ಫೇಮಸ್ ಆಯ್ತು ಕನಕಪುರ ಬಂಡೆಯ ಗಡ್ಡ : ಈ ಸ್ಟೈಲ್ ಚೇಂಚ್ ಮಾಡ್ಬೇಡಿ ಎಂದ ಅಭಿಮಾನಿಗಳು
ಕನಕಪುರೆ ಬಂಡೆ ನೋಡಿ ಹೆಂಗಿದ್ರು ಅಭಿಮಾನಿಗಳು ಫುಲ್ ಫಿದಾ ಆಗಿ ಹೋಗ್ತಾರೆ. ಇದೇನಿದು ಕನಕಪುರ ಬಂಡೆಗ್ಯಾಕೆ ಜನ ಫಿದಾ ಆಗ್ತಾರೆ ಅಂತ ಅನುಮಾನ ಪಡಬೇಡಿ.
ಹೌದು.. ರಾಜಕೀಯದಲ್ಲಿ ಕನಕಪುರ ಬಂಡೆ ಅಂತಲೇ ಫೇಮಸ್ ಆಗಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರು ಹಿರೋ ನಂತೆ ಭಾರೀ ಸದ್ದು ಮಾಡ್ತಾಯಿದ್ದಾರೆ. ಅದ್ಯಾಕೆ ಗೊತ್ತಾ…? ನೀವು ಕೇಳಿದ್ರೆ ಬಹುಶ: ಆಶ್ಚರ್ಯ ಪಡ್ತಿರೇನೋ ಗೊತ್ತಿಲ್ಲಾ.
ಅಕ್ರಮ ಹಣ ವರ್ಗಾವಣೆಯ ಆರೋಪದಿಂದ ಜೈಲು ಸೇರಿದ್ದ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಬುಧವಾರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಈ ನಡುವೆ ಡಿಕೆಶಿಯ ಸ್ಟೈಲಿಶ್ ಗಡ್ಡಕ್ಕೆ ಅಭಿಮಾನಿಗಳು ಸಕತ್ ಫಿದಾ ಆಗಿದ್ದಾರೆ.
ಒಂದು ತಿಂಗಳಿಗೂ ಅಧಿಕ ಕಾಲ ಜಾರಿ ನಿರ್ದೇಶನಾಲಯ (ಇಡಿ) ಬಂಧನದ ಬಳಿಕ ತಿಹಾರ್ ಜೈಲುವಾಸದಲ್ಲಿದ್ದ ಡಿಕೆ ಜೈಲಿನಿಂದ ಹೊರ ಬಂದಿದ್ದು, ಅವರ ಮುಖಚಹರೆಯಲ್ಲಿ ಬದಲಾವಣೆ ಕಂಡು ಬಂದಿದೆ. ಜೈಲುವಾಸದ ನಂತರ ಡಿ.ಕೆ ಶಿವಕುಮಾರ್ ಅವರು ಗಡ್ಡ ಬಿಟ್ಟಿದ್ದು, ಈ ಟೈಗರ್ ಲುಕ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಡಿ.ಕೆ ಶಿವಕುಮಾರ್ ಅವರು ಇದೇ ಮೊದಲ ಬಾರಿಗೆ ಈ ರೀತಿಯಲ್ಲಿ ಗಡ್ಡ ಬಿಟ್ಟಿದ್ದಾರೆ. ಸದಾ ಶೇವ್ ಮಾಡಿಕೊಂಡು ಇರುತ್ತಿದ್ದ ಡಿಕೆಶಿ ಅವರನ್ನು ಈ ಹೊಸ ಲುಕ್ನಲ್ಲಿ ನೋಡಿದ ಅವರ ಅಭಿಮಾನಿಗಳು ಅಣ್ಣ ನಿಮಗೆ ಗಡ್ಡ ಚೆನ್ನಾಗಿ ಕಾಣುತ್ತದೆ, ಗಡ್ಡ ತೆಗೆಯಬೇಡಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.