ಫ್ಯಾಕ್ಟ್‌ಚೆಕ್ : ನಾನು ಪಾಕಿಸ್ತಾನಿ ಎಂದು ಹೇಳಲು ಹೆಮ್ಮೆ ಪಡುತ್ತೇನೆ ಎಂದು ಶಾರುಖ್ ಖಾನ್ ಹೇಳಿದ್ದು ನಿಜವೇ ?
ನಟ ಶಾರುಖ್ ಖಾನ್ ಅವರು ಇಸ್ಲಾಂ ಧರ್ಮ ಮತ್ತು ಪಾಕಿಸ್ತಾನದ ಬಗ್ಗೆ ಮಾತನಾಡಿರುವ ಆಘಾತಕಾರಿ ಹೇಳಿಕೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಶಾರುಖ್ ಖಾನ್ ತಮ್ಮನ್ನು “I am very proud to be a Pakistan” ( ನಾನು ಹೆಮ್ಮೆಯ ಪಾಕಿಸ್ತಾನಿ) ಎಂದು ಹೇಳಿಕೊಂಡಿದ್ದು ಹಿಂದೂ ದೇವರುಗಳನ್ನು ಅಗೌರವಿಸಿದ್ದಾರೆ ಎಂದು ಪೋಸ್ಟ್‌ನಲ್ಲಿ ಪ್ರತಿಪಾದಿಸಲಾಗಿದೆ.
#ShahRukhKhan says,I am proud to be Muslim & Pakistani !! pic.twitter.com/CzdfyhR6bg
— ASHWIN (@Akkis_Army) September 17, 2022
“ವಿಶೇಷವಾಗಿ ನನ್ನ ದೇಶದಲ್ಲಿ ಜನರು ಇಸ್ಲಾಂ ಅನ್ನು ಅಲ್ಪಸಂಖ್ಯಾತರು ಎಂದು ತಪ್ಪಾಗಿ ಭಾವಿಸುತ್ತಾರೆ. ನನ್ನ ಧರ್ಮದ ಬಗ್ಗೆ ನನಗೆ ವಿಶೇಷವಾದ ಭಾವನೆ ಇದೆ. ನಾನು ಹುಟ್ಟಿನಿಂದ ಇಸ್ಲಾಮಿಕ್, ಹಾಗಾಗಿ ನಾನು ಅಲ್ಲಾನನ್ನು ನಂಬುತ್ತೇನೆ ಮತ್ತು ಅವರ ಮಾತನ್ನು ಕೂಡ. ನಾನು ಮುಸ್ಲಿಂ ಆಗಿರುವುದಕ್ಕೆ ಹೆಮ್ಮೆಪಡುತ್ತೇನೆ, ನಾನು ಪಾಕಿಸ್ತಾನಿ ಎಂಬುದಕ್ಕೆ ತುಂಬಾ ಹೆಮ್ಮೆ ಇದೆ ” ಎಂದು ಶಾರುಖ್ ಖಾನ್ ಹೇಳಿದ್ದಾರೆ ಎಂದು ವಿಡಿಯೋ ಪೋಸ್ಟ್‌ನಲ್ಲಿ ಪ್ರಸಾರಮಾಡಲಾಗಿದೆ.

ಶಾರುಖ್ ಖಾನ್ ಅವರ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು ಇದು ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ವೈರಲ್ ವಿಡಿಯೊದಲ್ಲಿ ಮಾತನಾಡಿರುವ ಶಾರುಖ್ ಖಾನ್ ಅವರ ಮಾತುಗಳನ್ನು ಆಧರಿಸಿ ಕೀ ಪ್ರೇಮ್ ಮೂಲಕ ಗೂಗಲ್ ಸರ್ಚ್ ಮಾಡಿದಾಗ 19 ಫೆಬ್ರವರಿ 2010 ರಲ್ಲಿ ಜೂಮ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಶಾರುಖ್ ಖಾನ್ ಸಂದರ್ಶನದ ಮೂಲ ವಿಡಿಯೋವೊಂದು ಲಭ್ಯವಾಗಿದ್ದು ಈ ಸಂದರ್ಶನದಲ್ಲಿ ಮಾತನಾಡುತ್ತ “ಶಾರುಖ್, ಒಬ್ಬ ಹೆಮ್ಮೆಯ ಮುಸ್ಲಿಂ ಮತ್ತು ನಾನು ಭಾರತೀಯ ಎನ್ನಲು ಹೆಮ್ಮೆ ಇದೆ ಎಂದಿದ್ದಾರೆ”.

ಮೂಲ ವಿಡಿಯೋದಲ್ಲಿ ಶಾರುಖ್ ಖಾನ್ ಏನು ಹೇಳಿದ್ದಾರೆ :
ಸುಮಾರು ಮೂರು ನಿಮಿಷ ಅವಧಿಯ ಈ ವೀಡಿಯೊದಲ್ಲಿ, ಖಾನ್ ಅವರನ್ನು ಸಂದರ್ಶಕರು ತಮ್ಮ ಧರ್ಮದ ಆಧಾರದ ಮೇಲೆ ತಾರತಮ್ಯವನ್ನು ಎದುರಿಸಿದ್ದೀರಾ ಎಂದು ಕೇಳಿದಾಗ. ಅದಕ್ಕೆ ಪ್ರತಿಕ್ರಿಯಿಸಿದ್ದ ಖಾನ್, “ನನ್ನ ಧರ್ಮದ ಹೊರತಾಗಿಯೂ, ನಾನು ಪ್ರಪಂಚದಾದ್ಯಂತ ಅಂಗೀಕರಿಸಲ್ಪಟ್ಟಿದ್ದೇನೆ.
ವಿಶೇಷವಾಗಿ ನನ್ನ ದೇಶದಲ್ಲಿ(ಭಾರತದಲ್ಲಿ)ಜನರು ಮುಸ್ಲಿಮರನ್ನು ಅಲ್ಪಸಂಖ್ಯಾತರು ಎಂದು ತಪ್ಪಾಗಿ ಭಾವಿಸಿದ್ದಾರೆ, ಇದು ವಿಪರ್ಯಾಸ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ನಾನು ಎಂದಿಗೂ ಹಾಗೆ ಭಾವಿಸಲಿಲ್ಲ. ಇಲ್ಲಿ ನನ್ನ ಧರ್ಮದ ಕಾರಣದಿಂದ ನಾನು ತುಂಬಾ ವಿಶೇಷ ಭಾವನೆಯನ್ನು ಹೊಂದಿದ್ದೇನೆ.”
ನಾನು ಹುಟ್ಟಿನಿಂದ ಇಸ್ಲಾಮಿಕ್, ಆದ್ದರಿಂದ ನಾನು ಅಲ್ಲಾನನ್ನು ನಂಬುತ್ತೇನೆ ಎಂದು ಹೇಳಿದ ಅವರು ನಾನೊಬ್ಬ ಮುಸ್ಲಿಂ, ಭಾರತೀಯ ಎಂದು ಹೇಳಲು ಹೆಮ್ಮೆಪಡುತ್ತೇನೆ. ನನ್ನ ಪತ್ನಿ ಗೌರಿ ಅವರೊಂದಿಗೆ ಹಿಂದೂ ಧಾರ್ಮಿಕ ಆಚರಣೆಗಲ್ಲಿ ಭಾಗಿಯಾಗುತ್ತೇನೆ ಎಂದು ಹೇಳಿದ್ದಾರೆ.
ಇದೇ ಸಂದರ್ಶನದ ವೇಳೆ ಶಾರುಕ್ ಖಾನ್ ಯುಎಸ್‌ನ ನೆವಾರ್ಕ್ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆಯೊಂದನ್ನು ಪ್ರಸ್ತಾಪಿಸಿ ಮಾತನಾಡಿದ್ದು , ಅಲ್ಲಿ ಅವರನ್ನು ಬಂಧಿಸಿ ಗಂಟೆಗಳ ಕಾಲ ತಡೆ ಹಿಡಿಯಲಾಗಿತ್ತು ಎಂದು ಹೇಳುತ್ತ ಅಲ್ಲಿ ಪಾಕಿಸ್ತಾನದ ಪದವನ್ನು ಬಳಸಿದ್ದಾರೆ. ಅದನ್ನೆ ಈ ವೈರಲ್ ವೀಡಿಯೊದ 1 ನಿಮಿಷ 39-ಸೆಕೆಂಡ್ ಸಮಯ ಮಾರ್ಕ್‌ನಲ್ಲಿ, ಅವರು “ಪಾಕಿಸ್ತಾನಿ” ಎಂಬ ಪದವನ್ನು ಬಳಸುವುದನ್ನು ಕೇಳಬಹುದು.
ಈ ಸಂದರ್ಭದ ಶಾರುಖ್ ಖಾನ್ ಅವರ ಹೇಳಿಕೆಯನ್ನು ತೆಗೆದುಕೊಂಡು “ನಾನು ಭಾರತೀಯ ಎಂದು ಹೇಳಲು ಹೆಮ್ಮ ಪಡುತ್ತೇನೆ” ಎಂದು ಹೇಳುವ ಜಾಗದಲ್ಲಿ ನಾನು ಪಾಕಿಸ್ತಾನಿ ಎಂದು ಹೇಳಲು ಹೆಮ್ಮೆ ಪಡುತ್ತೇನೆ ಎಂದು ಎಡಿಟ್ ಮಾಡಿರುವುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ 2010ರಲ್ಲಿ ನಡೆದ ಸಂದರ್ಶದ ಸಂದರ್ಭದಲ್ಲಿ ಶಾರುಖ್ ಖಾನ್ ನಾನು ಭಾರತೀಯ ಎನ್ನಲು ಹೆಮ್ಮ ಪಡುತ್ತೇನೆ ಎಂದು ಹೇಳಿದ್ದ ಮಾತುಗಳನ್ನು ಎಡಿಟ್ ಮಾಡಿ ಭಾರತೀಯ ಎನ್ನು ಲೈನ್ ಟೈಮ್‌ಗೆ ಪಾಕಿಸ್ತಾನಿ ಎಂದು ಸೇರಿಸುವ ಮೂಲಕ ಶಾರುಖ್ ಖಾನ್ ಬಗ್ಗೆ ತಪ್ಪಾಗಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಚೀತಾಗಳನ್ನು ಕರೆತಂದ ವಿಮಾನದಲ್ಲಿದುದ್ದು ಚೀತಾದ ಚಿತ್ರವಲ್ಲ, ವಿಮಾನ ಭಾರತದ್ದು ಅಲ್ಲ

