾಯಿಗೆ ಆಹಾರ ನೀಡುವ ವ್ಯಕ್ತಿಯೇ ಚಿಕಿತ್ಸೆ ಮತ್ತು ಪರಿಹಾರದ ವೆಚ್ಚವನ್ನು ಭರಿಸಬೇಕು ಎಂಬ ಪೋಸ್ಟ್ ಅನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಈ ಸುದ್ದಿ ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸುಪ್ರೀಂ ಕೋರ್ಟ್‌ನಿಂದ ಅಂತಹ ಯಾವುದಾದರೂ ಆದೇಶ ಬಂದಿದೆಯೇ ಎಂದು ಸಂಬಂಧಿತ ಕೀವರ್ಡ್‌ಗಳೊಂದಿಗೆ ಸರ್ಚ್ ಮಾಡಿದಾಗ ಅಂತಹ ಯಾವುದೇ ಆದೇಶದ ಉಲ್ಲೇಖವು ಲಭ್ಯವಗಿಲ್ಲ. ಅಲ್ಲದೆ, 09 ಸೆಪ್ಟೆಂಬರ್ 2022 ರಂದು ಅನಿಮಲ್ ವೆಲ್ಫೇರ್ ಬೋರ್ಡ್ ಆಫ್ ಇಂಡಿಯಾ ವರ್ಸಸ್ ಪೀಪಲ್ ಫಾರ್ ಸ್ಟ್ರೈಬ್ರಲ್ಸ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆದೇಶವು ಮುಂದಿನ ವಿಚಾರಣೆಗೆ ಅಂದರೆ ದಿನಾಂಕ 29 ಸೆಪ್ಟೆಂಬರ್ 2022ರಂದು ಬೀದಿ ನಾಯಿ ಕಡಿತದ ಪರಿಹಾರದ ಸಮಸ್ಯೆಯ ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆ ಸಿರಿ ಜಗನ್ ಸಮಿತಿಯನ್ನು ಕೋರಿದೆ.
ಅಲ್ಲದೆ, ಇಂಡಿಯನ್ ಎಕ್ಸ್‌ಪ್ರೆಸ್ ಮತ್ತು ಇಂಡಿಯಾ ಟುಡೇ ವರದಿಗಳ ಪ್ರಕಾರ, ಬೀದಿ ನಾಯಿ ಕಡಿತದ ಪ್ರಕರಣಗಳಿಗೆ ಪರಿಹಾರವನ್ನು ನಿರ್ಧರಿಸಲು ಸಮಿತಿಯನ್ನು (ಸಿರಿ ಜಗನ್ ಸಮಿತಿ) ಹೊಂದಿರುವ ಭಾರತದ ಏಕೈಕ ರಾಜ್ಯ ಕೇರಳವಾಗಿದೆ. ಬೀದಿನಾಯಿಯಿಂದ ಉಂಟಾಗುವ ಗಾಯಗಳ ಸ್ವರೂಪ ಮತ್ತು ಅಪಘಾತದ ಗುರುತ್ವಾಕರ್ಷಣೆಗೆ ಅನುಗುಣವಾಗಿ ಸ್ಥಳೀಯ ಸರ್ಕಾರವು ಪರಿಹಾರವನ್ನು ಪಾವತಿಸುತ್ತದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಒಂದು ವೇಳೆ ಬೀದಿ ನಾಯಿ ಕಡಿದರೆ, ಅದಕ್ಕೆ ಆಹಾರ ನೀಡುವ ವ್ಯಕ್ತಿಯೇ ನೇರ ಹೊಣೆ , ಆ ಸಂದರ್ಭದಲ್ಲಿ ಪರಿಹಾರವನ್ನು ಆ ವ್ಯಕ್ತಿಯೇ ನೀಡಬೇಕು ಎಂದು ಹೇಳುವ ಯಾವುದೇ ಸುಪ್ರೀಂ ಕೋರ್ಟ್ ತೀರ್ಪು ಇನ್ನು ಬಂದಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಸ್ಮೃತಿ ಇರಾನಿ ತಮ್ಮ ಲ್ಯಾಪ್‌ಟಾಪ್‌ನಲ್ಲಿ ಭಾರತ್ ಜೋಡೋ ಯಾತ್ರೆ ನೋಡುತ್ತಿದ್ದರೆ?