ಬರ, ಪ್ರವಾಹ, ಏರಿಳಿತದ ಬೆಲೆ: ಹಣಕ್ಕಾಗಿ ಗಾಂಜಾ ಬೆಳೆಯುತ್ತಿರುವ ರೈತರು! ದಾಖಲಾದ ಕೇಸ್‌ಗಳು ಎಷ್ಟು ಗೊತ್ತಾ?

ಬರ, ಪ್ರವಾಹ, ಬೆಳೆಗಳಿಗೆ ಬೆಂಬಲ ಬೆಲೆ ಸಿಗದೆ ಕಂಗಾಲಾಗಿರುವ ಹಲವಾರು ರೈತರು ಹಣ ಸಂಪಾದಿಸುವುದಕ್ಕಾಗಿ ಗಾಂಜಾ ಬೆಳೆಯಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಕೃಷಿ ಉತ್ಪನ್ನಗಳ ಬೆಳೆಗಳಲ್ಲಾಗುವ ಏರಿಳಿತಗಳು ಹಾಗೂ ಅತಿವೃಷ್ಠಿ-ಅನಾವೃಷ್ಟಿಗೆ ಒಳಗಾಗಿರುವ ರೈತರು, ಹಣ ಸಂಪಾದಿಸುವುದಕ್ಕಾಗಿ ಗಾಂಜಾ ಬೆಳೆಯುತ್ತಿದ್ದಾರೆ. ಕಳೆದ 1 ವರ್ಷದಲ್ಲಿ ರೈತರ ವಿರುದ್ಧ ರಾಜ್ಯದಲ್ಲಿ ಸುಮಾರು 100 ಕೇಸ್ ಗಳು ದಾಖಲಾಗಿವೆ. ತಲಾ 6 ಅಥವಾ 7 ಕೆಜಿ ತೂಕದ ಗಾಂಜಾ ನೀಡುವಂತಹ  1,060 ಗಾಂಜಾ ಗಿಡ ಸೀಜ್ ಮಾಡಲಾಗಿದೆ ಎಂದು ಅಬಕಾರಿ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿರುವುದಾಗಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಡ್ರಗ್ಸ್‌ ಪೆಡ್ಲರ್‌ಗಳು ರೈತರಿಗೆ ಗಾಂಜಾ ಬೀಜಗಳನ್ನು ಸರಬರಾಜು ಮಾಡಲಾಗುತ್ತಿದೆ. ಅಲ್ಲದೆ, ಕೆಲವರು ರೈತರಿಂದ ಭೂಮಿಯನ್ನು ಲೀಸ್‌ಗೆ ಪಡೆದು, ಆ ಭೂಮಿಯಲ್ಲಿ ಗಾಂಜಾ ಬೆಳೆ ಬೆಳೆಯುತ್ತಿರುವುದಾಗಿ ಗಾಂಜಾವನ್ನು ಸೀಜ್‌ ಮಾಡಿದ ಸಂದರ್ಭದಲ್ಲಿ ತಿಳಿದು ಬಂದಿರುವುದಾಗಿ ಹೇಳಲಾಗಿದ್ದು, ಭೂಮಿಯನ್ನು ಲೀಜ್‌ಗೆ ಕೊಟ್ಟ ಭೂಮಾಲೀಕರ ವಿರುದ್ಧವೂ ಕೇಸ್‌ ದಾಖಲಿಸಲಾಗಿದೆ.

ಹಾಗಾಗಿ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಿಗೆ ತಮ್ಮ ಭೂಮಿಯನ್ನು ಬಳಸಲು ಅನುಮತಿಸದಂತೆ ರೈತರನ್ನು ಜಾಗೃತಗೊಳಿಸಲು ಕೃಷಿ ಇಲಾಖೆ ಈಗ ಕ್ರಮ ಕೈಗೊಳ್ಳುತ್ತಿದೆ ಎನ್ನಲಾಗಿದೆ.

ಗಾಂಜಾ ಬೆಳೆ ಬೆಳೆಯುವ ಅಪರಾಧದ ಬಗ್ಗೆ ಅರಿವು ಮೂಡಿಸುವ ಕುರಿತು ಕೃಷಿ ಇಲಾಖೆಯ ಎಲ್ಲಾ ಜಂಟಿ ನಿರ್ದೇಶಕರಿಗೂ ಸುತ್ತೋಲೆ ಕಳುಹಿಸಲಾಗಿದೆ. ರೈತರು ಕಷ್ಟ ಪಟ್ಟು ದುಡಿಯುತ್ತಾರೆ. ಆದರೆ, ಕೆಲವರು ಅವರಿಂದ ಭೂಮಿಯನ್ನು ಪಡೆದು. ಇಂತಹವುಗಳಿಗಾಗಿ ಬಳಸಿಕೊಳ್ಳುತ್ತಿದ್ದಾರೆ. ಹಾಗಾಗಿ ರೈತರಿಗೆ ಅರಿವು ಮೂಡಿಸಲು ಸೂಚಿಸಲಾಗಿದೆ ಎಂದು  ಕೃಷಿ ಸಚಿವ ಬಿಸಿ ಪಾಟೀಲ್ ಹೇಳಿದ್ದಾರೆ.


ಇದನ್ನೂ ಓದಿ: fact Check: ಹೆಣ್ಣು ಮಕ್ಕಳಿಗೆ ತಿಂಗಳಿಗೆ 2,000 ಕೊಡುವ ಪ್ರಧಾನಿಮಂತ್ರಿ ಯೋಜನೆ ಸುಳ್ಳು

Spread the love

Leave a Reply

Your email address will not be published. Required fields are marked *