ಸಿಡಿ ಯುವತಿ ನೀಡಿದ ದೂರಿನ ವಿಚಾರಣೆಗೆ ಹಾಜರಾದ ರಮೇಶ್ ಜಾರಕಿಹೊಳಿ…!

ಸಿಡಿ ಲೇಡಿ ನೀಡಿದ ದೂರಿನ ವಿಚಾರಣೆಗೆ ಇಂದು ಸಾಹುಕಾರ್ ರಮೇಶ್ ಜಾರಕಿಹೊಳಿ ವಿಚಾರಣೆಗೆ ಹಾಜರಾಗಿದ್ದಾರೆ.

ಬೆಂಗಳೂರಿನ ಆಡುಗೋಡೆ ಟೆಕ್ನಿಕಲ್ ವಿಂಗ್ ನಲ್ಲಿ ರಮೇಶ್ ಜಾರಕಿಹೊಳಿ ವಿಚಾರಣೆ ಇನ್ನೇನು ಆರಂಭವಾಗಿಲಿದೆ. ಮೊನ್ನೆಯಷ್ಟೇ ಸಿಡಿ ಲೇಡಿ ತನ್ನ ವಕೀಲರಾದ ಜಗದೀಶ್ ಅವರ ಮೂಲಕ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಾಗಿದೆ. ಇದರ ವಿಚಾರಣೆಗಾಗಿ ಇಂದು ಕಬ್ಬನ್ ಪಾರ್ಕ್ ಪೊಲೀಸ್ ರು ರಮೇಶ್ ವಿಚಾರಣೆ ಮಾಡುತ್ತಿದ್ದಾರೆ.

ವಿಚಾರಣೆಗೆ ಕೇಂದ್ರ ವಲಯ ಡಿಸಿಪಿ ಅನುಚೇತ್, ಕಬ್ಬನ್ ಪಾರ್ಕ್ ಠಾಣೆ ಇನ್ಪಕ್ಟರ್ ಮಾರುತಿ ಆಗಮಿಸಿದ್ದಾರೆ. ಇನ್ನೂ ಯಾವೆಲ್ಲಾ ಪ್ರಶ್ನೆ ರಮೇಶ್ ಜಾರಕಿಹೊಳಿಗೆ ಕೇಳಬಹುದು..?

 1. ಸಿಡಿ ಲೇಡಿ ಪರಿಚಯ ರಮೇಶ್ ಜಾರಕಿಹೊಳಿಗೆ ಇದಿಯಾ?
 2. ಯುವತಿ ತಂದೆ-ತಾಯಿ ಬಗ್ಗೆ ಮಾಹಿತಿ ಇದಿಯಾ?
 3. ಮಾಜಿ ಪತ್ರಕರ್ತರಾದ ನರೇಶ್ , ಲಕ್ಷ್ಮಿನಾರಾಯಣ್ ಗೊತ್ತಾ?
 4. ಹನಿಟ್ರ್ಯಾಪ್ ಬಗ್ಗೆ ನಿಮಗೆ ಯಾವುದಾದರು ಬೆದರಿಗೆ ಕರೆ ಬಂದಿರುವುದು ಇದಿಯಾ?
 5. ಯಾರ ಮೇಲಾದರು ಅನುಮಾನ ಇದಿಯಾ?
 6. ನಿಮಗೆ ಯಾರಾದ್ರು ಶತ್ರುಗಳು ಇದ್ದಾರಾ?
 7. ಡಿಕೆ ಶಿವಕುಮಾರ್ ಮೇಲೆ ಮಾಡಿದ ಆರೋಪದ ಬಗ್ಗೆ ಕೇಳಬಹುದು..
 8. ಸಿಡಿ ಲೇಡಿ ನಿಮ್ಮ ಮೇಲೆ ಆರೋಪ ಮಾಡಲು ಪ್ರಮುಖ ಕಾರಣವೇನು?
 9. ಈ ಪ್ರಕರಣದಲ್ಲಿ ನೀವೇ ಯಾಕೆ ಟಾರ್ಗೇಟ್ ಆಗಿರಬಹುದು?
 10. ನಿಮ್ಮಿಂದ ಸಿಡಿ ಬೆದರಿಕೆ ಹಾಕಿ ಹಣ ಪಡೆದಿದ್ರಾ?
 11. ಅತ್ಯಾಚಾರದ ಆರೋಪದ ಬಗ್ಗೆ ಕೇಳಬಹುದು..

ಹೀಗೆ ಹಲವಾರು ಪ್ರಶ್ನೆಗಳನ್ನು ಮಾಡಿ ವಿಚಾರಣೆ ಮಾಡಬಹುದಾಗಿದೆ. ರಮೇಶ್ ಹೇಳಿಕೆಗಳನ್ನು ದಾಖಲಿಸಿಕೊಂಡು ಮುಂದಿನ ನಿಲುವು ಪೊಲೀಸರು ತೆಗೆದುಕೊಳ್ಳಲಿದ್ದಾರೆ. ಜೊತೆಗೆ ಯುವತಿ  ರಮೇಶ್ ದೂರು ಮಾತ್ರವಲ್ಲದೇ ನ್ಯಾಯಾದೀಶರಿಗೂ ಯುವತಿ ಒಂದು ಪತ್ರ ಬರೆದಿದ್ದಾಳೆ ಎನ್ನಲಾಗುತ್ತಿದೆ. ಈ ಪತ್ರ ನಿಜವಾದರೆ, ಒಂದು ವೇಳೆ ನ್ಯಾಯಾದೀಶರು ಗಂಭೀರವಾಗಿ ಪತ್ರವನ್ನು ಪರಿಗಣಿಸಿದ್ದೇ ಆದರೆ ರಮೇಶ್ ಜಾರಕಿಹೊಳಿಗೆ ಸಂಕಷ್ಟ ಕಟ್ಟಿಟ್ಟಬುತ್ತಿ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights