ನೀವು ಲೆಕ್ಕ ಹಾಕಿಲ್ಲವೆಂದರೆ ಯಾರು ಸಾವನ್ನಪ್ಪಿಲ್ಲವೇ? ಕೇಂದ್ರದ ವಿರುದ್ಧ ರಾಹುಲ್‌ಗಾಂಧಿ

ಕೊರೊನಾ ವೈರಸ್‌ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಹೇರಿದ ಅನಿಯೋಜಿತ ಲಾಕ್‌ಡೌನ್‌ನಿಂದಾಗಿ ವಲಸೆ ಕಾರ್ಮಿಕರು ದಾರಿ ಮಧ್ಯೆಯೇ ಪ್ರಾಣ ಬಿಟ್ಟಿದ್ದಾರೆ. ಅದರೆ, ನಿನ್ನೆ ನಡೆದ ಅಧಿವೇಶನದಲ್ಲಿ ವಲಸೆ ಕಾರ್ಮಿಕರ ಬಗೆಗಿನ ಚರ್ಚೆಯಲ್ಲಿ ಪ್ರತಿಕ್ರಿಯಿಸಿರುವ ಕಾರ್ಮಿಕ ಇಲಾಖೆ “ಲಾಕ್‌ಡೌನ್‌ ಸಮಯದಲ್ಲಿ ತಮ್ಮೂರು ತಲುಪಲು ಹೊರಟು ದಾರಿಮಧ್ಯೆ ಪ್ರಾಣಬಿಟ್ಟ ವಲಸೆ ಕಾರ್ಮಿಕರ ಮಾಹಿತಿ ನಮ್ಮಲ್ಲಿ ಇಲ್ಲ, ಹಾಗಾಗಿ ಪರಿಹಾರದ ಪ್ರಶ್ನೆಯೇ ಬರುವುದಿಲ್ಲ” ಎಂದು ಹೇಳಿದೆ. ಕೇಂದ್ರದ ನಿರ್ಲಕ್ಷದ ಮಾತನ್ನು ರಾಹುಲ್‌ಗಾಂಧಿ ವಿರೋಧಿಸಿದ್ದು, ನೀವು ಲೆಕ್ಕ ಹಾಕಿಲ್ಲದಿದ್ದರಿಂದ ಯಾರು ಮೃತಪಟ್ಟಿಲ್ಲವೆ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಭೀಕರ ರಸ್ತೆ ಅಪಘಾತ : 24 ಜನ ವಲಸೆ ಕಾರ್ಮಿಕರು ಸಾವು – 13ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ

“ಲಾಕ್‌ಡೌನ್ ಸಮಯದಲ್ಲಿ ಎಷ್ಟು ಜನ ವಲಸೆ ಕಾರ್ಮಿಕರು ಮೃತಪಟ್ಟರು, ಎಷ್ಟು ಜನ ಉದ್ಯೋಗ ಕಳೆದುಕೊಂಡರು ಎಂಬುದು ಮೋದಿ ಸರ್ಕಾರಕ್ಕೆ ತಿಳಿದಿಲ್ಲ. ನೀವು ಲೆಕ್ಕ ಹಾಕಿಲ್ಲದಿದ್ದರಿಂದ ಯಾರು ಮೃತಪಟ್ಟಿಲ್ಲವೆ? ಅವರು ಸಾಯುತ್ತಿರುವುದನ್ನು ಇಡೀ ಪ್ರಪಂಚವೇ ನೋಡಿದೆ. ಆದರೆ ಮೋದಿ ಸರ್ಕಾರಕ್ಕೆ ಮಾತ್ರ ಅದರ ಬಗ್ಗೆ ತಿಳಿದಿರಲಿಲ್ಲ. ಜನರ ಜೀವಗಳ ಬಗ್ಗೆ ಈ ಸರ್ಕಾರ ಕಾಳಜಿ ವಹಿಸದಿರುವುದು ದುಃಖದ ವಿಷಯ” ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿನ ವಲಸೆ ಬಿಕ್ಕಟ್ಟಿಗೆ ಮೋದಿ ಸರ್ಕಾರ ಕಾರಣ: 06 ಅಂಶಗಳಿಂದ ಸಾಬೀತು

ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್ 24ರ ರಾತ್ರಿ ಕೇವಲ ನಾಲ್ಕು ಗಂಟೆಗಳ ಸಮಯ ನೀಡಿ ಏಕಾಏಕಿ ಲಾಕ್‌ಡೌನ್ ವಿಧಿಸಿದ್ದರು. ಉದ್ಯೋಗವೂ ಇಲ್ಲದೆ, ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲದಿದ್ದರೂ ಲಕ್ಷಾಂತರ ವಲಸೆ ಕಾರ್ಮಿಕರು ಮಹಾನಗರಗಳಿಂದ ತಮ್ಮ ಸ್ವಂತ ಊರುಗಳಿಗೆ ಉರಿವ ಬಿಸಿಲಿನ ನಡುವೆ ಕಾಲ್ನಡಿಗೆಯಲ್ಲಿ ಹೊರಟಿದ್ದರು. ಈ ವೇಳೆ ಊಟ-ನೀರು ಸಿಗದೇ ಸಾವಿರಾರು ಜನ ಮೃತಪಟ್ಟಿದ್ದನ್ನು ಮಾಧ್ಯಮಗಳು ವರದಿ ಮಾಡಿದ್ದವು.

ಇದನ್ನೂ ಓದಿ: ಔರಂಗಾಬಾದ್‌ನ ರೈಲ್ವೆ ಟ್ರಾಕ್ ಮೇಲೆ ಮಲಗಿದ್ದ 15 ವಲಸೆ ಕಾರ್ಮಿಕರ ಮೇಲೆ ಹರಿದ‌ ರೈಲು!

ಈ ಕುರಿತು ಸಂಸತ್ ಸದಸ್ಯರೊಬ್ಬರು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ “ಕೊರೊನಾ ಲಾಕ್‌ಡೌನ್ ವೇಳೆ ದೇಶದ ಹೆದ್ದಾರಿಗಳಲ್ಲಿ ರಕ್ತ ಸುರಿಸುತ್ತಾ ತಮ್ಮ ಮನೆಗೆ ಹೊರಟವರಲ್ಲಿ, ಮೃತಪಟ್ಟ ವಲಸಿಗರ ಕುರಿತು ತನ್ನ ಬಳಿ ಯಾವುದೇ ಮಾಹಿತಿ ಇಲ್ಲ. ಆದ್ದರಿಂದ ಮೃತಪಟ್ಟ ಕುಟುಂಬಕ್ಕೆ ಪರಿಹಾರ ಒದಗಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ತಿಳಿಸಿದೆ.

ಈ ಕುರಿತು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದು ಕೊಂಡಿರುವ ರಾಹುಲ್ ಗಾಂಧಿ “ಕೊರೊನಾ ನಿರ್ವಹಣೆಯಲ್ಲಿ ಮೋದಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ವಲಸೆ ಕಾರ್ಮಿಕರನ್ನು ಕೀಳಾಗಿ ನಡೆಸಿಕೊಂಡಿದೆ” ಎಂದು ಟೀಕಿಸಿದ್ದಾರೆ.


ಇದನ್ನೂ ಓದಿ: ಮೋದಿ ಘೋಷಿಸಿದ, ವಲಸೆ ಕಾರ್ಮಿಕರಿಗೆ ಕೊಟ್ಟ ಪ್ಯಾಕೇಜಿನಲ್ಲಿರುವ ಸೊನ್ನೆಗಳೆಷ್ಟು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights