ಫ್ಯಾಕ್ಟ್‌ಚೆಕ್ : ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಅವರಿಗೆ ಶೃಂಗೇರಿ ಶ್ರೀಗಳು ಆಶೀರ್ವಾದ ನೀಡಲು ನಿರಾಕರಿಸಿದರೆ?

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ  ಶೃಂಗೇರಿ ಮಠಕ್ಕೆ ಭೇಟಿ ನೀಡಿದ ವೇಳೆ ‘ಶ್ರೀ ಶೃಂಗೇರಿ ಶಾರದಾ ಪೀಠ’ದ ಶ್ರೀಗಳ ಬಳಿ ಆಶಿರ್ವಾದ ಪಡೆಯಲು ಮುಂದಾದಾಗ ‘ಶ್ರೀ ಶೃಂಗೇರಿ ಶಾರದಾ ಪೀಠ’ದ ಶ್ರೀಗಳು ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಅವರ ಹಿಂದೂ ವಿರೋಧಿ ನಿಲುವುಗಳ ಕಾರಣಕ್ಕಾಗಿ ಆಶೀರ್ವಾದ ನೀಡಲು ನಿರಾಕರಿಸಿದ್ದಾರೆ ಎಂಬ ಪೋಸ್ಟ್‌ವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಶೃಂಗೇರಿ ಪೀಠದ ಶ್ರೀ ಶ್ರೀ ಶ್ರೀ ಜಗದ್ಗುರು ಶಂಕರಾಚಾರ್ಯರು ರಾಹುಲ್ ಮತ್ತು ಸಿದ್ದರಾಮಯ್ಯ (ಕರ್ನಾಟಕ ಸಿಎಂ) ಆಶೀರ್ವಾದ ಮಾಡಲು ನಿರಾಕರಿಸಿದರು.

ಜಗದ್ಗುರುಗಳು ಅವರಿಗೆ ಹೇಳಿದರು “ನೀವು ಮಠಕ್ಕೆ ಬಂದಿದ್ದೀರಿ, ಧನ್ಯವಾದಗಳು. ಆದರೆ, ನೀವು ಏನು ಮಾಡುತ್ತಿದ್ದೀರಿ ಎಂದು ನಿಮಗೆ ತಿಳಿದಿಲ್ಲ, ನಾವು ನಿಮ್ಮನ್ನು ಆಶೀರ್ವದಿಸಲು ಸಾಧ್ಯವಿಲ್ಲ” ಎಂದಿದ್ದಾರೆ ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಸಭೆಯಲ್ಲಿ ಜಗದ್ಗುರುಗಳು ರಾಹುಲ್ ಮತ್ತು ಸಿದ್ದರಾಮಯ್ಯ ಅವರಿಗೆ ಹಿಂದೂ ಧರ್ಮದ ಬಗ್ಗೆ ಅಸಹಿಷ್ಣುತೆ ಇದ್ದರೆ, ನಿಮ್ಮ ಕಾರ್ಯಗಳಿಂದ ಹಿಂದೂ ಧರ್ಮದಲ್ಲಿ ಅಸಂಗತತೆಯನ್ನು ಉಂಟುಮಾಡುವ ಬದಲು ದಯವಿಟ್ಟು ಹಿಂದೂ ಧರ್ಮದಿಂದ ದೂರವಿರಿ ಎಂದು ಹೇಳಿದರು.  ಹಿಂದೂ ಮಠ, ಮಂದಿರಗಳ ನಿರ್ವಹಣೆಯನ್ನು ಸರಕಾರ ವಹಿಸಿಕೊಂಡಿದೆ.  ಅಷ್ಟೇ ಅಲ್ಲ ಹುಂಡಿಯ ರೂಪದಲ್ಲಿ ಬರುವ ಹಣ ದೇವಸ್ಥಾನಗಳ ಪುನರ್ ನಿರ್ಮಾಣಕ್ಕೆ ಬಳಕೆಯಾಗುತ್ತಿಲ್ಲ, ಅದೇ ಹಣವನ್ನು ಅನ್ಯ ಧರ್ಮದವರ ಕಲ್ಯಾಣಕ್ಕೆ ವಿನಿಯೋಗಿಸುತ್ತಿರುವುದು ಒಪ್ಪತಕ್ಕದ್ದಲ್ಲ. ನೀವು ನಮ್ಮ ಮಠಕ್ಕೆ ಬರುವುದು ಒಳ್ಳೆಯದು. ಆದರೆ ನೀವು ಹಿಂದೂ ವಿರೋಧಿ ಚಟುವಟಿಕೆಗಳನ್ನು ಮಾಡುತ್ತಿರುವ ರೀತಿಗೆ ನಾವು ನಿಮಗೆ ಆಶೀರ್ವಾದ ನೀಡಲು ಸಾಧ್ಯವಿಲ್ಲ.  ಜಗದ್ಗುರುಗಳು ಇಬ್ಬರಿಗೂ ನೇರವಾಗಿ ಹೇಳಿದರು.

ರಾಜಕಾರಣಿಗಳಾದ ರಾಹುಲ್ ಮತ್ತು ಸಿದ್ದರಾಮಯ್ಯ ಇಬ್ಬರೂ ಜಗದ್ಗುರುಗಳಿಂದ ಇಂತಹ ತೀಕ್ಷ್ಣವಾದ ಹೇಳಿಕೆಗಳನ್ನು ನಿರೀಕ್ಷಿಸಿರಲಿಲ್ಲ.  ಇಬ್ಬರೂ ತುಂಬಾ ತಡಬಡಾಯಿಸಿ ಸಭೆಯಿಂದ ಹೊರಬಂದ ನಂತರ ಜಗದ್ಗುರುಗಳ ಪ್ರತಿಕ್ರಿಯೆ ಮಾಧ್ಯಮಗಳಿಗೆ ಬರದಂತೆ ತಡೆಯುವುದು ಹೇಗೆ ಎಂಬ ಚರ್ಚೆ ಶುರುವಾಯಿತು.  ಮಠಕ್ಕೆ ಸಂಬಂಧಿಸಿದ ಎಲ್ಲಾ ಭಕ್ತರು ಮತ್ತು ಸಿಬ್ಬಂದಿಗಳು ಜಗದ್ಗುರುಗಳ ಪ್ರತಿಕ್ರಿಯೆಯನ್ನು ಕೇಳಿ ಸಂತೋಷಪಟ್ಟರು ಮತ್ತು ವಿಳಂಬವಿಲ್ಲದೆ ಪ್ರತಿ ಹಂತದಲ್ಲೂ ಹಂಚಿಕೊಂಡರು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ವೈರಲ್ ಪೋಸ್ಟ್‌ನಲ್ಲಿ  ಹೇಳಿರುವಂತೆ ಶೃಂಗೇರಿ ಮಠದ ಶ್ರೀಗಳು ರಾಹುಲ್ ಮತ್ತು ಸಿದ್ದರಾಮಯ್ಯವರಿಗೆ ಆಶಿರ್ವಾದ ನೀಡಲು ನಿಜಯಾಗಿಯೂ ನಿರಾಕರಿಸಿದ್ದರಾ? ಈ ಪೋಸ್ಟ್‌ನಲ್ಲಿ ಮಾಡಿರುವ ಪ್ರತಿಪಾದನೆಯ ಸತ್ಯಾಸತ್ಯತೆಗಳನ್ನು ಫ್ಯಾಕ್ಟ್‌ಚೆಕ್ ಮೂಲಕ ಪರಿಶೀಲಿಸೋಣ.

 

ಫ್ಯಾಕ್ಟ್‌ಚೆಕ್:

ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಅವರ ಕುರಿತಾದ ಪೋಸ್ಟ್‌ ಗೆ ಸಂಬಂಧಿಸಿದ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಪರಿಶೀಲನೆ ಮಾಡಿದಾಗ ಒಂದೇ ರೀತಿಯ ಫೋಟೋಗಳೊಂದಿಗೆ ಅನೇಕ ಸುದ್ದಿ ಲೇಖನಗಳು ಕಂಡುಬಂದಿವೆ. ಮಾರ್ಚ್ 2018 ರಲ್ಲಿ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಇಬ್ಬರೂ ಇತರ ನಾಯಕರೊಂದಿಗೆ ಶೃಂಗೇರಿ ಮಠಕ್ಕೆ ಭೇಟಿ ನೀಡಿದಾಗ ತೆಗೆದ ಫೋಟೋ ಎಂದು ಉಲ್ಲೇಖಿಸಲಾಗಿದೆ. ‘ಕರ್ನಾಟಕ ಕಾಂಗ್ರೆಸ್’ ತನ್ನ ಟ್ವಿಟರ್‌ ಅಕೌಂಟ್ ನಿಂದ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಅವರು ಮಠಕ್ಕೆ ಭೇಟಿ ನೀಡಿದ ಫೋಟೋಗಳನ್ನು ಟ್ವೀಟ್ ಮಾಡಿದೆ. ‘ಕರ್ನಾಟಕ ಕಾಂಗ್ರೆಸ್’ ಮಾಡಿರುವ ಟ್ವೀಟ್‌ನಲ್ಲಿ ನಾಯಕರು ಶ್ರೀಗಳ ಆಶೀರ್ವಾದ ಪಡೆದಿರುವುದನ್ನು ಗಮನಿಸಬಹುದು.

ಪ್ರತ್ಯೇಕ ಭೇಟಿರಾಹುಲ್ 15 ನಿಮಿಷ ಮಾತುಕತೆರಾಹುಲ್ ಮಾತುಕತೆ

2018 ರಲ್ಲಿ ’ಕರ್ನಾಟಕ ಕಾಂಗ್ರೆಸ್’ ತನ್ನ ಟ್ವಿಟರ್‌ ಅಕೌಂಟ್ ನಿಂದ ಮಾಡಿರುವ ಟ್ವೀಟ್

ವೈರಲ್ ಪೋಸ್ಟ್‌ನಲ್ಲಿ ಹೇಳಿರುವಂತೆ  ’ಶ್ರೀ ಶೃಂಗೇರಿ ಶಾರದಾ ಪೀಠ’ದ ಶ್ರೀಗಳು ಆಶೀರ್ವಾದ ನನೀಡಲು ನಿರಾಕರಿಸಿದ್ದಾರೆ ಎಂದು ಯಾವುದೇ ಪ್ರತಿಷ್ಠಿತ ಸುದ್ದಿ ಸಂಸ್ಥೆ ವರದಿ ಮಾಡಿಲ್ಲ.  ವರದಿಗಳಲ್ಲಿ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಅವರು ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶ್ರೀಗಳ ಆಶೀರ್ವಾದ ಪಡೆದರು ಎಂದು ವರದಿ ಮಾಡಿದ್ದಾರೆ. ಅವುಗಳಲ್ಲಿ ಕೆಲವು ಸುದ್ದಿ ಲೇಖನಗಳನ್ನು ಇಲ್ಲಿ ಮತ್ತು ಇಲ್ಲಿ ಓದಬಹುದು.

ಅಲ್ಲದೆ, ಮಠಾಧೀಶರು ರಾಹುಲ್ ಗಾಂಧಿಯವರಿಗೆ ಅವರ ತಂದೆ ರಾಜೀವ್ ಗಾಂಧಿ (ರಾಜೀವ್ ಗಾಂಧಿಯವರು ಮಠಕ್ಕೆ ಭೇಟಿ ನೀಡಿದಾಗ ತೆಗೆದ ಫೋಟೋ) ಅವರ ಭಾವಚಿತ್ರವನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ವರದಿಯಾಗಿದೆ.

ಮಠಾಧೀಶರು ಮತ್ತು ರಾಹುಲ್ ಗಾಂಧಿ ನಡುವಿನ ಸಂಭಾಷಣೆಯ ಕುರಿತು ಹಲವಾರು ಪ್ರತಿಷ್ಠಿತ ಸುದ್ದಿ ಸಂಸ್ಥೆಗಳು ಲೇಖನಗಳನ್ನು ಪ್ರಕಟಿಸಿವೆ, ಅದನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ಓದಬಹುದು. ಆ ಯಾವ ವರದಿಗಳಲ್ಲೂ ಶ್ರೀಗಳು ಆಶಿರ್ವಾದ ನೀಡಲು ನಿರಾಕರಿಸಿದರು ಎಂಬ ವರದಿಗಳಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, 2018ರಲ್ಲಿ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಭೇಟಿ ನೀಡಿ ಶ್ರೀಗಳಿಂದ ಆಶೀರ್ವಾದ ಪಡೆದಿದ್ದಾರೆ ಇದನ್ನೆ ಹಲವು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಆದರೆ ಕೆಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು 2018 ಫೋಟೋಗಳನ್ನು ಬಳಸಿಕೊಂಡು ಇತ್ತೀಚೆಗೆ ನಡೆದ ಘಟನೆ ಎಂಬಂತೆ ಮತ್ತು ಶೃಂಗೇರಿ ಶ್ರೀಗಳು ಇಬ್ಬರಿಗೂ ಆಶೀರ್ವಾದ ನೀಡಲು ನಿರಾಕರಿಸಿದ್ದಾರೆ ಎಂಬ ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: Fact ಫ್ಯಾಕ್ಟ್‌ಚೆಕ್ : ಕರ್ನಾಟಕ ಸಾರಿಗೆಯ ಬಸ್ಸಿನ ಮೇಲೆ ಮುಸ್ಲಿಮರು ಕಲ್ಲೂ ತೂರಾಟ ನಡೆಸಿದರೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights