ಸಂಕಷ್ಟದ ಕಾಲದಲ್ಲೂ ಲಾಭ ಮಾಡಿಕೊಳ್ಳುವುದೇ ಪಿಎಂ ಕೇರ್ಸ್‌: ರಾಹುಲ್‌ಗಾಂಧಿ

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ನೀಡಿದ್ದ ಎಲ್ಲಾ ಭರವಸೆಗಳನ್ನು ಹುಸಿಯಾಗಿಸಿದೆ. ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲೂ ಪಿಎಂ ಕೇರ್ಸ್‌ ಫಂಡ್‌ ತೆರೆದು ಲಾಭ ಮಾಡಿಕೊಳ್ಳಲು ಮುಂದಾಗಿದೆ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ಗಾಂಧಿ ಆರೋಪಿಸಿದ್ದಾರೆ.

“21 ದಿನಗಳಲ್ಲಿ ಕೊರೊನಾವನ್ನು ನಿರ್ನಾಮ ಮಾಡುತ್ತೇವೆ ಎಂದು ಗಾಳಿಯಲ್ಲಿ ಕೋಟೆಗಳನ್ನು ಕಟ್ಟುವ ಮಾತನಾಡಿದ್ದರು. ಜನರ ರಕ್ಷಣೆಗಾಗಿ ಆರೋಗ್ಯ ಸೇತು ಅಪ್ಲಿಕೇಶನ್, 20 ಲಕ್ಷ ಕೋಟಿ ಪ್ಯಾಕೇಜ್, ಯಾರೂ ನಮ್ಮ ಗಡಿಗಳನ್ನು ಅತಿಕ್ರಮಿಸಿಲ್ಲ, ಪರಿಸ್ಥಿತಿ ನಿಯಂತ್ರಣದಲ್ಲಿದೆ….” ಎಂದು ಸುಳ್ಳುಗಳ ಸರಮಾಲೆ ಕಟ್ಟಿ, ಜನರನ್ನು ಯಾಮಾರಿಸಿದ್ದಾರೆ ಎಂದು ಟ್ವೀಟ್ ಮಾಡಿರುವ ರಾಹುಲ್‌ಗಾಂಧಿ, ಕೇಂದ್ರ ಸರ್ಕಾರ ವಿರುದ್ಧ ಹರಿಹಾಯ್ದಿದ್ದಾರೆ.

“ಒಂದು ಸತ್ಯವೂ ಇದೆ: ‘ಆಪ್ಡಾ ಮಿ ಅವ್ಸರ್’ (ವಿಪತ್ತಿನಲ್ಲಿ ಅವಕಾಶ) ಪಿಎಂ ಕೇರ್ಸ್” ಎಂದು ಹೇಳಿರುವ ರಾಹುಲ್‌ಗಾಂಧಿ ಪಿಎಂ ಕೇರ್ಸ್‌ನಿಂದ ಬಿಜೆಪಿ ಲಾಭ ಮಾಡಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.

ಕೊರೊನಾ ನಿಯಂತ್ರಣಕ್ಕಾಗಿಯೇ ಪ್ರಧಾನಮಂತ್ರಿಗಳ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಪರಿಹಾರ (PM CARES) ನಿಧಿಯನ್ನು ಮಾರ್ಚ್ 2020 ರಲ್ಲಿ ಕೇಂದ್ರ ಸರ್ಕಾರ ಆರಂಭಿಸಿದೆ. ಆದರೆ, ಇದೂವರೆಗೂ ಪಿಎಂ ಕೇರ್ಸ್‌ಗೆ ಎಷ್ಟು ಧನಸಹಾಯ ಬಂದಿದೆ. ಯಾರು ಯಾರು ಸಹಾಯ ನೀಡಿದ್ದಾರೆ. ಆ ಹಣವನ್ನು ಎಲ್ಲಿ ಬಳಸಲಾಗಿದೆ ಎಂಬುದರ ಬಗ್ಗೆ ಸರ್ಕಾರ ಮಾಹಿತಿಬಿಡುಗಡೆ ಮಾಡಿಲ್ಲ.

ಮಾಹಿತಿ ಕೇಳಿ ಆರ್‌ಟಿಐ ಸಲ್ಲಿಸಲಾಗಿತ್ತಾದರೂ, ಪಿಎಂ ಕೇರ್ಸ್‌ ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಬರುವುದಿಲ್ಲ ಎಂದು  ಪ್ರಧಾನಮಂತ್ರಿ ಸಚಿವಾಲಯವು ಅರ್ಜಿಯನ್ನು ತಿರಸ್ಕರಿಸಿದೆ.


ಇದನ್ನೂ ಓದಿ: ನೀವು ಲೆಕ್ಕ ಹಾಕಿಲ್ಲವೆಂದರೆ ಯಾವು ಸಾವನ್ನಪ್ಪಿಲ್ಲವೇ? ಕೇಂದ್ರದ ವಿರುದ್ಧ ರಾಹುಲ್‌ಗಾಂಧಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights