ಶೋಚನೀಯ ಸ್ಥಿತಿಯಲ್ಲಿ 2 ಕುಟುಂಬ : ಏಳು ವರ್ಷದಿಂದ 13 ಜನ ಶೌಚಾಲಯದಲ್ಲಿ ವಾಸ…!

ಮೈಸೂರಿನಲ್ಲಿ ಮನೆ ಇಲ್ಲದೆ ಶೋಚನೀಯ ಸ್ಥಿತಿಯಲ್ಲಿರುವ ಎರಡು ಕುಟುಂಬ ಶೌಚಾಲಯದಲ್ಲಿ ವಾಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಹೌದು… ಮೈಸೂರಿನ ರಾಜೇಂದ್ರ ನಗರದ ಕುರಿ‌ಮಂಡಿ ಎ ಬ್ಲಾಕ್ ನಲ್ಲಿರುವ ಶೌಚಾಲಯದಲ್ಲಿ 13 ಮಂದಿಯ ಎರಡು ಕುಟುಂಬ ವಾಸವಾಗಿದ್ದಾರೆ. ಕಳೆದ ಏಳು ವರ್ಷದಿಂದ ಶೌಚಾಲಯವೆ ಇವರ ವಾಸದ ಮನೆಯಾಗಿ ಹೋಗಿದೆ.

ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಇದ್ದ ಗುಡಿಸಲು ಖಾಲಿ‌ ಮಾಡಿಸಿದ್ದರು. ನಂತರ ಸ್ಥಳವಿಲ್ಲದೆ ಅನಿರ್ವಾಯವಾಗಿ ಕುಟುಂಬ ಶೌಚಾಲಯವನ್ನೆ ಮನೆ ಮಾಡಿಕೊಂಡಿದೆ.
ಶೌಚಾಲಯದಲ್ಲಿ ಮನೆಯಲ್ಲಿ ಒಂದೂವರೆ ತಿಂಗಳ ಮಗುವಿನಿಂದ 95 ವರ್ಷದ ವೃದ್ದೆವರೆಗು ಜೀವನ ಮಾಡುತ್ತಿದ್ದಾರೆ. ಊಟ, ತಿಂಡಿ ಜೀವನವೇಲ್ಲ ಶೌಚಾಲಯದಲ್ಲೆ. ಅಧಿಕಾರಿಗಳಿಗೆ ಮನವಿ ಮಾಡಿದ್ರು ಇನ್ನು ಸೂರು ಸಿಕ್ಕಿಲ್ಲ. ಸೂರಿಗಾಗಿ ಪರದಾಡುತ್ತಿರುವ ಕುಟುಂಬ ಶೌಚಾಲಯದಲ್ಲೆ ಜೀವನ ಮಾಡುತ್ತಿದೆ.

ಸುದ್ದಿ ಬಿತ್ತರವಾದ ಒಂದೆ ಗಂಟೆಯಲ್ಲಿ ಬಡಕುಟುಂಬಗಳಿಗೆ ಶೌಚಾಲಯದಿಂದ ಮುಕ್ತಿ‌ ನೀಡಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮುಂದಾಗಿದ್ದಾರೆ. ಸ್ಥಳಿಯ ಕಾರ್ಪೋರೆಟರ್ ಹಾಗೂ ಪಾಲಿಕೆ‌ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಶೌಚಾಲಯದಲ್ಲೆ ವಾಸಿಸುತ್ತಿದ್ದ ಕುಟುಂಬಗಳ ಜೊತೆ ಮಾತನಾಡಿ ಪಕ್ಕದಲ್ಲೆ ಇರುವ ಸ್ಥಳಿಯ ಗುಡಿಸಲುಗಳಿಗೆ ಸ್ಥಳಾಂತರಕ್ಕೆ ಭರವಸೆ ನೀಡಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights