ಸಂಸದರ ವೇತನದಲ್ಲಿ 30% ಕಟ್; 2 ವರ್ಷ ಪ್ರದೇಶಾಭಿವೃದ್ಧಿ ಬಂದ್‌: ಲೋಕಸಭೆ ಅನುಮೋದನೆ!

ಕೊರೊನಾ ಲಾಕ್‌ಡೌನ್‌ನಿಂದ ಕುಸಿತ ಕಂಡಿರುವ ಆರ್ಥಿಕತೆ ಮತ್ತು ಹಣಕಾಸಿನ ಬಿಕ್ಕಟ್ಟಿನಿಂದಾಗಿ ಸಂಸದರ ವೇತನವನ್ನು ಶೇ.30 ರಷ್ಟು  ಕಡಿತಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಸಂಸತ್‌ ಸದಸ್ಯರ ವೇತನ, ಭತ್ಯೆ ಮತ್ತು ಪಿಂಚಣಿ ತಿದ್ದುಪಡಿ ವಿಧೇಯವನ್ನು ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ವಿದೇಯಕಕ್ಕೆ ನಿನ್ನೆ (ಮಂಗಳವಾರ) ಅನುಮೋದನೆ ದೊರೆತಿದೆ.

ಕೇಂದ್ರ ಸರ್ಕಾರವು ಏಪ್ರಿಲ್‌ 06 ರಂದು ಮಂತ್ರಿಗಳ ವೇತನ ಮತ್ತು ಭತ್ಯೆ ತಿದ್ದುಪಡಿಗೆ 2020ರ ಸುಗ್ರೀವಾಜ್ಞೆ ಹೊರಡಿಸಿತ್ತು.  ಈ ವರ್ಷದ ಏಪ್ರಿಲ್.1ರಿಂದ ಪ್ರಾರಂಭದಿಂದ ಒಂದು ವರ್ಷದ ಅವಧಿಗೆ ಪ್ರತಿ ಸಚಿವರಿಗೆ ಪಾವತಿಸಬೇಕಾದ ಸಂಪೂರ್ಣ ಭತ್ಯೆಯಲ್ಲಿ ಶೇ.30ರಷ್ಟು ಕಡಿತಗೊಳಿಸಲಾಗುತ್ತದೆ ಎಂದು ಹೇಳಲಾಗಿತ್ತು. ಈಗ ಅದು ಕಾನೂನಾಗಿ ಜಾರಿಯಾಗಿದೆ.

ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯನ್ನೂ 2020 ರಿಂದ 2022 ರವರೆಗೆ ಎರಡು ವರ್ಷಗಳ ಕಾಲ ಸ್ಥಗಿತಗೊಳಿಸಲಾಗುವುದು.ಆ ಮೊತ್ತವನ್ನು ಸರ್ಕಾರದ ಏಕೀಕೃತ ನಿಧಿಗೆ ವರ್ಗಾಯಿಸಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.


ಇದನ್ನೂ ಓದಿ: ಸಂಕಷ್ಟದ ಕಾಲದಲ್ಲೂ ಲಾಭ ಮಾಡಿಕೊಳ್ಳುವುದೇ ಪಿಎಂ ಕೇರ್ಸ್‌: ರಾಹುಲ್‌ಗಾಂಧಿ

Spread the love

Leave a Reply

Your email address will not be published. Required fields are marked *