ಗುಡ್ ನ್ಯೂಸ್ : ಜನವರಿ 1 ರಿಂದ ರಾತ್ರಿ 12 ರವರೆಗೆ ನಮ್ಮ ಮೆಟ್ರೋ ಲಭ್ಯ…

ಸಿಲಿಕಾನ್ ಸಿಟಿಯ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಬಿ.ಎಂ.ಆರ್.ಸಿ.ಎಸ್ ಮೆಟ್ರೋ ರೈಲು ಸೇವೆಯನ್ನು ಮಧ್ಯರಾತ್ರಿವರೆಗೂ ವಿಸ್ತರಿಸುವುದಾಗಿ ಘೋಷಿಸಿದ್ದು, ಪ್ರಯಾಣಿಕರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ. ಜನವರಿ 1 ರಿಂದ ರಾತ್ರಿ 12 ರವರೆಗೂ ರೈಲುಸೇವೆ ಲಭ್ಯವಾಗಲಿದೆ.

ಈ ಕುರಿತು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್‌ ಮಾಹಿತಿ ನೀಡಿದ್ದು, ಪ್ರಯಾಣಿಕರ ಬಹುದಿನಗಳ ಬೇಡಿಕೆಯನ್ನು ಆಧರಿಸಿ ಮೆಟ್ರೋ ಸಾರಿಗೆ ಸೇವೆಯನ್ನು ವಿಸ್ತರಿಸಲಾಗಿದೆ . ಪ್ರಸ್ತುತ ರಾತ್ರಿ 11 ಗಂಟೆವರೆಗೆ ಮಾತ್ರ ಮೆಟ್ರೋ ಸಾರಿಗೆ ಸೇವೆ ಲಭ್ಯವಿದೆ. ಜನವರಿ 1 ರಿಂದ ರಾತ್ರಿ 12 ರವರೆಗೂ ರೈಲುಸೇವೆ ಅವಧಿ ವಿಸ್ತರಿಸಲಾಗುವುದು ಎಂದರು. ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ ಯಲಚೇನಹಳ್ಳಿ, ನಾಗಸಂದ್ರ, ಬಯ್ಯಪ್ಪನಹಳ್ಳಿ, ಮೈಸೂರು ರಸ್ತೆ ಮಾರ್ಗವಾಗಿ ರಾತ್ರಿ 12 ಗಂಟೆಗೆ ಆ ದಿನದ ಕೊನೇ ಮೆಟ್ರೋ ರೈಲು ಹೊರಡಲಿದೆ ಎಂದು ಹೇಳಿದರು.

ಇನ್ನು ಪ್ರಸ್ತುತ ಬೆಳಗ್ಗೆ 5 ಗಂಟೆ ದಿನದ ಮೊದಲ ಮೆಟ್ರೋ ರೈಲು ಆರಂಭವಾಗುತ್ತದೆ. ಬೆಳಗ್ಗೆ 5ರಿಂದ 8 ಗಂಟೆವರೆಗೆ ಹಾಗೂ ರಾತ್ರಿ 9ರಿಂದ 12 ಗಂಟೆವರೆಗೂ ಪ್ರತಿ 15 ನಿಮಿಷಕ್ಕೆ ಒಂದರಂತೆ ಮೆಟ್ರೋ ರೈಲುಗಳಿವೆ. ಉಳಿದ ಅವಧಿಯಲ್ಲಿ ಪ್ರತಿ 10 ನಿಮಿಷಕ್ಕೆ ಒಂದರಂತೆ ಮೆಟ್ರೋ ರೈಲುಗಳಿವೆ. 2020ರ ಡಿಸೆಂಬರ್‌ನಿಂದ ಗ್ರೀನ್‌ಲೈನ್‌ ಮಾರ್ಗದಲ್ಲೂ 6 ಕೋಚ್‌ ರೈಲುಗಳ ಸಂಖ್ಯೆ ಹೆಚ್ಚಿಸಲಾಗುವುದು ಎಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದರು…

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights