ಫ್ಯಾಕ್ಟ್‌ಚೆಕ್: ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಭೀಫ್ ತಿಂದಿದ್ದು ನಿಜವೇ?

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ 13 ದಿನಗಳನ್ನು ಪೂರೈಸಿ 14 ನೇ ದಿನಕ್ಕೆ ಕಾಲಿಟ್ಟಿದೆ. ಕೇರಳದಲ್ಲಿ ಯಾತ್ರೆ ಮುಂದುವರೆದಿದ್ದು, ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಭೀಫ್ ಸೇವಿಸುತ್ತಿದ್ದಾರೆ ಎಂದು ಹೇಳಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೋವನ್ನು ಹಂಚಿಕೊಳ್ಳಲಾಗಿದೆ.

ವೈರಲ್ ಫೋಟೋದ ಪೋಸ್ಟ್‌ ಮಲೆಯಾಳಂನ ಶೀರ್ಷಿಕೆಯನ್ನು ಹೊಂದಿದ್ದು ಅದನ್ನು ಅನುವಾದಿಸಲಾಗಿದೆ “ರಾಹುಲ್ ಬೀಫ್ ತಿಂದರೆ ಏನು ಸಮಸ್ಯೆ?  ಕೇರಳದ ಅಬ್ಬರದ ಕಾಂಗ್ರೆಸ್ಸಿಗರು ಕರುವನ್ನು ಕೊಂದು ಮಾದರಿಯಾಗಿದ್ದಾರೆ. ಇದು ಬೀಫ್ ಫೆಸ್ಟ್ ನಡೆಸಿದ ಕಮ್ಯುನಿಸ್ಟರ ಕೇರಳ. ಗೋಮಾಂಸ ಹೇಗಿದೆ ?  ಅತ್ಯುತ್ತಮ, ಸೂಪರ್ ಆಗಿದೆಯೇ? ಇದನ್ನು ಸಹೋದರ ರಾಹುಲ್ (ಚೆಟ್ಟನ್) ಹೇಳಲಿ ” ಎಂದು ಮಲೆಯಾಳಂನಲ್ಲಿ ಬರೆದು ಫೋಸ್ಟ್‌ ಮಾಡಿದ್ದಾರೆ.

ವೈರಲ್ ಆಗಿರುವ ಫೋಟೋದಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ನಾಯಕರಾದ ಕೋಡಿಕುನ್ನಿಲ್ ಸುರೇಶ್ ಮತ್ತು ಕೆಸಿ ವೇಣುಗೋಪಾಲ್ ಜೊತೆಯಲ್ಲಿದ್ದಾರೆ. ಇಲ್ಲಿ ರಾಹುಲ್ ಗಾಂಧಿ ಚೇರ್ ಮೇಲೆ ಕುಳಿತು ಏನನ್ನೂ ಕುಡಿಯುತ್ತಿರುವುದನ್ನು ಕಾಣಬಹುದು. ಇದರ ಜೊತೆಗೆ ಫೋಟೋದಲ್ಲಿ ಕೇರಳ ಪೊರೋಟಾದ ಪ್ಲೇಟ್, ಬಿಸ್ಕತ್ತುಗಳು ಮತ್ತು ಹಲವಾರು ಪೇಪರ್ ಗ್ಲಾಸ್‌ಗಳು ಮತ್ತು ನೀರಿನ ಬಾಟಲಿಯೊಂದಿಗೆ ಮಾಂಸ ಇರುವ ಪ್ಲೇಟ್‌ ಅನ್ನು ನೋಡಬಹುದಾಗಿದೆ.

ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ರಾಹುಲ್ ಗಾಂಧಿ ಗೋಮಾಂಸ ಸೇವಿಸಿದ್ದಾರೆ ಎನ್ನಲಾದ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಸೆಪ್ಟೆಂಬರ್ 17, 2022 ರಂದು ಮನೋರಮಾ ಲೇಖನದಲ್ಲಿ ಪ್ರಕಟವಾದ ಮೂಲ ಫೋಟೋ ಲಭ್ಯವಾಗಿದೆ.

ಮನೋರಮಾ ಲೇಖನದ ಪ್ರಕಾರ “ರಾಹುಲ್ ಗಾಂಧಿ ವಲ್ಲಿಕೆಝುನಲ್ಲಿ ಚಹಾ ಅಂಗಡಿಗೆ ಪ್ರವೇಶಿಸಿದಾಗ.. ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ಕೋಡಿಕುನ್ವಿಲ್ ಸುರೇಶ್ ಎಂಪಿ, ಸಂಸದ, ಕೆಸಿ ವೇಣುಗೋಪಾಲ್  ಮತ್ತು ವಿರೋಧ ಪಕ್ಷದ ನಾಯಕ ವಿಡಿ ಸತೀಶನ್ ಜೊತೆಯಾಗಿದ್ದಾರೆ ಎಂದು ವರದಿ ಮಾಡಿದೆ.

ಮೂಲ ಫೋಟೋದಲ್ಲಿ ರಾಹುಲ್ ಗಾಂಧಿ ಮುಂದಿರುವ ಟೇಬಲಲ್‌ನಲ್ಲಿ ಗೋಮಾಂಸವಿರುವ ಪ್ಲೇಟ್ ಕಾಣುತ್ತಿಲ್ಲ. ವೈರಲ್ ಚಿತ್ರ ಮತ್ತು ಮೂಲ ಛಾಯಾಚಿತ್ರದ ನಡುವಿನ ಹೋಲಿಕೆಯನ್ನು ಇಲ್ಲಿ ನೋಡಬಹುದು.

ಸೆಪ್ಟೆಂಬರ್ 17, 2022 ರಂದು ಪ್ರಕಟವಾದ ಮೂಲ ಛಾಯಾಚಿತ್ರವನ್ನು ಹೊಂದಿರುವ ಕೇರಳ ಕೌಮುದಿ ಲೇಖನವನ್ನು ಸಹ ನಾವು ಕಂಡುಕೊಂಡಿದ್ದೇವೆ. ಕೇರಳದ ವಲ್ಲಿಕೆಜುನಲ್ಲಿ ನಡೆದ ಕಾಂಗ್ರೆಸ್‌ನ ರಾಷ್ಟ್ರವ್ಯಾಪಿ ಪಾದಯಾತ್ರೆಯ ರ್ಯಾಲಿ ‘ಭಾರತ್ ಜೋಡೋ ಯಾತ್ರೆ’ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಸಣ್ಣ ಸ್ಟಾಲ್‌ಗೆ ಭೇಟಿ ನೀಡಿದ ಸಂದರ್ಭದ ಬಗ್ಗೆ ವರದಿ ಮಾಡಿದೆ.

ಯಾತ್ರೆಯ ನಡುವೆ ಕ್ಯಾಂಟಿನ್‌ವೊಂದಕ್ಕೆ ಪ್ರವೇಶಿಸಿದ ರಾಹುಲ್, ಸ್ಟಾಲ್‌ನ ಮಾಲೀಕರಿಗೆ ಆಶ್ಚರ್ಯವಾಗುವಂತೆ ಇದ್ದಕ್ಕಿದ್ದಂತೆ ಒಳಗೆ ಹೋಗಿದ್ದಾರೆ.  ಕಾಂಗ್ರೆಸ್ ನಾಯಕರಿಗೆ ಪೊರೊಟಾ ಮತ್ತು ಬಿಸ್ಕೆಟ್‌ ಮತ್ತು ಬ್ಲ್ಯಾಕ್ ಟೀ ನೀಡಿದ್ದಾರೆ. ರಾಹುಲ್ ಪರೋಟದೊಂದಿಗೆ ಕಪ್ಪು ಚಹಾ ಸೇವಿಸಿ, ಸ್ಟಾಲ್ ಮಾಲೀಕರ ಕುಟುಂಬ ಸದಸ್ಯರೊಂದಿಗೆ ಫೋಟೋಗಳನ್ನು ತೆಗೆದುಕೊಂಡ ನಂತರ ತಮ್ಮ ಪ್ರಯಾಣವನ್ನು ಮುಂದುವರೆಸಿದ್ದಾರೆ ಎಂದು ವರದಿಯಾಗಿದೆ. ಆದರೆ ಅಲ್ಲಿ ಗೋಮಾಂಸವನ್ನು ಸೇವಿಸಿಲ್ಲ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ರಾಹುಲ್ ಗಾಂಧಿ ತಮ್ಮ ಪ್ರಯಾಣದ ವೇಳೆ ಗೋಮಾಂಸ ಸೇವಿಸಿದ್ದಾರೆ ಎಂದು ಹೇಳಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಎಡಿಟ್ ಮಾಡಿದ ಪೋಟೋವನ್ನು ಹಂಚಿಕೊಂಡು, ಗೋಮಾಂಸ ಸೇವಿಸಿದ್ದಾರೆ ಎಂದು ತಪ್ಪಾಗಿ ಪ್ರಸಾರ ಮಾಡಿದ್ದಾರೆ. ಮತ್ತೊಂದು ಮುಖ್ಯ ವಿಷಯ ಏನೆಂದರೆ ಪ್ರತಿಯೊಬ್ಬರ ಆಹಾರ ವಯಕ್ತಿಕ ಆಯ್ಕೆಯಾಗಿದ್ದು,ಅದನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂದು ಭಾರತದ ಸಂವಿಧಾನ ಹೇಳುತ್ತದೆ. ಅಲ್ಲದೆ ಕೇರಳ ದನದ ಮಾಂಸದ ಖಾದ್ಯಕ್ಕೆ ಹೆಸರುವಾಸಿಯಾಗಿದ್ದು ಒಂದು ವೇಳೆ ರಾಹುಲ್ ಗಾಂಧಿ ಅದನ್ನು ಸೇವಿಸಿದರೆ ತಪ್ಪೇನು ಎಂದು ಕಾಂಗ್ರೆಸ್‌ ಬೆಂಬಲಿಗರು ಕಮೆಂಟ್‌ ಮಾಡಿದ್ದಾರೆ.

ಕೃಪೆ : ಬೂಮ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಬಾಬಾ ರಾಮ್‌ದೇವರ ಪತಂಜಲಿಯಲ್ಲೂ ಬಂತೆ ಬೀಫ್ ಬಿರಿಯಾನಿ ರೆಸಿಪಿ ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights